
ಇದಾದ ನಂತರ ಜೀವನ ಸರಿಹೋಗುತ್ತದೆ ಎಂದು ಸಂತಸದಿಂದಿದ್ದ ಮಹೇಶ್‌ನಿಗೆ ಮತ್ತೊಂದು ಶಾಕ್ ಕಾದಿತ್ತು. ಮಗಳ ಜಾತಕದಲ್ಲಿ ದೋಷವಿದೆ ಎಂದು ಶನಿಶಾಂತಿ ಮಾಡಿಸಬೇಕು ಎಂದು ಸುಚಿತ್ರಾ ಜ್ಯೋತಿಷಿಗಾಗಿ ಹುಡುಕಿದ್ದಳು. ಆಗ ಸ್ನೇಹಿತೆ ಸುಮಾಳಿಂದ ಟಿವಿಯಲ್ಲಿ ಜ್ಯೋತಿಷ್ಯ ಹೇಳಲು ಬರುತ್ತಿದ್ದ ಕಮಲಾಕರ ಭಟ್‌ನ ಸಂಪರ್ಕ ಸಿಗುತ್ತದೆ. ಗಂಡ-ಹೆಂಡತಿ ಹಾಗೂ ಮಗುವನ್ನು ಕೂರಿಸಿ ಮನೆಯಲ್ಲಿ ಶಾಂತಿ ಹೋಮ ಮಾಡಿದ ಕಮಲಾಕರ ಭಟ್, ನಂತರ ಸುಚಿತ್ರಾಳ ಕುಟುಂಬಕ್ಕೆ ಶನಿಯಾಗಿ ಹೆಗಲೇರಿದ್ದಾನೆ.
ಸುಂದರ ಮಹಿಳೆ ನೋಡಿದ ಸ್ತ್ರೀಲೋಲ ಕಮಲಾಕರ ಭಟ್, ಒಂದು ದಿನಕ್ಕೆ 2 ಲಕ್ಷ ರೂ. ಕೊಡುವುದಾಗಿ ಹಣದ ಆಮಿಷವೊಡ್ಡಿ ಸುಚಿತ್ರಾಳನ್ನು ಮಂಚಕ್ಕೆ ಕರೆಸಿದ್ದಾನೆ. ಆದರೆ, ಕಮಲಾಕರನಿಗಿಂದ ಭಲೇ ಕಿಲಾಡಿಯಾಗಿದ್ದ ಸುಚಿತ್ರಾ ಸ್ವಾಮೀಜಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಅಶ್ಲೀಲ ಫೋಟ ಮತ್ತು ವಿಡಿಯೋಗಳನ್ನು ಗುಪ್ತವಾಗಿ ಸೆರೆ ಹಿಡಿದುಕೊಂಡಿದ್ದಾಳೆ.