ಬಿಗ್ಬಾಸ್ 11ನೇ ಸೀಸನ್ನ ಸ್ಪರ್ಧಿ ಅಶ್ವಿನಿ ಗೌಡ ಅವರು ಷೋ ನಂತರ ತಮಗಾದ ಮಾನಸಿಕ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಟ್ರೋಲ್‌ಗಳಿಂದಾಗಿ ತಮ್ಮ ಆರೋಗ್ಯ ಹದಗೆಟ್ಟು, 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಡ್ರಿಪ್ಸ್ ಹಾಕಿಸಿಕೊಂಡು ಚಿಕಿತ್ಸೆ ಪಡೆದ ಕರಾಳ ದಿನಗಳನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ಬಾಸ್ ಷೋಗೆ ಹೋಗಿ ಬಂದ ಮೇಲೆ ಅದೆಷ್ಟೋ ಜನರ ಲೈಫ್ ಚೇಂಜ್ ಆಗಿರುವುದು ಇದೆ. ಸಾಮಾನ್ಯ ಜನರೂ ಸೆಲೆಬ್ರಿಟಿಗಳಾಗುತ್ತಿದ್ದಾರೆ. ಈ ಒಂದು ಷೋಗೆ ಒಮ್ಮೆಯಾದರೂ ಹೋಗಿ ಬರಬೇಕು ಎನ್ನುವ ತವಕದಲ್ಲಿ ಇರುವವರು ಲಕ್ಷಾಂತರ ಮಂದಿ. ಆದರೆ ಕೆಲವೇ ಕೆಲವು ಜನರಿಗೆ ಅದರಲ್ಲಿಯೂ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳಿಗೆ ಈ ಅವಕಾಶ ಸಿಗುತ್ತದೆ. ಅಂಥವರದಲ್ಲಿ 11ನೇ ಸೀಸನ್ನಲ್ಲಿ ಒಬ್ಬರಾಗಿದ್ದವರು ಅಶ್ವಿನಿ ಗೌಡ. (Ashwini Gowda).

ಬಿಗ್ಬಾಸ್ ಎನ್ನೋದು ಒಂದು ಷೋ. ಯಾವುದೇ ಸ್ಪರ್ಧೆ ಇದ್ದಾಗಲೂ ಅಲ್ಲಿ ತಾವೇ ಗೆಲ್ಲಬೇಕು ಎಂದು ಎಲ್ಲಾ ಸ್ಪರ್ಧಿಗಳೂ ಅಂದುಕೊಂಡಿರುತ್ತಾರೆ. ಅದಕ್ಕಾಗಿ ಆ ಸನ್ನಿವೇಶಕ್ಕೆ ತಕ್ಕಂತೆ ಅಲ್ಲಿ ವರ್ತಿಸುವುದು ಅನಿವಾರ್ಯವಾಗುತ್ತದೆ. ಇಂಥ ಸಂದರ್ಭದಲ್ಲಿ ಈ ಬಾರಿಯ ಷೋನಲ್ಲಿ ಅತಿ ಹೆಚ್ಚು ಜಗಳವಾಡಿದ್ದಾರೆ ಎಂದು ಟ್ರೋಲ್ ಆದವರು ಅಶ್ವಿನಿ ಗೌಡ. ಆದರೆ ಹೊರಗಿನ ಪ್ರಪಂಚದಲ್ಲಿ ಒಳ್ಳೆಯ ಹೆಸರು ಮಾಡಿದ ವ್ಯಕ್ತಿಯೊಬ್ಬರಿಗೆ, ಒಂದು ಸ್ಪರ್ಧೆಯನ್ನು ಸ್ಪರ್ಧೆಯಾಗಿ ನೋಡದ ವೀಕ್ಷಕರಿಂದ ಯಾವ ರೀತಿಯಲ್ಲಿ ಮಾನಸಿಕ ಆಘಾತ ಉಂಟಾಗುತ್ತದೆ ಎನ್ನುವ ಬಗ್ಗೆ ನೋವಿನಿಂದ ನುಡಿದಿದ್ದಾರೆ ಅಶ್ವಿನಿ ಗೌಡ.

ನ್ಯೂಸೋ ನ್ಯೂಸ್ ಯುಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಅಶ್ವಿನಿ ಗೌಡ ಅವರು, ಷೋ ಬಳಿಕ ತಮಗಾಗಿರುವ ಮಾನಸಿಕ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಹೋರಾಟಗಾರ್ತಿಯಾಗಿ ಹೆಸರು ಮಾಡಿದ್ದ ತಮ್ಮನ್ನು, ಹತ್ತಿರದಿಂದ ಬಲ್ಲ ಕೆಲವರೂ ಸೇರಿದಂತೆ ಜನರು ಷೋ ಬಳಿಕ ನೋಡಿದ ಪರಿ, ಬಿಗ್ಬಾಸ್ನಲ್ಲಿ ಇರುವಾಗಿ ಬಂದಿರುವ ನೆಗೆಟಿವ್ ಕಮೆಂಟ್ಸ್ ಬಗ್ಗೆ ಅಶ್ವಿನಿ ಮಾತನಾಡಿದ್ದಾರೆ.

ಬಿಗ್ಬಾಸ್ಗೆ ಹೋಗಿ ಬಂದ ಮೇಲೆ ಜನ ನನ್ನನ್ನು ನೋಡಿದ ರೀತಿ ಅಥವಾ ಈ ಟ್ರೋಲ್ಸ್ ಎಲ್ಲಾ ಆಕ್ಸೆಪ್ಟ್ ಮಾಡ್ಕೊಳ್ಳೋದಕ್ಕೆ ತುಂಬಾ ಕಷ್ಟ ಆಯ್ತು. ನನ್ನಂಥವಳಿಗೆ ಇದು ಈಸಿಯಾದ ಮಾತೇ ಅಲ್ಲ. ತುಂಬಾ ಹರ್ಟ್ ಆಯ್ತು. ನಾನು ಇವತ್ತಿಗೂ ಕೂಡ ನನ್ನ ಹೋರಾಟಗಳಿಂದ ಆಗಿರಬಹುದು, ನನ್ನ ವೈಯಕ್ತಿಕ ಬದುಕು ಆಗಿರಬಹುದು, ಯಾವುದಾದ್ರೂ ಒಂದು ಒಂದು ಸುಮ್ನೆ ಒಂದು ಫೋಟೋ ಹಾಕಬೇಕು ಎಂದರೂ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೂ ಒಂದು ಕೆಟ್ಟು ಕಮೆಂಟ್ ಬರಬಾರದು ಎಂದುಕೊಳ್ಳುವವಳು ನಾನು. ನಾನು ಹಾಕಿರೋ ಬಟ್ಟೆಯಿಂದ ಹಿಡಿದು ಹೇರ್ ಸ್ಟೈಲ್ ಇಂದ ಹಿಡಿದು ಅಷ್ಟು ಸೂಕ್ಷ್ಮವಾಗಿ ನಾನು ಗಮನಿಸಿ ಫೋಟೋ ಹಾಕುವ ನನ್ನಂಥವಳಿಗೆ ಈ ರೀತಿಯ ಟ್ರೋಲ್ಗಳನ್ನು ಸಹಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ ಎಂದಿದ್ದಾರೆ ಅಶ್ವಿನಿ.

ಬಿಗ್ ಬಾಸ್ ಮನೆ ಒಳಗಡೆ ನಾನು ಹೋಗಿ ಹೊರಗಡೆ ಬಂದಾಗ ಇಡೀ ಜಗತ್ತು ನನಗೆ ಹೇಗೆ ಅನಿಸಿಬಿಡ್ತು ಅಂತಂದ್ರೆ ಸಂಪೂರ್ಣ ಡಿಫರೆಂಟ್ ಅನ್ನಿಸಿಹೋಯ್ತು. ನಾನು ಮನೆಗೆ ಬಂದಾಗ ಎರಡು ದಿನ ನನಗೆ ನಮ್ಮ ಮನೇಲಿ ಫೋನೇ ಕೊಡ್ಲಿಲ್ಲ, ನೀನು ನೋಡಬಾರದು ಎಂದರು. ಯಾಕೆ ಎಂದು ಹೇಳಲಿಲ್ಲ. ಆ ಬಳಿಕ ಫೋನ್ ನೋಡಿದಾಗ ಶಾಕ್ಗೆ ಒಳಗಾಗಿಬಿಟ್ಟೆ ಎನ್ನುತ್ತಲೇ, ಆ ಘಟನೆಯ ಬಳಿಕ ನಡೆದ ಕರಾಳ ದಿನಗಳನ್ನು ಅಶ್ವಿನಿ ರಿವೀಲ್ ಮಾಡಿದ್ದಾರೆ. ನಾನು ಅಪ್ಸೆಟ್ ಆದೆ. ಹೆಲ್ತ್ ತುಂಬಾ ಹಾಳಾಯ್ತು. 15 ದಿನ ತುಂಬಾ ತೊಂದರೆ ಪಟ್ಟೆ. ಡ್ರಿಪ್ಸ್ ಎಲ್ಲ ಹಾಕಿಸ್ಕೊಂಡು ಮಲಗಿದೆ. ಲೋ ಬಿಪಿ ಆಯ್ತು, ಡೆಂಗ್ಯೂ ಬಂತು ಎಂದು ಆ ಭಯಾನಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನನ್ನ ಬಗ್ಗೆ ನೆಗೆಟಿವ್ ಹಾಕಿರುವಂತ ಲಿಂಕ್ಗಳನ್ನು ನಾನು ಕಲೆಕ್ಟ್ ಮಾಡಿದ್ದೇ 850 ಆಗಿದೆ. ಯಾವುದೋ ವಿಡಿಯೋ ತೆಗೆದು, ಇನ್ನೇನನ್ನೋ ಸೇರಿಸಿ ಶೇರ್ ಮಾಡಿದ್ದಾರೆ. ಅಲ್ಲಿಗೆ ಕಾಪಿರೈಟ್ಸ್ ಇಶ್ಯು ಬಂದಿರುವ 40 ಸಾವಿರ ಕಾಪಿರೈಟ್ ಸ್ಟ್ರೈಕ್ ನೋಡಿದ್ದೇನೆ. ನನ್ನ ಒಂದು ಇಂಟರ್ವ್ಯೂಗೆ ಅಂದ್ರೆ ನಾನ ಏನು ಹೇಳಿರ್ತೀನಿ ಅದನ್ನ ಕಟ್ ಮಾಡ್ತಾರೆ, ಅವರಿಗೆ ಏನು ಬೇಕೋ ಅದನ್ನ ಹಾಕೋತಾರೆ ಅಂಥವುಗಳು ಇದು ಎಂದು ಹೇಳಿದ್ದಾರೆ ಅಶ್ವಿನಿ.

ನನ್ನ ಪರವಾಗಿ ಯಾರ್ಯಾರು ನಿಂತಿದ್ದಾರೋ ನಾನು ಸಾಯೋವರೆಗೂ ಅವರಿಗೆ ಯಾವತ್ತಿಗೂ ಚಿರಋಣಿ ಆಗಿದ್ದೇನೆ. ಇವತ್ತಿಗೂ ಒಂದೊಂದು ಮುಖನೂ ನನಗೆ ನೆನಪಿದೆ. ಯಾರ್ಯಾರು ನನ್ನ ಬಗ್ಗೆ ಟ್ರೋಲ್ ಮಾಡಿದ್ದಾರೆ, ಯಾರ್ಯಾರು ಕೆಟ್ಟದಾಗಿ ಮಾತಾಡಿದ್ದಾರೆ ಎನ್ನೋದು ಗೊತ್ತಿದೆ. ಕೈಯಲ್ಲಿ ಸೌಟ್ ಹಿಡ್ಕೊಂಡಿರೋರು, ಹೂವ ಕಟ್ತಾ ಇರೋರು, ಪೊರಕೆ ಹಿಡ್ಕೊಂಡು ಗುಡಿಸ್ತಾ ಇರುವವರು ಎಲ್ಲರೂ ಟ್ರೋಲ್ ಮಾಡಿದ್ದಾರೆ.

Source link
Bigg Boss ಬಳಿಕದ ಯಾತನೆ, 40 ಸಾವಿರ ಕಾಪಿರೈಟ್ಸ್, 850 ಲಿಂಕ್ಸ್- ಅಶ್ವಿನಿ ಗೌಡ ಶಾಕಿಂಗ್ ವಿಷ್ಯ ರಿವೀಲ್