ಜನವರಿ, ನವೆಂಬರ್ 24: ಅರುಣಾಚಲಪ್ರದೇಶದ ಮೂಲದ ಮಹಿಳೆಯೊಬ್ಬರನ್ನು ಚೀನಾದ ಶಾಂಘೈ ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಪೆಮ್ ವ್ಯಾಂಗ್ ಟೋಂಗ್‌ಡೋಕ್ (ಪೆಮ್ ವಾಂಗ್ ಥಾಂಗ್‌ಡಾಕ್) ಎಂಬಾಕೆ ತಮ್ಮ ಎಕ್ಸ್ ಅಕೌಂಟ್‌ನ ಸರಣಿ ಪೋಸ್ಟ್‌ಗಳನ್ನು ಹಾಕಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಾನು ಅರುಣಾಚಲಪ್ರದೇಶದಲ್ಲಿ ಜನಿಸಿರುವ ತಮ್ಮ ಭಾರತೀಯ ಪಾಸ್’ಅಸಿಂಧು ಎಂದು ಚೀನೀ ಅಧಿಕಾರಿಗಳು ಪರಿಗಣಿಸಿದ್ದಾರೆ ಎಂದು ಈ ಮಹಿಳೆ ಆರೋಪಿಸಿದ್ದಾರೆ.
ಶಾಂಘೈನ ಪುಡೋಂಗ್ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ನವೆಂಬರ್ 21 ರಂದು ಈ ಘಟನೆ ನಡೆದಿದ್ದಾಗಿ ಟಾಂಗ್ಡೋಕ್ ಹೇಳಿದ್ದಾರೆ. ಆಕೆ ಲಂಡನ್ನಿಂದ ಜಪಾನ್ಗೆ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಶಾಂಘೈ ವಿಮಾನ ನಿಲ್ದಾಣದಲ್ಲಿ 18 ಗಂಟೆಗಳ ಕಾಲ ತನ್ನನ್ನು ತಡೆದು ನಿಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅರುಣಾಚಲ ಪ್ರದೇಶ ಚೀನಾಕ್ಕೆ ಸೇರಿದ್ದು ಎಂದು ವಾದಿಸುತ್ತಿದ್ದ ಚೀನೀ ಅಧಿಕಾರಿಗಳು…
ಈ ಮಹಿಳೆ ಪ್ರಸ್ತುತ ಯುಕೆ ದೇಶದಲ್ಲಿ ವಾಸಿಸುತ್ತಿದ್ದಾರೆ. ಈಕೆ ಹುಟ್ಟಿದ್ದು ಅರುಣಾಚಲಪ್ರದೇಶದಲ್ಲಿ. ಭಾರತೀಯ ಪಾಸ್ ಪೋರ್ಟ್. ಆದರೆ, ಚೀನೀ ಅಧಿಕಾರಿಗಳ ಪ್ರಕಾರ ಅರುಣಾಚಲಪ್ರದೇಶವು ಚೀನಾಗೆ ಸೇರಿದ್ದು. ಹೀಗಾಗಿ, ಈ ಮಹಿಳೆ ಹೊಂದಿರುವ ಭಾರತೀಯ ಪಾಸ್ಪೋರ್ಟ್ ಅಸಿಂಧು ಎಂದು ಪರಿಗಣಿಸಲಾಗಿದೆ. ಆ ಘಟನೆಯನ್ನು ಸ್ಮರಿಸಿರುವ ಪೆಮ್ ವಾಂಗ್ ತೋಂಗ್ಡುಕ್, ಅರುಣಾಚಲವು ಚೀನಾಗೆ ಸೇರಿದ್ದಾ ಎಂದು ಪ್ರಶ್ನೆ ಮಾಡಲಾಗಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ 2 ಬಸ್ಸುಗಳು ಮುಖಾಮುಖಿ ಡಿಕ್ಕಿ; 6 ಸಾವು, 28 ಮಂದಿಗೆ ಗಾಯ
‘ಚೈನಾ ಈಸ್ಟರ್ನ್ ಏರ್‌ಲೈನ್ಸ್ ಮತ್ತು ಚೀನಾ ಇಮ್ಮೈಗ್ರೇಶನ್‌ನಿಂದಾಗಿ ನ. 21 ರಂದು ಶಾಂಘೈ ಏರ್‌ಪೋರ್ಟ್‌ನಲ್ಲಿ ನನ್ನನ್ನು 18 ಗಂಟೆ ಕಾಲ ತಡೆದು ನಿಲ್ಲಿಸಿದರು. ನನ್ನ ಜನ್ಮಸ್ಥಳ ಅರುಣಾಚಲಪ್ರದೇಶವಾದ್ದರಿಂದ ಭಾರತೀಯ ಪಾಸ್ಪೋರ್ಟ್ ಅನ್ನು ಅಸಿಂಧು ಎಂದು ಪರಿಗಣಿಸಲಾಗಿದೆ. ಅವರ ಪ್ರಕಾರ ಅರುಣಾಚಲವು ಚೀನಾದ ಭಾಗವಂತೆ. ಇದು ನಿಜವಾ?’ ಎಂದು ಪೆಮ್ ವಾಂಗ್ ತೋಂಗ್ಡುಕ್ ಅವರು ಅರುಣಾಚಲ ಸಿಎಂ ಪ್ರೇಮ್ ಖಂಡು, ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಪ್ರಧಾನಿ ಕಚೇರಿಗಳ ಎಕ್ಸ್ ಅಕೌಂಟ್ ಗಳನ್ನು ಟ್ಯಾಗ್ ಮಾಡಿ ಕೇಳಿದ್ದಾರೆ.
ಪೆಮ್ ವಾಂಗ್ ಅವರ ಒಂದು ಎಕ್ಸ್ ಪೋಸ್ಟ್
@ಪೇಮಖಂಡು @ಕಿರೆನ್ರಿಜುಜು @PMOIndia 21 ನವೆಂಬರ್, 2025 ರಂದು ಚೀನಾ ವಲಸೆ ಮತ್ತು ಹಕ್ಕುಗಳ ಮೇಲೆ 18 ಗಂಟೆಗಳ ಕಾಲ ನನ್ನನ್ನು ಶಾಂಘೈ ವಿಮಾನ ನಿಲ್ದಾಣದಲ್ಲಿ ಇರಿಸಲಾಗಿತ್ತು @ಚೈನಾಈಸ್ಟರ್ನೇರ್ ನನ್ನ ಜನ್ಮಸ್ಥಳ ಅರುಣಾಚಲ ಪ್ರದೇಶವಾಗಿರುವುದರಿಂದ ಅವರು ನನ್ನ ಭಾರತೀಯ ಪಾಸ್ಪೋರ್ಟ್ ಅಮಾನ್ಯ ಎಂದು ಕರೆದರು, ಅದನ್ನು ಅವರು ಚೀನಾದ ಭೂಪ್ರದೇಶ ಎಂದು ಹೇಳಿಕೊಂಡರು. @cnnbrk
— ಪೆಮ್ ವಾಂಗ್ ಥಾಂಗ್‌ಡಾಕ್ (@wang_pem) ನವೆಂಬರ್ 23, 2025
ಪೆಮ್ ವಾಂಗ್ ಟೋಂಗ್ಡೋಕ್ ಅವರು ಸುದ್ದಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಘಟನೆ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ಅದರಂತೆ, ಶಾಂಘೈ ಏರ್‌ಪೋರ್ಟ್‌ನಲ್ಲಿ ವಲಸೆ ಪ್ರಕ್ರಿಯೆ ಈ ಬಳಿಕ ಪಾಸ್‌ಪೋರ್ಟ್ ಅಧಿಕಾರಿಗಳು ಪಡೆದಿದ್ದರು. ಈಕೆ ಸೆಕ್ಯೂರಿಟಿ ಬಳಿ ಕಾಯುತ್ತಿದ್ದ ಒಬ್ಬ ಅಧಿಕಾರಿ ಬಂದು ಈಕೆಯ ಹೆಸರು ಮತ್ತು ಇಂಡಿಯಾ ಹೆಸರನ್ನು ಕಿರುಚಿ ಕರೆಯತೊಗಿದಳು.
ಬಳಿಕ ಅರುಣಾಚಲ ಮಹಿಳೆಯನ್ನು ವಲಸೆ ಫೋನ್ ಕರೆದೊಯ್ದು, ‘ಅರುಣಾಚಲವು ಚೀನಾದ ಭಾಗವಾಗಿದೆ. ನಿಮ್ಮ ಪಾಸ್‌ಪೋರ್ಟ್ ಅಸಿಂಧುವಾಗಿದೆ” ಎಂದು ಹೇಳಿದ್ದಾಳೆ. ಜಪಾನ್‌ಗೆ ಫ್ಲೈಟ್ ಹತ್ತಬೇಕಿದ್ದ ಪೆಮ್ ವಾಂಗ್ ಅವರನ್ನು ತಡೆಯಲಾಯಿತು.
ಇದನ್ನೂ ಓದಿ: ಜಿ20 ಆತಿಥ್ಯ ಇಷ್ಟು ಕಷ್ಟ ಅಂತ ಗೊತ್ತಿದ್ದರೆ ಓಡಿ ಹೋಗಬಹುದು: ಪ್ರಧಾನಿ ಮೋದಿಗೆ ತಮಾಷೆ ಮಾಡಿದ ಸೌತ್ ಆಫ್ರಿಕಾ ಅಧ್ಯಕ್ಷ
ಹೊಸದಾಗಿ ಟಿಕೆಟ್ ಖರೀದಿಸಿದರೆ ಬಿಡುವುದಾಗಿ ಹೇಳುತ್ತದೆ. ನಂತರ ತೋಂಗ್‌ಡೋಕ್ ಅವರು ತಮ್ಮ ಸ್ನೇಹಿತರೊಬ್ಬರ ಮೂಲಕ ಶಾಂಘೈನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಯನ್ನು ಸಂಪರ್ಕಿಸುವ ವಿಷಯ ತಿಳಿಸುತ್ತಾರೆ. ಭಾರತೀಯ ಅಧಿಕಾರಿಗಳು ಬಂದು ಈಕೆಯನ್ನು ಚೀನಾದಿಂದ ಹೊರಗೆ ಕಳುಹಿಸಲು ಸಹಾಯ ಮಾಡುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ