ಮತ್ತೆ ಕಾರಣ ನೀಡಿ ಕೆಲಸ ತಪ್ಪಿಸಿಕೊಳ್ಳಲು ಯತ್ನಿಸಿದ ಅಶ್ವಿನಿ ಗೌಡ: ಗರಂ ಆದ ರಘು

ಮತ್ತೆ ಕಾರಣ ನೀಡಿ ಕೆಲಸ ತಪ್ಪಿಸಿಕೊಳ್ಳಲು ಯತ್ನಿಸಿದ ಅಶ್ವಿನಿ ಗೌಡ: ಗರಂ ಆದ ರಘು


ಬಿಗ್ ಬಾಸ್ (ಬಿಗ್ ಬಾಸ್ ಕನ್ನಡ ಸೀಸನ್ 12) ಮನೆಯಲ್ಲಿ ಅಶ್ವಿನಿ ಗೌಡ ಅವರು ತಮ್ಮ ಪಾಲಿನ ಕೆಲಸದಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವಿದೆ. ಈಗ ಅದು ಮತ್ತೆ ಮರುಕಳಿಸಿದೆ. ಪೌಡರ್ ರೂಮ್ ಕ್ಲೀನ್ ಮಾಡುವಂತೆ ಅಶ್ವಿನಿ ಗೌಡ ಅವರಿಗೆ ಕ್ಯಾಪ್ಟನ್ ರಘು ಸೂಚಿಸಿದ್ದಾರೆ. ಆದರೆ ಆ ಕೆಲಸ ಮಾಡಲು ಅಶ್ವಿನಿ ಅವರು ಹಿಂದೇಟು ಹಾಕಿದ್ದಾರೆ. ಮತ್ತೆ ಅವರ ಕೆಲಸವನ್ನು ನೆನಪಿಸಿದಾಗ, ‘ನನಗೆ ಬೆನ್ನು ನೋವು ಇದೆ. 10 ನಿಮಿಷದ ಬಳಿಕ ಮಾಡುತ್ತೇನೆ’ ಅಂತ ಹೇಳಿದ್ದಾರೆ. ‘ಹಾಗಾದ್ರೆ 10 ನಿಮಿಷದಲ್ಲಿ ಬೆನ್ನು ನೋವು ಹೋಗುತ್ತಾ’ ಎಂದು ರಘು ಪ್ರಶ್ನಿಸಿದ್ದಾರೆ. ‘ಬೆನ್ನು ನೋವು ಹೋದರೆ ಮಾಡುತ್ತೇನೆ’ ಎಂದ ಅಶ್ವಿನಿ ಗೌಡ (ಅಶ್ವಿನಿ ಗೌಡ) ಉತ್ತರಿಸಿದ್ದಾರೆ. ಇದೇ ವಿಚಾರಕ್ಕೆ ಅವರಿಬ್ಬರ ನಡುವೆ ಕಿರಿಕ್ ಹೆಚ್ಚು ಸಾಧ್ಯತೆ ಇದೆ. ಈ ವಾರ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *