ರೀಲ್ಸ್​ ಹುಚ್ಚಿನ ಪರಮಾವಧಿ: ಪಿಜ್ಜಾ ಬಾಯ್​ಗೆ ಟಿಪ್ಸ್​ ಎಂದು ಅಂಗಾಂಗ ತೋರಿ ಯುವತಿಯರ ವಿಡಿಯೋ | Crossed The Line Into Inappropriate Behavior By Ladies With Pizza Delivery Boy Suc

ರೀಲ್ಸ್​ ಹುಚ್ಚಿನ ಪರಮಾವಧಿ: ಪಿಜ್ಜಾ ಬಾಯ್​ಗೆ ಟಿಪ್ಸ್​ ಎಂದು ಅಂಗಾಂಗ ತೋರಿ ಯುವತಿಯರ ವಿಡಿಯೋ | Crossed The Line Into Inappropriate Behavior By Ladies With Pizza Delivery Boy Suc



ರೀಲ್ಸ್​ ಹುಚ್ಚಿನ ಪರಮಾವಧಿ: ಪಿಜ್ಜಾ ಬಾಯ್​ಗೆ ಟಿಪ್ಸ್​ ಎಂದು ಅಂಗಾಂಗ ತೋರಿ ಯುವತಿಯರ ವಿಡಿಯೋ | Crossed The Line Into Inappropriate Behavior By Ladies With Pizza Delivery Boy Suc

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚಿಗೆ ಬಿದ್ದ ಯುವತಿಯರು ಪಿಜ್ಜಾ ಡೆಲಿವರಿ ಹುಡುಗನಿಗೆ ಪ್ರಾಂಕ್ ಮಾಡಿದ್ದಾರೆ. ಟಿಪ್ಸ್ ಕೊಡುವ ನೆಪದಲ್ಲಿ ತಮ್ಮ ಅಂಗಾಂಗ ಪ್ರದರ್ಶನ ಮಾಡಿದ್ದು, ಈ ವಿಡಿಯೋ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆದರೂ, ಈ ಮೂಲಕ ಹೆಚ್ಚು ವೀಕ್ಷಣೆ ಪಡೆದು ತಮ್ಮ ಉದ್ದೇಶವನ್ನು ಯುವತಿಯರು ಸಾಧಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಲೈಕ್ಸ್​, ಕಮೆಂಟ್ಸ್​ ಹುಚ್ಚಿಗೆ ಯುವ ಸಮುಹ ಯಾವ ಹಂತಕ್ಕೆ ಬೇಕಾದರೂ ಹೋಗುವುದು ಇದಾಗಲೇ ಸಾಕಷ್ಟು ಸುದ್ದಿಯಾಗುತ್ತಿದೆ. ಕೆಲವರು ರೀಲ್ಸ್​ ಹುಚ್ಚಿಗಾಗಿ ಪ್ರಾಣವನ್ನೂ ಪಣಕ್ಕೆ ಇಟ್ಟವರು ಇದ್ದಾರೆ, ಕೆಲವರು ಸತ್ತೇ ಹೋಗಿದ್ದಾರೆ. ಬೈಕ್​ಗಳಲ್ಲಿ ಸ್ಟಂಟ್​, ಬೆಟ್ಟದ ತುದಿಯಿಂದ ಉರುಳುವುದು, ಹಗ್ಗ ಕಟ್ಟಿಕೊಂಡು ಸ್ಟಂಟ್​, ಹೀಗೆ ಏನೇನೋ ಮಾಡುವ ಮೂಲಕ ಪ್ರಾಣವನ್ನೂ ಕಳೆದುಕೊಂಡ ದೊಡ್ಡ ವರ್ಗವೇ ಇದೆ. ಒಟ್ಟಿನಲ್ಲಿ ಲೈಕ್ಸ್​ ಬರಬೇಕು, ಸೋಷಿಯಲ್ ಮೀಡಿಯಾದಿಂದ ಫೇಮಸ್​ ಆಗಬೇಕು. ಹಣ ಗಳಿಕೆ ಮಾಡಬೇಕು ಎನ್ನುವುದು ಒಂದೇ ಉದ್ದೇಶ.

ಅಂಗಾಂಗ ಪ್ರದರ್ಶನ

ಇನ್ನು ಕೆಲವು ಯುವತಿಯರಂತೂ ನಟಿಯರಂತೆ ತಾವೂ ಫೇಮಸ್​ ಆಗಬೇಕು ಎನ್ನುವ ಕಾರಣಕ್ಕೆ ಇನ್​ಸ್ಟಾಗ್ರಾಮ್​ನಲ್ಲಿ ಯಾವುದೇ ನಿಯಮಗಳು ಇಲ್ಲದ ಹಿನ್ನೆಲೆಯಲ್ಲಿ ತಮ್ಮ ಅಂಗಾಂಗಗಳನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕ ವ್ಯೂವ್ಸ್​ ಪಡೆದುಕೊಳ್ಳುತ್ತಿದ್ದಾರೆ. ಇಂಥವರಿಗಾಗಿ ಕಾಯುವ ದೊಡ್ಡ ವರ್ಗವೂ ಇದೆ. ಟ್ರೋಲ್ ಮಾಡಿದರೆ ಅದರಿಂದ ಫೇಮಸ್​ ಆಗುವುದನ್ನು ತಿಳಿದೇ ಇಂಥ ಯುವತಿಯರು ಅಂಥ ವಿಡಿಯೋ ಮಾಡಿದರೆ ಅದನ್ನು ಜೊಲ್ಲು ಸುರಿಸಿಕೊಂಡು ನೋಡಿ, ಡಿಕ್ಷನರಿಯಲ್ಲಿ ಇಲ್ಲದ ಕೆಟ್ಟ ಪದಗಳಿಂದ ಅಶ್ಲೀಲ ಪದಗಳಿಂದ ಕಮೆಂಟ್​ ಮಾಡಿ ಟ್ರೋಲ್​ ಮಾಡಿದರೆ, ವಿಡಿಯೋ ಹಾಕಿದವರಿಗೆ ಅದೇ ಬಂಡವಾಳ.

ನೆಟ್ಟಿಗರು ಕಿಡಿ

ಇಂಥ ಯುವತಿಯರು ಅತಿ ದೊಡ್ಡ ಅಪಾಯ ಎಂದು ಇದಾಗಲೇ ಸಾಕಷ್ಟು ಮಂದಿ ಹೇಳುತ್ತಿರುವುದು ಒಂದೆಡೆಯಾದರೆ, ಇದೀಗ ಇಂಥದ್ದೇ ಭಯಾನಕ ವಿಡಿಯೋ ಒಂದು ವೈರಲ್​ ಆಗಿದೆ. ಇಲ್ಲಿ ಕೂಡ ಯುವತಿಯರು ರೀಲ್ಸ್ ಮಾಡಿದ್ದಾರೆ. ಅದೇನೆಂದರೆ, ಪಿಜ್ಜಾ ಡೆಲವರಿಗೆ ಬರುವ ಹುಡುಗನಿಗೆ ಟಿಪ್ಸ್​ ನೀಡಬೇಕಲ್ಲ, ಅದಕ್ಕಾಗಿ ತಾವು ಪ್ರಾಂಕ್​ ಮಾಡುತ್ತೇವೆ ಎಂದು ಹೇಳಿರೋ ಹುಡುಗಿಯರು ಆತ ಬಂದ ಮೇಲೆ ಪಿಜ್ಜಾ ಪಡೆದು ಥ್ಯಾಂಕ್ಯೂ ಹೇಳಿ, ಟಿಪ್ಸ್​ ತಗೋ ಎಂದು ಇಬ್ಬರೂ ತಮ್ಮ ಷರ್ಟ್​ ಬಿಚ್ಚಿ ಅವನಿಗೆ ತೋರಿಸಿದ್ದಾರೆ. ಅವನು ಮತ್ತೊಮ್ಮೆ ಕೇಳಿದಾಗ, ಮತ್ತೊಮ್ಮೆ ಬಿಚ್ಚಿ ತೋರಿಸಿದ್ದಾರೆ.

ಇಷ್ಟಾರ್ಥ ಸಿದ್ಧಿ

ಅವರು ತುಂಬಾ ಚೆನ್ನಾಗಿದೆ ಎಂದು ಕೈಸನ್ನೆ ಮೂಲಕ ತೋರಿಸಿದ್ದಾನೆ. ತಾವು ಪ್ರಾಂಕ್​ ಮಾಡಿದ್ವಿ ಎಂದು ಇತ್ತ ಇರುವ ಕ್ಯಾಮೆರಾಗೆ ಪೋಸ್​ ಕೊಟ್ಟು ಆ ಯುವತಿ ಹೇಳುತ್ತಿದ್ದಾಳೆ. ಕೊನೆಗೆ ಆತನಿಗೆ ತಮ್ಮ ಇನ್​ಸ್ಟಾಗ್ರಾಮ್​ ಐಡಿಯನ್ನೂ ಕೊಟ್ಟು ಅವನನ್ನು ಖುಷಿ ಪಡಿಸಿ ಕಳುಹಿಸಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಲೇ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗಿದೆ. ಹಲವರು ಇದನ್ನು ಬಾಯಿ ಚಪ್ಪರಿಸಿಕೊಂಡು ನೋಡಿದ್ದಾರೆ. ಒಟ್ಟಿನಲ್ಲಿ ಟ್ರೋಲ್​ ಆಗುತ್ತಲೇ ಈ ವಿಡಿಯೊ ಹಲವರು ವೀಕ್ಷಿಸುವ ಮೂಲಕ ಆ ಯುವತಿಯರು ತಮ್ಮ ಇಷ್ಟಾರ್ಥವನ್ನು ಸಿದ್ಧಿಸಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *