Ashes 2025: ಮೊದಲ ಟೆಸ್ಟ್​ಗೆ ಆಸ್ಟ್ರೇಲಿಯಾದ ಮೂವರು ಅಲಭ್ಯ

Ashes 2025: ಮೊದಲ ಟೆಸ್ಟ್​ಗೆ ಆಸ್ಟ್ರೇಲಿಯಾದ ಮೂವರು ಅಲಭ್ಯ


ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆಯಶಸ್ ಸರಣಿಗೆ ದಿನಗಣನೆ ಶುರುವಾಗಿದೆ. ಕಾಂಗರೂನಾಡಿನಲ್ಲಿ ನಡೆಯಲಿರುವ ಈ ಸರಣಿಯ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡದ ಮೂವರು ಹೊರಬಿದ್ದಿದ್ದಾರೆ. ಅಂದರೆ ನವೆಂಬರ್ 21 ರಂದು ನಡೆಯಲಿರುವ ಮೊದಲ ಪಂದ್ಯಕ್ಕೆ ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್ವುಡ್ ಹಾಗೂ ಶಾನ್ ಅಬಾಟ್ ಅಲಭ್ಯ.

ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಸೊಂಟದ ಮೂಳೆಯ ನೋವಿನಿಂದ ಬಳಲುತ್ತಿದ್ದಾರೆ, ಹೀಗಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಪರ್ತ್ ಟೆಸ್ಟ್ ನಲ್ಲಿ ಸ್ಟೀವ್ ಸ್ಮಿತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಮಂದಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಜೋಶ್ ಹೇಝಲ್ವುಡ್ ಕೂಡ ಪರ್ತ್‌ಗೆ ಟೆಸ್ಟ್‌ನಿಂದ ಹಿಂದೆ ಸರಿದಿದ್ದಾರೆ. ಇದಾಗ್ಯೂ ಡಿಸೆಂಬರ್ 4 ರಿಂದ ಶುರುವಾಗಲಿರುವ 2ನೇ ಪಂದ್ಯದ ವೇಳೆಗೆ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಜೊತೆಗೆ ಮತ್ತೋರ್ವ ವೇಗಿ ಶಾನ್ ಅಬಾಟ್ ಕೂಡ ಮಂದಿರಜ್ಜು ನೋವಿನ ಸಮಸ್ಯೆಗೀಡಾಗಿದ್ದರೆ, ಅವರು ಸಹ ಆಯಶಸ್ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮೈಕೆಲ್ ನೇಸರ್ ಅವರನ್ನು ಹೆಚ್ಚುವರಿ ವೇಗಿಯಾಗಿ ತಂಡಕ್ಕೆ ಸೇರಿಸಲಾಗಿದೆ.

ಇತ್ತ ಮೂವರು ಆಟಗಾರರ ಅಲಭ್ಯತೆಯ ನಡುವೆಯೂ ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಅವರೆ ಆಸ್ಟ್ರೇಲಿಯಾ ತಂಡದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಆಗಿ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಶೇನ್ ಕಾಣಿಸಿಕೊಂಡರು, ಇಂಗ್ಲೆಂಡ್ ತಂಡದಲ್ಲಿ ಟೆಸ್ಟ್ ಪರಿಣಿತನಾಗಿ ಜೋ ರೂಟ್ ಮತ್ತು ಓಲೀ ಪೋಪ್ ಇದ್ದಾರೆ.

ಇನ್ನು ಸ್ಫೋಟಕ ಆಟಕ್ಕೆ ಆಸೀಸ್ ಪಡೆಯಲ್ಲಿ ಟ್ರಾವಿಸ್ ಹೆಡ್ ಇದ್ದರೆ, ಇಂಗ್ಲೆಂಡ್ ತಂಡಕ್ಕೆ ಬಾಜ್ ಬಾಲ್ ಝಲಕ್ ತೋರಿಸಲು ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಇದ್ದಾರೆ.

ಇಂಗ್ಲೆಂಡ್ ತಂಡದಲ್ಲಿ ಆಲ್ರೌಂಡರ್‌ಗಳಾಗಿ ಬೆನ್ ಸ್ಟೋಕ್ಸ್ ಮತ್ತು ಜೇಕಬ್ ಬೆಥೆಲ್ ಇದ್ದರೆ, ಅತ್ತ ಆಸ್ಟ್ರೇಲಿಯಾದಲ್ಲಿ ಕ್ಯಾಮರಾನ್ ಗ್ರೀನ್ ಮತ್ತು ಬ್ಯೂ ವೆಬ್‌ಸ್ಟರ್ ಇದ್ದಾರೆ. ಹಾಗೆಯೇ ವೇಗಿಗಳಾಗಿ ಆಸೀಸ್ ಪಡೆಯಲ್ಲಿ ಮೈಕೆಲ್ ಸ್ಟಾರ್ಕ್ ಹಾಗೂ ಸ್ಕಾಟ್ ಬೋಲ್ಯಾಂಡ್ ಆಯ್ಕೆ, ಇಂಗ್ಲೆಂಡ್ ತಂಡದ ವೇಗಾಸ್ತ್ರವಾಗಿ ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್ ಹಾಗೂ ಮಾರ್ಕ್ ವುಡ್ ಕಣಕ್ಕಿಳಿಯಲಿದ್ದಾರೆ.

ಹೀಗಾಗಿ ಈ ಬಾರಿಯ ಆಯಶಸ್ ಸರಣಿಯಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಈ ಪೈಪೋಟಿಯಲ್ಲಿ ಯಾರು ಗೆದ್ದು ಬೀಗಲಿದ್ದಾರೆ ಕಾದು ನೋಡಬೇಕಿದೆ.

ಆಸ್ಟ್ರೇಲಿಯಾ ಟೆಸ್ಟ್ ತಂಡ (ಮೊದಲ ಪಂದ್ಯಕ್ಕೆ): ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬ್ರೆಂಡನ್ ಡಾಗೆಟ್, ಕ್ಯಾಮರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಜೇಕ್ ವೆಡ್‌ರಾಲ್ಡ್, ಮೈಚೆಲ್ ಸ್ಟಾರ್ ನೇಸ್ಟರ್, ಬ್ಯೂಸರ್ ವೆಬ್ ವೆದಲ್ಡ್ ಹೇಝಲ್ವುಡ್ (ಅಲಭ್ಯ), ಶಾನ್ ಅಬಾಟ್ (ಅಲಭ್ಯ).

ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗ್ಯಾಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸೆ, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್, ಓಲಿ ಪಾಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್.

ಇದನ್ನೂ ಓದಿ: ಮಿಲಿಂದ್ ಆರ್ಭಟಕ್ಕೆ ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಉಡೀಸ್

ಆಯಶಸ್ ಸರಣಿ ಕಾರ್ಯಕ್ರಮ:

  • ಮೊದಲ ಪರೀಕ್ಷೆ: ಶುಕ್ರವಾರ ನವೆಂಬರ್ 21 – ನವೆಂಬರ್ 25 (ಬೆಳಿಗ್ಗೆ 2.30) – ಆಪ್ಟಸ್ ಕ್ರೀಡಾಂಗಣ, ಪರ್ತ್
  • ಎರಡನೇ ಟೆಸ್ಟ್: ಗುರುವಾರ ಡಿಸೆಂಬರ್ 4 – ಡಿಸೆಂಬರ್ 8 (ಬೆಳಿಗ್ಗೆ 4.30) – ದಿ ಗಬ್ಬಾ, ಬ್ರಿಸ್ಬೆನ್
  • ಮೂರನೇ ಪರೀಕ್ಷೆ: ಬುಧವಾರ ಡಿಸೆಂಬರ್ 17 – ಡಿಸೆಂಬರ್ 21 (ಬೆಳಿಗ್ಗೆ 12) – ಅಡಿಲೇಡ್ ಓವಲ್
  • ನಾಲ್ಕನೇ ಟೆಸ್ಟ್: ಗುರುವಾರ ಡಿಸೆಂಬರ್ 25 – ಡಿಸೆಂಬರ್ 29 (ರಾತ್ರಿ 11.30) – ಮೆಲ್ಬೋರ್ನ್ ಕ್ರಿಕೆಟ್ ಮೈದಾನ
  • ಐದನೇ ಟೆಸ್ಟ್: ಜನವರಿ 3 ಭಾನುವಾರ – 7 (ರಾತ್ರಿ 11.30) – ಸಿಡ್ನಿ ಕ್ರಿಕೆಟ್ ಮೈದಾನ.



Source link

Leave a Reply

Your email address will not be published. Required fields are marked *