
ಇರಾನ್ನ ಸರ್ವೋಚ್ಛ ನಾಯಕ ಅಲಿ ಖಮೇನಿ ಹತ್ಯೆಯ ಬಳಿಕ ಇಸ್ಮಾಯಿಲ್ ಖಾನಿ ಹೆಸರು ಮುನ್ನೆಲೆಗೆ ಬಂದಿದೆ. 9 ನಾಯಕರ ಹತ್ಯೆಯಾದಾಗಲೂ ಅವರ ಸಮೀಪವೇ ಇದ್ದು ಬದುಕುಳಿದಿದ್ದ ಇವರು, ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದು, ಗಲ್ಲುಶಿಕ್ಷೆ ವಿಧಿಸಲಾಗಿದೆ ಎನ್ನಲಾಗುತ್ತಿದೆ.
ಇಸ್ಮಾಯಿಲ್ ಖಾನಿ (Esmail Qaani), ಇರಾನ್ ಸರ್ವೋಚ್ಛ ನಾಯಕ ಅಲಿ ಖಮೇನಿ ಹತ್ಯೆಯ ಬಳಿಕ ಭಾರಿ ಕೇಳಿಬರುತ್ತಿರುವ ಹೆಸರು ಇವರದ್ದು! ಇರಾನ್, ಇಸ್ರೇಲ್ ಯುದ್ಧದಲ್ಲಿ ಇವರ ಪಾತ್ರ ಬಹುಮುಖ್ಯ ಎನ್ನಲಾಗುತ್ತಿದೆ. ಇವರು ಪಕ್ಕದಲ್ಲಿ ಇದ್ದಾಗಲೆಲ್ಲಾ 9 ಮಂದಿ ನಾಯಕರು ಉಡೀಸ್ ಆಗಿದ್ದು, ಇವರು ಮಾತ್ರ ತಪ್ಪಿಸಿಕೊಂಡಿದ್ದರು! ಇರಾನ್ ನಾಯಕರ ಹತ್ತಿರವೇ ಇದ್ದುಕೊಂಡು, ಎಲ್ಲಾ ಒಳಗುಟ್ಟುಗಳನ್ನು ತಿಳಿದುಕೊಂಡು ಇರಾನ್ನ ಇಂದಿಗೆ ಸ್ಥಿತಿಗೆ ಕಾರಣವಾಗಿರುವವ ಇವರೇ ಎನ್ನುವ ಸಂಶಯ ಇದೀಗ ಬಹಳ ಕೇಳಿಬರುತ್ತಿದ್ದು, ಇದರ ನಡುವೆಯೇ ಬಂಧನಕ್ಕೂಒಳಗಾಗಿದ್ದರು. ಇದೀಗ ಗಲ್ಲುಶಿಕ್ಷೆಯನ್ನೂ ವಿಧಿಸಲಾಗಿದೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ!
ಇಸ್ರೇಲ್ ಪರವಾಗಿ ಬೇಹುಗಾರಿಕೆ?
ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬ್ರಿಗೇಡಿಯರ್ ಜನರಲ್ ಅವರನ್ನು ಗಲ್ಲಿಗೆ ಏರಿಸಲಾಗಿದೆ ಎಂದೇ ಹೇಳಲಾಗುತ್ತಿದೆ. ಟೆಹ್ರಾನ್ ಈ ವರದಿಯನ್ನು ಇನ್ನೂ ದೃಢಪಡಿಸಿಲ್ಲವಾದರೂ ನಿನ್ನೆ ಇವರನ್ನು ಬಂಧಿಸಿದ ಬೆನ್ನಲ್ಲೇ ಇಂಥದ್ದೊಂದು ಸುದ್ದಿಗಳು ಕೇಳಿಬರುತ್ತವೆ. ಅಷ್ಟಕ್ಕೂ ಒಂದೇ ದೇಶದಲ್ಲಿ ಬೇಹುಗಾರಿಕೆ ಮಾಡಲು ಇನ್ನೊಂದು ದೇಶದಿಂದ ರಾ ಏಜೆಂಟ್ ಆಗಿ ಹೋಗುವುದು ಹೊಸ ವಿಷಯವೇನಲ್ಲ. ಅಲ್ಲಿಯೇ ಇದ್ದುಕೊಂಡು ಅವರಲ್ಲಿಯೇ ಒಬ್ಬರಾಗಿ ಒಳಗುಟ್ಟುಗಳನ್ನು ತಿಳಿದುಕೊಂಡು ತಮ್ಮ ದೇಶಕ್ಕೆ ರವಾನೆ ಮಾಡುವುದು ಬಹುತೇಕ ಎಲ್ಲಾ ದೇಶಗಳಲ್ಲಿಯೂ ಇದೆ. ಪಾಕಿಸ್ತಾನದಲ್ಲಿ ಎಷ್ಟೋ ವರ್ಷಗಳವರೆಗೆ ಅಲ್ಲಿಯವರೇ ಆಗಿದ್ದ ಅಜಿತ್ ಧೋವಲ್ ಇದಕ್ಕೆ ತಾಜಾ ಉದಾಹರಣೆ. ಸಿಕ್ಕಿ ಬೀಳದ ಚಾಣಾಕ್ಷ್ಯತನ ಅವರಲ್ಲಿ ಇರಬೇಕಷ್ಟೇ.
ಖಮೇನಿ ಫೋಟೋ ರವಾನೆ
ಆದರೆ, ಇರಾನ್ನಲ್ಲಿ ಆಗಿದ್ದೇ ಬೇರೆ. ಇಸ್ಮಾಯಿಲ್ ಖಾನಿ ಅವರ ಮೇಲೆ ಬಲವಾದ ಸಂಶಯ ಬರಲು ಕಾರಣ ಏನೆಂದರೆ, ಯಾವ 9 ಮಂದಿ ಮಹಾ ನಾಯಕರು ಇರಾನ್ನಲ್ಲಿ ಸಾವನ್ನಪ್ಪಿದರೋ ಅವರ ಸಮೀಪವೇ ಈ ಇಸ್ಮಾಯಿಲ್ ಇರುತ್ತಿದ್ದರು. ಇವರು ಅಲ್ಲಿಂದ ಅತ್ತ ಹೋಗುತ್ತಿದ್ದಂತೆಯೇ ಇತ್ತ ನಾಯಕರನ್ನು ಸಾಯಿಸಲಾಗುತ್ತಿತ್ತು. ಅಷ್ಟೇ ಅಲ್ಲದೇ, ಅಲಿ ಖಮೇನಿ ಸತ್ತಾಗ ಅದರ ಫೋಟೋ ಇಸ್ರೇಲ್ಗೆ ಕಳುಹಿಸಿದವರು ಯಾರು ಎನ್ನುವ ಬಗ್ಗೆ ಪತ್ತೆ ಹಚ್ಚಿದಾಗ ಇವರು ಬೆಳಕಿಗೆ ಬಂದಿದ್ದರು!
ಹಲವು ಬಾರಿ ಸತ್ತಿದ್ದ ಇಸ್ಮಾಯಿಲ್!
ಈಗಿನ ಇರಾನ್ ಯುದ್ಧದಲ್ಲಿ ಮಾತ್ರಲವಲ್ಲದೇ, ಇದೀಗ ತನಿಖೆ ಮಾಡಿದಾಗ, ಹಲವಾರು ಯುಎಸ್-ಇಸ್ರೇಲಿ ದಾಳಿಗಳಲ್ಲಿ ಕೊಲ್ಲಲ್ಪಟ್ಟ ಹಲವಾರು ವ್ಯಕ್ತಿಗಳ ಜೊತೆ ಇಸ್ಮಾಯಿಲ್ ಇರುವುದು ತಿಳಿದು ಬಂದಿದ್ದರಿಂದ ಅನುಮಾನಗಳು ಹೆಚ್ಚಾದವು. ಅಕ್ಟೋಬರ್ 2024 ರಲ್ಲಿ, ಇವರು ಸತ್ತುಹೋದರು ಎಂದು ಘೋಷಿಸಲಾಗಿತ್ತು. ನಂತರ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. 2025 ರಲ್ಲಿ, 12 ದಿನಗಳ ಯುದ್ಧದ ಸಮಯದಲ್ಲಿ, ಹಲವಾರು ಮಾಧ್ಯಮಗಳು ಈತ ಸತ್ತನೆಂದು ಘೋಷಿಸಿದ್ದವು. ನಂತರ ಮತ್ತೆ ರಾಷ್ಟ್ರೀಯ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಮೊಸಾದ್ ನೇಮಕ ಮಾಡಿಕೊಂಡ ಆಂತರಿಕ ಏಜೆಂಟ್ ಈತ ಎನ್ನುವುದು ದೃಢಪಟ್ಟಿದೆ. ಅಷ್ಟಕ್ಕೂ, 2025 ರಲ್ಲಿ, ಮೊಸಾದ್ ಜನರಲ್ ನಡೆಸಿದ ರಹಸ್ಯ ಸಭೆಯ ಫೋಟೋವನ್ನು ಗುರುತನ್ನು ಮರೆಮಾಡಿದ ವ್ಯಕ್ತಿಯೊಂದಿಗೆ ಪ್ರಕಟಿಸಿತು. ಅದು ಈತನದ್ದೇ ಎನ್ನುವ ಸಂಶಯ ಬಲವಾಯಿತು.