ದರ್ಶನ್ ಅಭಿಮಾನಿಗಳಿಗೆ ಇಂದು (ಫೆಬ್ರವರಿ 16) ವಿಶೇಷ ದಿನ. ಏಕೆಂದರೆ ಅವರ ನೆಚ್ಚಿನ ನಟನ ಜನ್ಮದಿನ. ಈ ವಿಶೇಷ ದಿನಂದು ಬೆಂಗಳೂರಿನ ಆರ್ ಆರ್ ನಗರದ ಮನೆಗೆ ನುಗ್ಗಲು ದರ್ಶನ್ ಫ್ಯಾನ್ಸ್ ಮುಂದಾಗಿದ್ದಾರೆ. ಈ ವೇಳೆ ಹಾಗೂ ಫ್ಯಾನ್ಸ್ ಮಧ್ಯೆ ಕಿರಿಕ್ ಆಗಿದೆ. ಪೊಲೀಸ್ ಅನ್ನೋದನ್ನು ನೋಡದೆ ತಳ್ಳಿ ಒಳ ನುಗ್ಗಲು ಪ್ರಯತ್ನಿಸಿದ ಅಭಿಮಾನಿಗಳಿಗೆ ಕಪಾಳಮೋಕ್ಷ ಮಾಡಿದರು. ಕುಡಿದು ಬಂದು ಪದೇ ಪದೇ ಕಿರಿ ಕಿರಿ ಮಾಡಿದ್ದಕ್ಕೆ ಎಸ್ ಐ ಯೋಗ ನರಸಯ್ಯ ರಾಜು ಇಷ್ಟು ಕಠಿಣವಾಗಿ ನಡೆದುಕೊಂಡರು ಎಂದು ತಿಳಿದು ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.