Headlines

ರಿವೇಂಜ್​ಗಾಗಿ ಸ್ಪರ್ಧಿಗಳ ಹಲ್ಲುಜ್ಜೋ ಬ್ರೆಶ್​ನಲ್ಲಿ ಟಾಯ್ಲೆಟ್​ ತಿಕ್ಕಿದ್ರಾ ಅಶ್ವಿನಿ ಗೌಡ?

ರಿವೇಂಜ್​ಗಾಗಿ ಸ್ಪರ್ಧಿಗಳ ಹಲ್ಲುಜ್ಜೋ ಬ್ರೆಶ್​ನಲ್ಲಿ ಟಾಯ್ಲೆಟ್​ ತಿಕ್ಕಿದ್ರಾ ಅಶ್ವಿನಿ ಗೌಡ?


‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ (ಅಶ್ವಿನಿ ಗೌಡ) ಅವರ ಒಂದೊಂದೇ ಮುಖ ಕಳಚುತ್ತಿದೆ. ತಾವು ಒಳ್ಳೆಯವರಂತೆ ತೋರಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಈಗ ಅವರು ತೀರಾನೆ ಹಂತಕ್ಕೆ ಹೋಗಿದ್ದಾರೆ ಎಂಬ ಮಾತುಗಳಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಅಶ್ವಿನಿ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಅಶ್ವಿನಿ ಗೌಡ ಅವರಿಗೆ ರಿವೇಂಜ್ ತೆಗೆದುಕೊಳ್ಳೋದು ಎಂದರೆ ಎಲ್ಲಿಲ್ಲದ ಖುಷಿ. ಕಳೆದ ವಾರ ರಕ್ಷಿತಾ ಶೆಟ್ಟಿ ಅವರ ಮೇಲೆ ಆಪಾದನೆ ಹೊರಿಸಿ, ಅವರನ್ನು ಕೆಟ್ಟವರು ಎಂದು ಬಣ್ಣಿಸುವ ಪ್ರಯತ್ನ ಮಾಡಿದರು. ಆದರೆ, ಇದು ಅವರಿಗೆ ಉಲ್ಟಾ ಹೊಡೆಯಿತು. ಸುದೀಪ್ ಅವರು ಅಶ್ವಿನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಆದಾಗ್ಯೂ ಅಶ್ವಿನಿ ಗೌಡ ಅವರು ಬದಲಾದಂತೆ ಕಾಣುತ್ತಿಲ್ಲ.

ಇದನ್ನೂ ಓದಿ

ಈ ವಾರವೂ ಅವರು ತಮ್ಮ ಚಾಳಿ ಮುಂದುವರಿಸಿದ್ದಾರೆ. ಗೊತ್ತಿದ್ದೇ ನಿಯಮ ಮುರಿಯೋದು, ಬೇರೆಯವರನ್ನು ಏಕವಚನದಲ್ಲಿ ಮಾತನಾಡಿಸುವುದು ಮತ್ತು ಬೇರೆಯವರು ಅವರೇ ಏಕವಚನದಲ್ಲಿ ಮಾತನಾಡುವಾಗ ಕೋಪಗೊಳ್ಳೋದು ಇತ್ಯಾದಿಗಳು ನಡೆದೇ ಇದ್ದವು. ಆದರೆ, ಈ ಮಧ್ಯೆ ಅವರು ಮಾಡಿದ ಒಂದು ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಅಶ್ವಿನಿ ಗೌಡ ಅವರಿಗೆ ರಘು ಗೌಡ ಅವರು ಕಳಪೆಯಾಗಿದ್ದಾರೆ. ಇದರಿಂದ ಅಶ್ವಿನಿ ಗೌಡ ಸಿಟ್ಟಾದರು. ಆ ಬಳಿಕ ಅವರು ಪದೇ ಪದೇ ಟಾಯ್ಲೆಟ್ ಹೋಗೋ ಬಗ್ಗೆ ಬೇಡಿಕೆ ಇಟ್ಟರು. ಹೀಗೆ ಟಾಯ್ಲೆಟ್ ಹೋದ ಸಂದರ್ಭದಲ್ಲಿ ಅವರು ಇತರ ಸ್ಪರ್ಧಿಗಳ ಹಲ್ಲುಜ್ಜುವ ಬ್ರೆಶ್‌ಗಳನ್ನು ಒಟ್ಟುಗೂಡಿಸಿ ಟಾಯ್ಲೆಟ್‌ಗೆ ಹೋಗಿದ್ದಾರೆ. ಈ ವಿಚಾರ ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ‘ನಂಗೂ ನಿನ್ನ ಪಂಚೆ ಎಳೆಯೋಕೆ ಬರುತ್ತೆ, ಥೂ’; ಗಿಲ್ಲಿ ವಿರುದ್ಧ ಕೀಳು ಮಟ್ಟಕ್ಕೆ ಇಳಿದ ಅಶ್ವಿನಿ

‘ಅಶ್ವಿನಿ ಗೌಡ ಅವರು ಇತರ ಸ್ಪರ್ಧಿಗಳ ಬ್ರೆಶ್ ಅಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು,ನಿ ಗೌಡ ಟಾಯ್ಲೆಟ್ ಅಶ್ವದಲ್ಲಿ ಇದನ್ನು ಬಚ್ಚಿಟ್ಟಿರಬಹುದು. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *