‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ಕೊನೆಗೆ ತಿಂಗಳೇ ಕಳೆದರೂ ಅದರ ಬಗ್ಗೆ ಆಗುತ್ತಿರುವ ಚರ್ಚೆಗಳು ನಿಂತಿಲ್ಲ. ಒಂದಲ್ಲಾ ಒಂದು ಕಾರಣಕ್ಕೆ ಈ ಸೀಸನ್ ಸ್ಪರ್ಧಿಗಳ ಹೆಸರು ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಈ ಬಾರಿ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಕಿತ್ತಾಟ ಹೈಲೈಟ್ ಆಗಿದೆ. ದೊಡ್ಮನೆ ಆಟ ಮುಗಿದು ತಿಂಗಳಾದರೂ ಈ ಜಗಳ ನಿಂತಿಲ್ಲ. ಈಗ ಗಿಲ್ಲಿ ಹೇಳಿದ ಮಾತನ್ನು ನೆಟ್ಟಿಗರು ನೆನಪಿಸಿಕೊಳ್ಳುತ್ತಿದ್ದಾರೆ.
ಅಶ್ವಿನಿ ಹಾಗೂ ಚೈತ್ರಾ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವಾಗ ಪರಸ್ಪರ ಪರಚಿಕೊಂಡಿದ್ದರು. ಆಗ ಆದ ಗಾಯಗಳ ಬಗ್ಗೆ ಅಲ್ಲಿಯೇ ಚರ್ಚೆ ಆಗುತ್ತಿದೆ. ‘ಆಟದ ಭರದಲ್ಲಿ ಇಲ್ಲ’ ಎಂದು ಮಾತನಾಡಿಕೊಂಡು ಆ ವಿಷಯವನ್ನು ಅಲ್ಲಿಗೆ ಬಿಟ್ಟಿದ್ದರು. ದೊಡ್ಮನೆಯಿಂದ ಹೊರ ಬಂದ ಬಳಿಕ ಈ ಕಿತ್ತಾಟ ಮುಂದುವರಿದಿದೆ.
ಕೈಗೆ ಆದ ಗಾಯಗಳ ಕಲೆಗಳ ಫೋಟೋಗಳನ್ನು ಹಾಕಿದ್ದ ಅಶ್ವಿನಿ ಗೌಡ, ‘ಯಾವ ಪ್ರಾಣಿ ಪರಚಿದ್ದು’ ಎಂದು ಕೇಳಿದ್ದರು. ಇದಕ್ಕೆ ಉತ್ತರ ಕೊಟ್ಟಿದ್ದ ಚೈತ್ರಾ ಕುಂದಾಪುರ ಅವರು, ‘ನನಗೂ ಗಾಯವಾಗಲು, ಬೆಳಕಿನ ಆಟವಾಗಿಯೇ ನೋಡುತ್ತೇನೆ’ ಅಷ್ಟೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮುಗಿದು ಇಷ್ಟು ದಿನವಾದ್ರೂ ಕಡಿಮೆ ಆಗಿಲ್ಲ ಗಿಲ್ಲಿ ನಟ ಹವಾ
ಈಗ ಅಶ್ವಿನಿ ಗೌಡ ಅವರು ಮಾಧ್ಯಮದವರ ಜೊತೆ ಮಾತನಾಡಿ, ಚೈತ್ರಾ ಅವರು ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು ಗಿಲ್ಲಿ ಮಾತನ್ನು ನೆನಪಿಸಿಕೊಂಡಿದ್ದಾರೆ. ‘ಹೆಣ್ಣು ಮಕ್ಕಳು ಜಗಳ ಆರಂಭಿಸಿದರೆ ಅದು ಮುಗಿಯೋದೇ ಇಲ್ಲ ಎಂದಿದ್ದರು. ಆ ಮಾತು ಈಗ ನಿಜವಾಗಿದೆ.
ಗಿಲ್ಲಿ ಒಮ್ಮೆ ಹೇಳಿದರು 😊
ಒಂದು ಹುಡುಗ ಹುಡುಗಿ ಜಗಳ ಆಡಿದ್ರೆ ಅದು ಬೇಗ ನಿಲ್ಲುತ್ತೆ. ಯಾಕಂದ್ರೆ ಹುಡುಗ sorry ಕೇಳ್ತಾನೆ.
ಆದರೆ, ಇಬ್ಬರು ಹೆಂಗಸರ ಮಧ್ಯ ಜಗಳ ಆದರೆ ಅದು ಯಾವ ಕಾರಣಕ್ಕೂ ನಿಲ್ಲಲ್ಲ…
ಅವನು ಹೇಳಿದ್ದು ಸರಿ 😂 🤣 😜 #BBK12#ಗಿಲ್ಲಿನಾಟಾ
— ಅಲ್ಪಸಂಖ್ಯಾತ (@alpasankhyata) ಫೆಬ್ರವರಿ 12, 2026
ಅಶ್ವಿನಿ ಗೌಡ ಅವರು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಹಲವು ವಿಷಯಗಳ ಬಗ್ಗೆ ಕೊಂಕು ತೆಗೆದಿದ್ದರು. ಗಿಲ್ಲಿಗೆ ಕಪ್ ಸಿಕ್ಕ ವಿಷಯದಲ್ಲಿ ಅವರಿಗೆ ಸಾಕಷ್ಟು ಅಸಮಾಧಾನವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.