ಮೈಸೂರು, ನವೆಂಬರ್ 18: ವ್ಯಕ್ತಿ ಮೇಲೆ ಕೆ.ಆರ್.ನಗರ ಶಾಸಕ ರವಿಶಂಕರ್ ಅವರಿಂದ ಹಲ್ಲೆ ಆರೋಪ ಸಂಬಂಧ ಹೊಡೆಸಿಕೊಂಡ ಎನ್ನಲಾದ ವ್ಯಕ್ತಿಯೇ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಕೆ.ಆರ್.ನಗರದ ಮಹದೇವ್, ಅಂದು ಸಭೆಯಲ್ಲಿ ನಾನು ಡೈರಿ ವಿಚಾರವಾಗಿ ಸಮಸ್ಯೆ ಹೇಳಿದ್ದೆ. ಬೇರೆಯವರು ಬೇರೆ ಬೇರೆ ಸಮಸ್ಯೆ ಹೇಳಿದರು. ಎಲ್ಲವೂ ಗೊಂದಲಮಯವಾಗಿತ್ತು, ಶಾಸಕರಿಗೆ ಏನೂ ಕೇಳಿಸಲು. ನಾನು ಪಕ್ಕದಲ್ಲೇ ನಿಂತಿದ್ದೆ ಬೆನ್ನು ತಟ್ಟಿ ಕುಳಿತುಕೊಳ್ಳಲು ಹೇಳಿದೆ. ಯಾವುದೇ ಹಲ್ಲೆ ಮಾಡಿಲ್ಲ, ಅದು ಸತ್ಯಕ್ಕೆ ದೂರವಾದ ಆರೋಪ. ಬೆನ್ನಿಗೆ ತಟ್ಟಿ ಪಕ್ಕಕ್ಕೆ ಕೂರಿಸಿದ್ದನ್ನು ಬಿಟ್ಟರೆ ಯಾವ ಗಲಾಟೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.