Headlines

ಕಮಲಾಕರ ಭಟ್ ಮತ್ತೊಂದು ಸೀಕ್ರೆಟ್ ಬಯಲು! ಗೋಶಾಲೆ ಹೆಸರಿನಲ್ಲಿ ಕೋಟಿ ಕೋಟಿ ಆಸ್ತಿ ಗಳಿಸಿದ್ದ ಜ್ಯೋತಿಷಿ

ಕಮಲಾಕರ ಭಟ್ ಮತ್ತೊಂದು ಸೀಕ್ರೆಟ್ ಬಯಲು! ಗೋಶಾಲೆ ಹೆಸರಿನಲ್ಲಿ ಕೋಟಿ ಕೋಟಿ ಆಸ್ತಿ ಗಳಿಸಿದ್ದ ಜ್ಯೋತಿಷಿ


ಶಿವಮೊಗ್ಗ, ಫೆಬ್ರವರಿ 6: ರೀಲ್ಸ್ ರಾಣಿ ಸುಚಿತ್ರಾ ಜತೆ ಅಕ್ರಮ ಸಂಬಂಧ ಹಾಗೂ ಕೊಲೆ ಪ್ರಕರಣದಲ್ಲಿ ಸುದ್ದಿಯಲ್ಲಿರುವ ಕಮಲಾಕರ ಭಟ್ ಮತ್ತೊಂದು ರಹಸ್ಯ ಈಗ ಬಯಲಾಗಿದೆ. ಕಡಿಮೆ ಅವಧಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಗಟ್ಟಲೆ ಆಸ್ತಿ ಖರೀದಿಸಿದ ವಿಚಾರ ಈಗ ಬೆಳಕಿಗೆ ಬಂದಿದ್ದು, ಆಸ್ತಿಗಳ ಕುರಿತು ಕೂಡ ತನಿಖೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶಿವಮೊಗ್ಗ ಮುದುವಾಲ ಗ್ರಾಮದಲ್ಲಿ ಕಮಲಾಕರ್ ಭಟ್ 10 ಕೋಟಿಗೂ ಹೆಚ್ಚು ಭೂಮಿಯನ್ನು ಖರೀದಿಸಿದ್ದಾರೆ. ಈ ಜಮೀನನ್ನು ಗೋಶಾಲೆ, ಮಠ ಮತ್ತು ದೇವಸ್ಥಾನ ನಿರ್ಮಿಸಲು ಬಳಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಸ್ಥಳದಲ್ಲಿ ಗೋವುಗಳಾಗಲೀ, ಸಿಬ್ಬಂದಿಯಾಗಲೀ ಇಲ್ಲ. ಕೇವಲ ಕೆಲವು ಶೆಡ್‌ಗಳು ಮತ್ತು ದೇವಸ್ಥಾನದ ಕಾಮಗಾರಿ ಮಾತ್ರ ಗೋಚರಿಸುತ್ತಿದೆ.

ಕಮಲಾಕರ್ ಭಟ್, ಕೆಲವೇ ವರ್ಷಗಳಲ್ಲಿ ಅಪಾರ ಆಸ್ತಿ ಸಂಪಾದಿಸಿದ್ದಾರೆ. ಶಿವಮೊಗ್ಗದಲ್ಲಿ ಮನೆ ಹೊಂದಿದ್ದ ಇವರು, ಸುಚಿತ್ರಾ ಪರಿಚಯದ ನಂತರ ಆಕೆಯ ಪತಿಯ ಅಣ್ಣ ವಸಂತ್ ನಾಯಕ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸುಚಿತ್ರಾ ಜೊತೆಗಿನ ಸಂಬಂಧವೇ ಈ ಘಟನೆಗೆ ಕಾರಣ. ಕಮಲಾಕರ್ ಭಟ್ ಅವರ ಅಕ್ರಮ ಆಸ್ತಿ ಸಂಪಾದನೆ ಕುರಿತು ಸಾರ್ವಜನಿಕ ವಲಯದಲ್ಲಿ ಈಗ ಪ್ರಶ್ನೆಗಳು ಮೂಡಿವೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *