
Ram Charan Spirituality: ಸಿನಿಮಾದಲ್ಲಿ ಯಶಸ್ಸು, ಮುದ್ದಾದ ಕುಟುಂಬ, ಕೂತು ತಿನ್ನುವಷ್ಟು ಆಸ್ತಿ ಇರುವ ನಟ ರಾಮ್ ಚರಣ್ ತೇಜ ಅವರು ವರ್ಷದಲ್ಲಿ 100 ದಿನ ಒಂದೊಂದು ದೇವರ ಹೆಸರಿನಲ್ಲಿ ಮಾಲೆ ಧರಿಸುತ್ತಾರೆ, ಚಪ್ಪಲಿ ಹಾಕೋದಿಲ್ಲ. ಇದರ ಹಿಂದಿನ ಕಾರಣ ಏನು? ಈ ಬಗ್ಗೆ ಪವನ್ ಕಲ್ಯಾಣ್ ಮಾತನಾಡಿದ್ದಾರೆ.
ರಾಮ್ ಚರಣ್ ತೇಜ ಎಂದರೆ ರಾಮನ ಭಕ್ತ ಹನುಮಂತ ಎಂದರ್ಥ ಎಂದು ಸ್ವತಃ ನಟ ರಾಮ್ ಚರಣ್ ತೇಜ ಅವರೇ ಈ ಹಿಂದೆ ಹೇಳಿದ್ದರು. ಸಿನಿಮಾದಲ್ಲಿ ಬ್ಯುಸಿ ಇರುವ ಈ ನಟ ಆಗಾಗ ಅಯ್ಯಪ್ಪ ಸ್ವಾಮಿ ಮಾಲೆ, ಆಂಜನೇಯ ಸ್ವಾಮಿ ಮಾಲೆ ಎಂದು ವ್ರತ ಮಾಡುತ್ತಾರೆ. ಇದರ ಹಿಂದಿನ ಕಾರಣ ಏನು ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಅಣ್ಣನ ಮಗನ ಬಗ್ಗೆ ಪವನ್ ಕಲ್ಯಾಣ್ ಮಾತು!
ಈ ಹಿಂದೆ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಸ್ವಂತ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಅವರ ಏಕೈಕ ಪುತ್ರ ರಾಮ್ ಚರಣ್ ತೇಜ ಅವರನ್ನು ಪವನ್ ಕಲ್ಯಾಣ್ ಹೊಗಳಿದ್ದಾರೆ. ಸಂಬಂಧದಲ್ಲಿ ರಾಮ್‌ಗೆ ಪವನ್ ಕಲ್ಯಾಣ್ ಅವರು ಚಿಕ್ಕಪ್ಪ ಆಗಬೇಕು. ಆದರೆ ಅವರು ಸ್ವಂತ ತಮ್ಮನ ಥರ ನೋಡ್ತಾರಂತೆ.
100 ದಿನ ಮಾಲೆ ಹಾಕ್ತಾರೆ
“ನನ್ನ ತಂದೆ ಏನು ನೆನಪಿಟ್ಟುಕೊಂಡು ಇವನಿಗೆ ರಾಮ್ ಚರಣ್ ತೇಜ ಎಂದು ಹೆಸರು ಇಟ್ಟರೋ ಏನೋ! ವರ್ಷದಲ್ಲಿ 100 ದಿನ ಆಂಜನೇಯ ಸ್ವಾಮಿ ಮಾಲಾ ಅಂತ ಹೇಳ್ತಾನೆ, ಅಯ್ಯಪ್ಪ ಸ್ವಾಮಿ ಮಾಲೆ ಅಂತಾರೆ. ಎಲ್ಲರ ಜೊತೆ ಗೌರವದಿಂದ ಇರುತ್ತಾನೆ, ತೆಲುಗಿನಲ್ಲಿ ಎಲ್ಲ ಹೀರೋಗಳಿಗೂ ಫ್ರೆಂಡ್ ಆಗಿದ್ದಾನೆ. ಅವಶ್ಯಕತೆ ಇದ್ದಾಗ ಮಾತ್ರ ಅವನು ಸೂಟ್ ಬೂಟ್ ಹಾಕ್ತಾನೆ, ಉಳಿದ ದಿನವೆಲ್ಲವೂ ಕೂಡ ಚಪ್ಪಲಿಯಲ್ಲೇ ಇರುತ್ತಾನೆ” ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಈ ರೀತಿ ಮಾಡೋದ್ಯಾಕೆ?
ಯಾಕೆ ಹೀಗೆ ಮಾಡ್ತೀಯಾ ಎಂದು ನಾನು ಅವನಿಗೆ ಕೇಳಿದೆ. ಆಗ ಅವನು ನನ್ನ ಜವಾಬ್ದಾರಿಯನ್ನು ನೆನಪಿಸಿಕೊಳ್ಳಲು, ಅಹಂಕಾರ ಬರಬಾರದು ಎಂದು ಹೀಗೆ ಮಾಡ್ತೀನಿ ಎಂದು ಹೇಳಿದ ಎಂದು ಡಿಸಿಎಂ ಪವನ್ ಕಲ್ಯಾಣ್ ಹೇಳಿದ್ದಾರೆ.
ಚಿರಂಜೀವಿ ಆಸ್ತಿ ಎಷ್ಟು?
ಚಿರಂಜೀವಿ ಅವರಿಗೆ ಮೂವರು ಮಕ್ಕಳು, ಅವರಲ್ಲಿ ಒಬ್ಬ ಮಗನೇ ರಾಮ್ ಚರಣ್ ತೇಜ. ಇವರಿಗೆ ಒಟ್ಟೂ 1650 ಕೋಟಿ ರೂಪಾಯಿ ಆಸ್ತಿ ಇದೆ. ಪತ್ನಿ ಉಪಾಸನಾ ಕೊನಿಡೆಲ ಅವರ ತಂದೆ ಮನೆಯಲ್ಲಿ ಸಿಕ್ಕಾಪಟ್ಟೆ ಆಸ್ತಿ ( ಅಪೋಲೋ ಸಮೂಹಸಂಸ್ಥೆಗಳ ಮಾಲೀಕರು ) ಇರುವುದರಿಂದ ರಾಮ್ ಚರಣ್ ಹಾಗೂ ಉಪಾಸನಾ ಆಸ್ತಿ ಮೊತ್ತವೇ 2500 ಕೋಟಿ ರೂಪಾಯಿ ಇದೆ.
ಮಕ್ಕಳು
ಉಪಾಸನಾ ಹಾಗೂ ಚರಣ್‌ಗೆ ಒಟ್ಟೂ ಮೂವರು ಮಕ್ಕಳಿವೆ. ಮೊದಲು ಮಗಳು ಹುಟ್ಟಿದ್ದು ಕ್ಲಿಂಕಾರಾ ಎಂದು ಹೆಸರು ಇಟ್ಟಿದ್ದಾರೆ. ಆ ಬಳಿಕ ಅವಳಿ ಮಕ್ಕಳು ಹುಟ್ಟಿದ್ದು, ಒಂದು ಗಂಡು, ಒಂದು ಹೆಣ್ಣು ಹುಟ್ಟಿದೆ.