ಬಿಗ್ಬಾಸ್ ಕನ್ನಡ ಸೀಸನ್ 12ರ (ಬಿಗ್ ಬಾಸ್ ಕನ್ನಡ 12) ಫಿನಾಲೆ ವಾರ ಶುರುವಾಗಿದೆ. ಸ್ಪರ್ಧಿಗಳಿಗಾಗಿ ವೋಟಿಂಗ್ ಲೈನ್ ಓಪನ್ ಆಗಿದ್ದು, ತಮಗೆ ಬೇಕಾದವರಿಗೆ ಮತಗಳನ್ನು ಹಾಕುತ್ತಿದ್ದಾರೆ. ಗಿಲ್ಲಿ ಅಭಿಮಾನಿಗಳು ಸಹ ಅಭಿಯಾನ ಆರಂಭಿಸಿದ್ದು, ಗಿಲ್ಲಿಯ ಗೆಳೆಯರು ಕೆಲವು ಅಭಿಮಾನಿಗಳು ಇತ್ತೀಚೆಗೆ ಪ್ರೊಸೆಷನ್ ಸಹ ನಡೆಸಿದ್ದರು. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಖುದ್ದು ಗಿಲ್ಲಿ ಪರವಾಗಿ ಮತ ಚಲಾಯಿಸುವಂತೆ ಕೋರಿದ್ದರು. ಇದೀಗ ಬೆಂಗಳೂರಿನ ಕೆಲ ಆಟೋ ಚಾಲಕರು ಗಿಲ್ಲಿಗೆ ಬೆಂಬಲ ಘೋಷಿಸಿದ್ದಾರೆ, ಗಿಲ್ಲಿ ಬಿಗ್ ಬಾಸ್ ಗೆದ್ದರೆ ಬೆಳಿಗ್ಗೆ ಐದು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಉಚಿತ ಪ್ರಯಾಣ ಸೇವೆಯನ್ನು ನೀಡುವುದಾಗಿ ಘೋಷಿಸಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ