ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ತೆಲುಗು ನಟ-ನಟಿಯರ ವೈಯಕ್ತಿಕ ಜೀವನ, ಕರಿಯರ್ ಬಗ್ಗೆ ಮಾತನಾಡಿದ್ದುಂಟು, ಅವರ ಭವಿಷ್ಯಗಳಲ್ಲಿ ಬಹುತೇಕ ಸತ್ಯವಾದರೆ, ಇನ್ನೂ ಕೆಲವು ಆಗಿಲ್ಲ. ಈಗ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕೂಡ ಮಾತನಾಡಿದ್ದು, ವೀಕ್ಷಕರು ಸಿಟ್ಟಾಗಿದ್ದಾರೆ.

ನಟ ಯಶ್ ಅವರು ಟಾಕ್ಸಿಕ್ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈ ಯುಗಾದಿಗೆ ರಿಲೀಸ್ ಆಗಬೇಕಿತ್ತು. ಇರಾಕ್, ಇರಾನ್ ಯುದ್ಧದ ಎಫೆಕ್ಟ್‌ನಿಂದಾಗಿ ಈ ಸಿನಿಮಾ ತಡವಾಗಿ ರಿಲೀಸ್ ಆಗಲಿದೆ.

ನಟ ಯಶ್ ಅವರು ಕಳೆದ ಹತ್ತು ವರ್ಷಗಳಿಂದ ಕೆಜಿಎಫ್ ಸಿನಿಮಾದಲ್ಲಿ ಬ್ಯುಸಿಯಾದರು, ಆ ಬಳಿಕ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾದರು. ಟಾಕ್ಸಿಕ್ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಯಶ್ ಅವರನ್ನು ತೆರೆ ಮೇಲೆ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.

ವೇಣು ಸ್ವಾಮಿ ಅವರು ಸೆಲೆಬ್ರಿಟಿಗಳ ಬಗ್ಗೆ ಜ್ಯೋತಿಷ್ಯ ಹೇಳುವಂತಿಲ್ಲ ಎಂದು ಹೇಳಲಾಗಿತ್ತು. ಆದರೂ ಕೂಡ ಅವರು Eha Tv Live ಅಲ್ಲಿ ಯಶ್ ಬಗ್ಗೆ ಮಾತನಾಡಿದ್ದಾರೆ, ಎರಡು ತಿಂಗಳ ಹಿಂದೆ ಈ ಸಂದರ್ಶನ ನಡೆದಿದ್ದು, ಈಗ ವಿಡಿಯೋ ವೈರಲ್ ಆಗ್ತಿದೆ. ಯಶ್ ಅಭಿಮಾನಿಗಳು ವೇಣು ಸ್ವಾಮಿ ಮಾತಿಗೆ ಕಿಡಿ ಕಾರಿದ್ದಾರೆ.

ನಟ ಯಶ್ ಕಷ್ಟದಿಂದ ಬಂದವರು, ಅವರಿಗೆ ಜೀವನದಲ್ಲಿ ಸ್ಪಷ್ಟತೆ ಇದೆ. ಅಷ್ಟೇ ಅಲ್ಲದೆ ಒಳ್ಳೆಯ ಸಿನಿಮಾ ಕೊಡಬೇಕು ಎನ್ನುವ ಕಾರಣಕ್ಕೆ ಅವರು ಕೆಲ ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಂಡಿಲ್ಲ ಅಷ್ಟೇ.

"ನಾನು ತೆಲುಗು ಹೀರೋ ಆದರೆ ಮಾತನಾಡುತ್ತಿರಲಿಲ್ಲ, ಕನ್ನಡ ಆಗಿದ್ದಕ್ಕೆ ಮಾತನಾಡುತ್ತಿದ್ದೇನೆ" ಎಂದು ಜ್ಯೋತಿಷಿ ವೇಣು ಸ್ವಾಮಿ ಅವರು ಮಾತನಾಡಿದ್ದಾರೆ.

"ಯಶ್ ಎಂಬ ಹೀರೋ ಇದ್ದಾರೆ, ಅವರ ಪರಿಸ್ಥಿತಿ ಭಯಂಕರವಾಗಿದೆ, ಕೆಜಿಎಫ್ ಎಂಬ ಎರಡು ಸಿನಿಮಾಗಳನ್ನು ನೀಡಿದ್ದು, ಜನರಿಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಆ ನಿರೀಕ್ಷೆಯನ್ನು ತಲುಪಬೇಕು, ಸೆಲೆಬ್ರಿಟಿ ಸ್ಟೇಟಸ್ ಹ್ಯಾಂಡಲ್ ಮಾಡೋದು ಸುಲಭ ಇಲ್ಲ" ಎಂದು ವೇಣು ಸ್ವಾಮಿ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

Source link
ನಟ ಯಶ್ ಡಿಪ್ರೆಶನ್‌ನಲ್ಲಿದ್ದಾರೆ; ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಮಾತಿಗೆ ರಾಕಿಂಗ್ ಸ್ಟಾರ್ ಫ್ಯಾನ್ಸ್ ಗರಂ!