2025ರ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಏಷ್ಯಾಖಂಡದ ಅತ್ಯುತ್ತಮ ಕ್ರಿಕೆಟಿಗರ ಪ್ರತಿಭೆಯನ್ನು ಪ್ರದರ್ಶಿಸುವ ಪ್ರತಿಷ್ಠಿತ ಟೂರ್ನಮೆಂಟ್ ಏಷ್ಯಾಕಪ್. ಏಕದಿನ ಮಾದರಿಗೆ ವಿಶೇಷ ಇತಿಹಾಸವಿದ್ದರೂ, T20 ಆವೃತ್ತಿಯು ಈ ಟೂರ್ನಿಯಲ್ಲಿ ನಡೆದಿದೆ.

ಈ ಟೂರ್ನಿಯಲ್ಲಿ ಹಲವು ಸ್ಟಾರ್ ಬ್ಯಾಟ್ಸ್ಮನ್ಗಳು ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. ರನ್ಗಳ ಸುರಿಮಳೆಗೈದಿದ್ದಾರೆ. ಏಷ್ಯಾಕಪ್ T20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಪಟ್ಟಿಯಲ್ಲಿ ಇಬ್ಬರು ಭಾರತೀಯ ಆಟಗಾರರಿದ್ದಾರೆ.

ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ, "ಕಿಂಗ್" ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಏಷ್ಯಾಕಪ್ T20 ಪಂದ್ಯಗಳಲ್ಲಿ ಕೊಹ್ಲಿ ಅದ್ಭುತ ಆಟದಿಂದ ಮನಸೆಳೆದಿದ್ದಾರೆ. ಸ್ಥಿರ ಪ್ರದರ್ಶನ ನೀಡಿದ್ದಾರೆ. ಇಲ್ಲಿಯವರೆಗೆ 10 ಪಂದ್ಯಗಳಲ್ಲಿ 429 ರನ್ ಗಳಿಸಿದ್ದು, ಅದ್ಭುತ 85.80 ಸರಾಸರಿಯೊಂದಿಗೆ ರನ್ ಗಳಿಸಿದ್ದಾರೆ.

2022ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಗಳಿಸಿದ 122 ರನ್ಗಳ ಅಜೇಯ ಇನ್ನಿಂಗ್ಸ್ ಕೊಹ್ಲಿಯ ಟಿ20ಯ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿದೆ.

ಪಾಕಿಸ್ತಾನ ತಂಡದ ನಂಬಿಗಸ್ಥ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೇವಲ 6 ಪಂದ್ಯಗಳಲ್ಲಿ 281 ರನ್ ಗಳಿಸಿದ್ದಾರೆ.

2022ರ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ರಿಜ್ವಾನ್, ತಮ್ಮ ಸ್ಥಿರ ಆರಂಭಿಕ ಪ್ರದರ್ಶನಗಳಿಂದ ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ರಿಜ್ವಾನ್ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 9 ಪಂದ್ಯಗಳಲ್ಲಿ 271 ರನ್ ಗಳಿಸಿದ್ದಾರೆ. ಉತ್ತಮ ಆರಂಭಿಕ ಜೊತೆಯಾಟ ನೀಡಿದ್ದಾರೆ.

ರೋಹಿತ್ ಶರ್ಮಾ ಕೂಡಾ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲೂ ಪಾಲ್ಗೊಳ್ಳುತ್ತಿಲ್ಲ.

ಏಷ್ಯಾಕಪ್ನಲ್ಲಿ ಮಿಂಚಿದ ಮತ್ತೊಬ್ಬ ಆಟಗಾರ ಬಾಬರ್ ಹಯಾತ್. ಹಾಂಕಾಂಗ್ನ ಈ ಆಟಗಾರ ಕೇವಲ 5 ಇನ್ನಿಂಗ್ಸ್ಗಳಲ್ಲಿ 235 ರನ್ ಗಳಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

2016ರಲ್ಲಿ ಒಮಾನ್ ವಿರುದ್ಧದ ಅರ್ಹತಾ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಸಣ್ಣ ಕ್ರಿಕೆಟ್ ರಾಷ್ಟ್ರಗಳ ಆಟಗಾರರೂ ಉನ್ನತ ಮಟ್ಟದಲ್ಲಿ ಆಡಬಲ್ಲರು ಎಂದು ಸಾಬೀತುಪಡಿಸಿದರು.

ಟಾಪ್-5 ಪಟ್ಟಿಯ ಕೊನೆಯ ಸ್ಥಾನದಲ್ಲಿ ಅಫ್ಘಾನಿಸ್ತಾನದ ಯುವ ಆಟಗಾರ ಇಬ್ರಾಹಿಂ ಜದ್ರಾನ್ ಇದ್ದಾರೆ. 5 ಪಂದ್ಯಗಳಲ್ಲಿ 196 ರನ್ ಗಳಿಸಿ ತಮ್ಮ ಪ್ರತಿಭೆ ತೋರಿಸಿದ್ದಾರೆ.

2022ರ ಟೂರ್ನಿಯಲ್ಲಿ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದ ಅವರು, 65.33 ಸರಾಸರಿಯೊಂದಿಗೆ ಆಡುವ ಮೂಲಕ ಅಫ್ಘಾನ್ ಬ್ಯಾಟಿಂಗ್ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸಿದರು.

Source link
ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಬ್ಯಾಟರ್ಗಳಿವರು!