Headlines

ಕ್ಯಾಪ್ಟನ್ಸಿ ಬೇಕೆ ಬೇಕು ಎಂದು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು ಅಶ್ವಿನಿ

ಕ್ಯಾಪ್ಟನ್ಸಿ ಬೇಕೆ ಬೇಕು ಎಂದು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು ಅಶ್ವಿನಿ


ಬಿಗ್ ಬಾಸ್ (ಬಿಗ್ ಬಾಸ್) ಮನೆಯಲ್ಲಿ ಅಶ್ವಿನಿ ಗೌಡ ಅವರು ಈ ವಾರ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆಯಾಗಿದ್ದರು. ಆದರೆ, ಧನುಷ್ ಎದುರು ಗೆಲ್ಲಲು ಅವರಿಗೆ ಸಾಧ್ಯವಾಗಲೇ ಇಲ್ಲ. ಅಶ್ವಿನಿ ಗೌಡ ಅವರು ನಡೆದುಕೊಂಡ ರೀತಿ ಚರ್ಚೆಗೆ ಕಾರಣವಾಗಿದೆ. ಅವರು ಆಟದಲ್ಲಿ ಉಂಟಾದ ತೊಂದರೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದರು. ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ..

ಈ ವಾರ ಅಶ್ವಿನಿ ಗೌಡಗೆ ಅದೃಷ್ಟ ಒಲಿದಿತ್ತು. ಅವರು ಗಿಲ್ಲಿ ಸಹಾಯದಿಂದ ನೇರವಾಗಿ ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆಯಾದರು. ಗಿಲ್ಲಿ ಕ್ಯಾಪ್ಟನ್ ಆಗಿದ್ದು ಅವರಿಗೂ ಈ ಅವಕಾಶ ಸಿಕ್ಕಿತು. ನಂತರ ಆಟ ಆಡಿ ರಾಶಿಕಾ ಹಾಗೂ ಧನುಶ್ ಕ್ಯಾಪ್ಟನ್ಸಿ ರೇಸ್ಗೆ ಅರ್ಹತೆ ಪಡೆದರು. ಆ ಬಳಿಕ ಜೋಡಿ ಮಾಡಿ ಆಟ ಆಡಿಸಲಾಯಿತು.

ಧನುಶ್ ಹಾಗೂ ಅಶ್ವಿನಿ ಒಂದು ಜೋಡಿ, ರಾಶಿಕಾ ಹಾಗೂ ಗಿಲ್ಲಿ ಒಂದು ಜೋಡಿ. ಅಶ್ವಿನಿ ತಂಡದಲ್ಲಿ ಇದ್ದ ಧನುಶ್ ಆಡದಿಂದ ಅವರ ತಂಡ ಗೆದ್ದಿತು. ಧನುಶ್ ಹಾಗೂ ಅಶ್ವಿನಿ ಅಂತಿಮವಾಗಿ ಕೊನೆಯ ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆಯಾದರು. ಇಬ್ಬರ ಪಜಲ್ ಟಾಸ್ಕ್ ನಡೆಯುವಾಗ ಉಸ್ತುವಾರಿ ಮಾಡಿದ ತಪ್ಪಿನಿಂದ ನಿಯಮ ಪಾಲನೆ ಆಗಿಲ್ಲ. ಇದನ್ನು ಗಮನಿಸಿದ ಬಿಗ್ ಬಾಸ್ ಆಟ ರದ್ದು ಮಾಡಿ, ಮತದಾನಕ್ಕೆ ಅವಕಾಶ ಕೊಟ್ಟರು. ಧನುಷ್‌ಗೆ ಬಹುಮತದ ವೋಟ್ ಬಂದು ವಿನ್ ಆದರು.

ಆ ಬಳಿಕ ಅಲ್ಲಿ ನಡೆದಿದ್ದೇ ಬೇರೆ. ಅಶ್ವಿನಿ ಅವರು ಧನುಷ್ ಬಳಿ ಬಂದು ಒಂದಷ್ಟು ವಿಷಯಗಳನ್ನು ಹೇಳಿದರು. ‘ನೀವು ನನ್ನಿಂದ ಕ್ಯಾಪ್ಟನ್ಸಿ ಕಟ್ಕೊಂಡ್ರಿ, ನಂಗೆ ಅನ್ಯಾಯ ಆಗಿದೆ, ನೀವು ನನಗೆ ಕ್ಯಾಪ್ಟನ್ಸಿ ಕೊಡ್ತೀನಿ ಎಂದು ಹೇಳಬಹುದಿತ್ತು’ ಎಂದೆಲ್ಲ ಹೇಳಿದರು. ಶತಾಯ ಗತಾಯ ಕ್ಯಾಪ್ಟನ್ ಆಗಲೇಬೇಕು ಎಂದು ಅವರು ತಾವು ಸಂತ್ರಸ್ತರು ಎಂಬ ಕಾರ್ಡ್ ಅನ್ನು ಸಿದ್ಧಪಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ‘ಅಶ್ವಿನಿ ಗೌಡ ಸೋಲಬೇಕು ಅಂತ ಬಯಸುವವರೇ ಜಾಸ್ತಿ ಇದ್ದಾರೆ’

ಧನುಷ್ ಉದ್ದೇಶ ಪೂರ್ವಕವಾಗಿ ಮಾಡಿದ ತಪ್ಪು ಇಲ್ಲ. ಹಾಗಿದ್ದಿದ್ದರೆ ಬಿಗ್ ಬಾಸ್ ಈ ಬಗ್ಗೆ ಘೋಷಣೆ ಮಾಡಲಾಗಿತ್ತು. ಉಸ್ತುವಾರಿಗಳ ಕಣ್ತಪ್ಪಿನಿಂದ ಆದ ತಪ್ಪು ಇದು. ಹೀಗಿರುವಾಗ ಕ್ಯಾಪ್ಟನ್ಸಿ ತಮಗೆ ಬೇಕು ಎಂದು ಕೇಳೋದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *