
ಮನೆಯ ಅಂಗಳದಲ್ಲಿರುವ ತುಳಸಿ ಗಿಡಕ್ಕೆ ಪ್ರತಿದಿನ ಸಂಜೆ ತುಪ್ಪದ ದೀಪ ಹಚ್ಚಿ ಪ್ರದಕ್ಷಿಣೆ ಹಾಕಿ. ಹೀಗೆ ಮಾಡುವುದರಿಂದ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ದೂರ ಆಗಲಿವೆ. ಉದ್ಯೋಗ ಸ್ಥಳದಲ್ಲಿ ಇರುವ ಗೊಂದಲ ಬಗೆಹರಿಯುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮಲ್ಲಿ ಸ್ವಲ್ಪ ದೂರ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿಕೊಳ್ಳಬಹುದು ಅಥವಾ ಹೊರಟು ಬಿಡಬಹುದು. ಇದರಿಂದ ದೀರ್ಘಾವಧಿಯಲ್ಲಿ ಬಹಳ ದೊಡ್ಡ ಮಟ್ಟದ ಅನುಕೂಲವಿದೆ. ಆದರೆ ಹೊರಡುವ ಮುನ್ನ ಕುಟುಂಬದ ಕಡೆಯಿಂದ ಒತ್ತಡವಂತೂ ಇರುತ್ತದೆ. ಆದರೆ ಅದು ನಿಮ್ಮ ಕೆಲಸ ಯಶಸ್ವಿಯಾದ ಮೇಲೆ ಕರಗಿ ಹೋಗಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮಗೆ ಚೆನ್ನಾಗಿ ಗೊತ್ತಿರುವ ವಿಷಯದಲ್ಲೇ ನಿಮ್ಮಿಂದ ಕೆಲವು ತಪ್ಪುಗಳು ಆಗಬಹುದು. ಮುಖ್ಯವಾಗಿ ಆತ್ಮವಿಶ್ವಾಸದ ಒಳ್ಳೆಯದಲ್ಲ. ಅದರಲ್ಲೂ ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳು ನಿಮ್ಮ ಪ್ರಶ್ನೆ ಕೇಳಿದಾಗ ಒಮ್ಮೆ ಪರಿಶೀಲನೆ ಮಾಡಿ, ನಂತರವೇ ಉತ್ತರವನ್ನು ಹೇಳಿ. ಕೆಲವು ಜವಾಬ್ದಾರಿಗಳನ್ನು ನಿಮಗೆ ವಹಿಸುವುದಕ್ಕೆ ಕುಟುಂಬದಲ್ಲಿ ಹಾಗೂ ಉದ್ಯೋಗ ಸ್ಥಳದಲ್ಲಿ ಕೇಳಲಿದ್ದಾರೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಉತ್ತಮವಾದ ಸಂಬಳ ಮತ್ತು ಹುದ್ದೆಯ ಜೊತೆಗೆ ಆಫರ್ ಬರಲಿದೆ. ಆದ್ದರಿಂದ ಈ ಅವಕಾಶವನ್ನು ಬೇಡವೆಂದರೂ ಮೊದಲು ಒಂದಕ್ಕೆ ನಾಲ್ಕು ಬಾರಿ ಎಂಬಂತೆ ಆಲೋಚನೆ ಮಾಡುವುದು ಒಳ್ಳೆಯದು. ಸಾಕು ಪ್ರಾಣಿಗಳನ್ನು ಮನೆಗೆ ತರುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ದಿನದ ಕೊನೆ ಹೊತ್ತಿಗೆ ಮನಸ್ಸಿಗೆ ಹೆಚ್ಚು ಸಂತೋಷ ಎನಿಸುವಂಥ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿದೆ.
ಲೇಖನ- ಸ್ವಾತಿ ಎನ್.ಕೆ.