Headlines

Techie Found dead ಪ್ರೀತಿಸಿ ಮದ್ವೆಯಾದ ಒಂದೂವರೆ ತಿಂಗಳಿಗೆ ಟೆಕ್ಕಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ ಇಶಿತಾ ಸಾವು | Newly Married Female Techie Found Dead In Apartment Hyderbad Suspect Dowry Demand

Techie Found dead ಪ್ರೀತಿಸಿ ಮದ್ವೆಯಾದ ಒಂದೂವರೆ ತಿಂಗಳಿಗೆ ಟೆಕ್ಕಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ ಇಶಿತಾ ಸಾವು | Newly Married Female Techie Found Dead In Apartment Hyderbad Suspect Dowry Demand



Techie Found dead ಪ್ರೀತಿಸಿ ಮದ್ವೆಯಾದ ಒಂದೂವರೆ ತಿಂಗಳಿಗೆ ಟೆಕ್ಕಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ ಇಶಿತಾ ಸಾವು | Newly Married Female Techie Found Dead In Apartment Hyderbad Suspect Dowry Demand

ಪ್ರೀತಿಸಿ ಮದ್ವೆಯಾದ ಒಂದೂವರೆ ತಿಂಗಳಿಗೆ ಟೆಕ್ಕಿ ಶವವಾಗಿ ಪತ್ತೆ, ಅನುಮಾನ ಮೂಡಿಸಿದ ಇಶಿತಾ ಸಾವು, ಇವರ ಪ್ರೀತಿಗೆ ಪೋಷಕರು ಬೆಂಬಲ ನೀಡಿದ್ದರು. ಆದರೆ ಇದೀಗ ದಿಢೀರ್ ಸಾವು ಆಘಾತ ಜೊತೆಗೆ ಕೆಲ ಅನುಮಾನಕ್ಕೆ ಕಾರಣಾಗಿದೆ. 

ಹೈದರಾಬಾದ್ (ಏ.02) ಸೋಶಿಯಲ್ ಮೀಡಿಯಾ ಮೂಲಕ ಆರಂಭವಾದ ಸ್ನೇಹ ಪ್ರೀತಿಯಾಗಿ ತಿರುಗಿತ್ತು. ನೀರಜ್ ಬನ್ಸಾಲ್ ಹಾಗೂ ಇಶಿತಾ ಯಾದವ್ ಇಬ್ಬರು ಸಾಫ್ಟ್‌ವೇರ್ ಎಂಜಿನೀಯರ್ಸ್, ಇತ್ತ ಮನೆಯಲ್ಲಿ ಹೇಳಿದಾಗ ಮಕ್ಕಳ ಪ್ರೀತಿಗೆ ಪೋಷಕರು ಅಡ್ಡಿಯಾಗಲಿಲ್ಲ. ಫೆಬ್ರವರಿ 20 ರಂದು ಅದ್ಧೂರಿಯಾಗಿ ಮದುವೆಯೂ ನಡೆದಿತ್ತು. ಮದುವೆ ಬಳಿಕ ಹೈದರಾಬಾದ್‌ಗೆ ಸ್ಥಳಾಂತರಗೊಂಡಿದ್ದ ಈ ಜೋಡಿ ಬಾಳಕ್ಕೆ ಆಘಾತ ಎದುರಾಗಿದೆ. ಇದೀಗ ಇಶಿತಾ ಬದುಕು ಅಂತ್ಯಗೊಳಿಸಿದ್ದಾಳೆ. ಇಶಿತಾ ಪೋಷಕರು ಪ್ರೀತಿಸಿ ಮದುವೆಯಾದ ನೀರಜ್ ಬನ್ಸಾಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಹೈದರಾಬಾದ್‌ನ ಮೀಯಪುರ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಇಶಿತಾ ಯಾದವಾ ಶಶವಾಗಿ ಪತ್ತೆಯಾಗಿದ್ದಾಳೆ. ಇಬ್ಬರು ಹೈದರಾಬಾದ್ ಟೆಕ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮನೆಯ ಹಾಲ್‌ನಲ್ಲಿ ಇಶಿತಾ ದುರಂತ ಅಂತ್ಯಕಂಡಿದ್ದಾಳೆ. ಇಶಿತಾ ಶವವಾಗಿರುವುದು ನೋಡಿ ಪತಿ ನೀರಜ್ ಬನ್ಸಾಲ್ ಆಘಾತಗೊಂಡಿದ್ದಾನೆ. ಇತ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಾಹಿತಿ ತಿಳಿದು ಪೋಷಕರು ಹೈದರಾಬಾದ್‌ಗೆ ಆಗಮಿಸಿದ್ದಾರೆ.

2020ರಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಭೇಟಿ

2020ರಲ್ಲಿ ಇಶಿತಾ ಹಾಗೂ ನೀರಜ್ ಸೋಶಿಯಲ್ ಮೀಡಿಯಾ ಮೂಲಕ ಭೇಟಿಯಾಗಿದ್ದರು. ಬಳಿಕ ಚಾಟಿಂಗ್, ಮೆಸೇಜ್ ಮೂಲಕ ಆತ್ಮೀಯರಾಗಿದ್ದರು. ಇಶಿತಾ ಯಾದವ್ ಬಿಹಾರ ಮೂಲದವರಾಗಿದ್ದರೆ, ನೀರಜ್ ಮಧ್ಯಪ್ರದೇಶ ಮೂಲದವರು. ಇವರಿಬ್ಬರ ಪ್ರೀತಿ ಭರ್ಜರಿ ಐದು ವರ್ಷಗಳ ಕಾಲ ಸಾಗಿತ್ತು. ಬಳಿಕ ಇಬ್ಬರು ಮನೆಯವರಲ್ಲಿ ಪ್ರೀತಿ ಹೇಳಿಕೊಂಡಿದ್ದರು. ಮಕ್ಕಳ ಪ್ರೀತಿಗೆ ಪೋಷಕರು ಅಡ್ಡಿಯಾಗಲಿಲ್ಲ. ಫೆಬ್ರವರಿ 20 ರಂದು ಪಾಟ್ನಾದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು.

ನಿಶಿತಾ ಯಾದವ್ ಪೋಷಕರಿಂದ ಗಂಭೀರ ಆರೋಪ

ನಿಶಿತಾ ಯಾದವ್ ಪೋಷಕರು ಮಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಇದೇ ವೇಳೆ ನೀರಜ್ ಬನ್ಸಾಲ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ವರದಕ್ಷಿಣೆ ವಿಚಾರವಾಗಿ ಇಬ್ಬರಲ್ಲೂ ಜಗಳವಾಗಿತ್ತು. ಮದುವೆಗೆ ನಮ್ಮ ಕೈಲಾದಷ್ಟು ನಾವು ಮಾಡಿದ್ದೇವೆ. ಆದರೆ ಮತ್ತಷ್ಟು ಹಣ ತರುವಂತೆ ಮಗಳ ಮೇಲೆ ಕಿರುಕುಳ ನೀಡಿದ್ದ. ಇದೇ ಕಾರಣದಿಂದ ಆಕೆ ದುರಂತ ಅಂತ್ಯಕಂಡಿದ್ದಾಳೆ. ನೀರಜ್ ಇತ್ತೀಚೆಗೆ ಸ್ಟಾರ್ಟ್ ಅಪ್ ಕಂಪನಿ ಆರಂಭಿಸಿದ್ದ. ಇದಕ್ಕೆ ನಾವು ಹಣ ಹೂಡಿಕೆ ಮಾಡಿದ್ದೇವೆ. ಮಗಳ ಜೀವನ ಚೆನ್ನಾಗಿರಲಿ ಎಂದು ಮಾಡಿದ್ದೇವೆ. ಇಲ್ಲಾ ಎಂದರೆ ಮಗಳ ಮೇಲೆ ದ್ವೇಷ ತೀರಿಸಿದರೆ ಸಮಸ್ಯೆಯಾಗಲಿದೆ ಎಂದು ಸಾಲ ಮಾಡಿ ಹೂಡಿಕೆ ಮಾಡಿದ್ದೇವೆ ಎಂದು ನಿಶಿತಾ ಪೋಷಕರು ಆರೋಪಿಸಿದ್ದಾರೆ.



Source link

Leave a Reply

Your email address will not be published. Required fields are marked *