ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯ ವಿನ್ಯಾಸ, ಅದರ ವಸ್ತುಗಳ ಜೋಡಣೆ ಮತ್ತು ಅಡುಗೆ ಮಾಡುವ ದಿಕ್ಕು ಇವೆಲ್ಲವೂ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಮಾನ್ಯವಾಗಿ, ಅಡುಗೆಮನೆಗಳನ್ನು ಆಗ್ನೇಯ (ಸೌತ್-ಈಸ್ಟ್) ಅಥವಾ ವಾಯುವ್ಯ (ನಾರ್ತ್-ವೆಸ್ಟ್) ದಿಕ್ಕಿನಲ್ಲಿ ಆಯ್ಕೆ ಮಾಡಲಾಗುತ್ತದೆ. ಅಡುಗೆಮನೆಯ ಸ್ಥಳ ಯಾವುದೇ ಆಗಿದ್ದರೂ, ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡುವುದು ಶುಭಕರ. ಪೂರ್ವ ದಿಕ್ಕಿಗೆ ಇಂದ್ರ ಅಧಿಪತಿಯಾಗಿರುತ್ತಾನೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸ್ಥಾಪಿಸಿದ ಡಾ. ಬಾಸ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಅಡುಗೆ ಮಾಡಿದ ನಂತರ, ಆಹಾರ ತುಂಬಿದ ಪಾತ್ರೆಗಳನ್ನು ಯಾವ ದಿಕ್ಕಿಗೆ ಇರಿಸಬೇಕು ಎಂಬ ಪ್ರಶ್ನೆ ಅನೇಕರಿಗೆ ಇರುತ್ತದೆ. ಶಾಸ್ತ್ರಗಳ ಪ್ರಕಾರ, ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಿದ ನಂತರ, ಆಹಾರ ಉತ್ತರದ ಕಡೆ, ಅಂದರೆ ನಮ್ಮ ಎಡ ಉತ್ತರದ ಕಡೆ, ಅಂದರೆ ನಮ್ಮವರಿಗೆ ಇಳಿಸುವುದು ಸರ್ವಶ್ರೇಷ್ಠ. ಉತ್ತರ ದಿಕ್ಕು ಕುಬೇರನ ಅಧಿಪತ್ಯ ಮತ್ತು ಈ ದಿಕ್ಕಿಗೆ ಆಹಾರ ನೀಡುವುದರಿಂದ ಸಂತೃಪ್ತಿ ಆಹಾರಕ್ಕೆ ಹೆಚ್ಚು ಶಕ್ತಿ ಮತ್ತು ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ. ಇದು ನೈವೇದ್ಯವಾಗಿ ಅರ್ಪಿತವಾಗಿ, ನಂತರ ನಾವು ಸೇವಿಸಬಹುದು.
ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!
ಆದರೆ, ದಕ್ಷಿಣ ದಿಕ್ಕಿಗೆ ಇರಿಸುವುದನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ. ದಕ್ಷಿಣ ದಿಕ್ಕು ಯಮನ ದಿಕ್ಕು ಮತ್ತು ಪಿತೃಗಳಿಗೆ ಸಂಬಂಧಿಸಿದ್ದು. ಈ ದಿಕ್ಕಿಗೆ ಇರಿಸಿದರೆ ಅದು ಪಿತೃಗಳಿಗೆ ಅರ್ಪಿತವಾಗುತ್ತದೆ. ಇದರಿಂದ ಅನಾರೋಗ್ಯ, ಮಾನಸಿಕ ನೆಮ್ಮದಿ ಕೊರತೆ, ಮತ್ತು ಕುಟುಂಬದಲ್ಲಿ ಸಣ್ಣಪುಟ್ಟ ಕಲಹಗಳು ಉಂಟಾಗುವ ಸಾಧ್ಯತೆಗಳಿವೆ. ಪಿತೃಗಳಿಗೆ ಪಿಂಡ ಹಾಕುವಾಗ ಅಥವಾ ಆಹಾರ ಅರ್ಪಿಸುವಾಗ ದಕ್ಷಿಣ ದಿಕ್ಕಿನ ಕಡೆಗೆ ನೀಡುವುದು ಇದೇ ಕಾರಣಕ್ಕಾಗಿಯೇ. ಇನ್ನು ಪಶ್ಚಿಮ ದಿಕ್ಕಿಗೂ (ಶನಿ ಮತ್ತು ವರುಣರ ದಿಕ್ಕು) ಆಹಾರ ಇಳಿಸುವುದು ಶುಭಕರವಲ್ಲ ಎಂದು ಹೇಳದಿದ್ದರೆ. ಅಡುಗೆ ಮನೆಯು ಮಧ್ಯದಲ್ಲಿ ಇದ್ದಾಗ ಪೂರ್ವಕ್ಕೆ ಇಳಿಸಲು ಸಾಧ್ಯವಿಲ್ಲದಿದ್ದರೆ, ಉತ್ತರ ದಿಕ್ಕೇ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ