ಅಕ್ರಮ ಸಂಬಂಧದ ಕಥೆ; ಹಾಟ್​ಸ್ಟಾರ್​ನಲ್ಲಿರೋ ಈ ಮಲಯಾಳಂ ಸಿನಿಮಾನ ಮಿಸ್ ಮಾಡಬೇಡಿ

ಅಕ್ರಮ ಸಂಬಂಧದ ಕಥೆ; ಹಾಟ್​ಸ್ಟಾರ್​ನಲ್ಲಿರೋ ಈ ಮಲಯಾಳಂ ಸಿನಿಮಾನ ಮಿಸ್ ಮಾಡಬೇಡಿ


ಪ್ರತಿ ವಾರ ಒಟಿಟಿಯಲ್ಲಿ (OTT) ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಕೆಲವು ಸಿನಿಮಾಗಳು ಸಾಕಷ್ಟು ಗಮನ ಸೆಳೆಯುತ್ತವೆ. ಪರಭಾಷೆಯ ಸಿನಿಮಾಗಳಾದರೂ ಡಬ್ಬಿಂಗ್ ಕಾರಣದಿಂದ ಕನ್ನಡ ಪ್ರದರ್ಶನವನ್ನು ತಲುಪುತ್ತದೆ. ಈಗ ಮಲೆಯಾಳನ್ನ ಸಿನಿಮಾ ಒಂದು ಒಟಿಟಿಗೆ ಕಾಲಿಟ್ಟಿದೆ. ಈ ಚಿತ್ರದ ಕಥೆ ಇರೋದು ಅಕ್ರಮ ಸಂಬಂಧದ ಬಗ್ಗೆ. ಹಳ್ಳಿಯಲ್ಲಿ ಸಾಗುವ ಕಥೆ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಕನ್ನಡದಲ್ಲಿ ‘ಕಥೆಯೊಂದು ಶುರುವಾಗಿದೆ’ ಹೆಸರಿನ ಸಿನಿಮಾ ಬಂದಿತ್ತು. ದಿಗಂತ್ ಈ ಚಿತ್ರಕ್ಕೆ ಹೀರೋ. ಇದನ್ನು ನಿರ್ದೇಶನ ಮಾಡಿದ್ದು, ಸೆನ್ನಾ ಹೆಗ್ಡೆ. ಈಗ ನಾವು ಹೇಳುತ್ತಿರುವ ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೆ ಸೆನ್ನಾ ಹೆಗ್ಡೆ. ಈ ಹೆಸರು ‘ಅವಿಹಿತಮ್’ ಎಂದು. ಈ ಸಿನಿಮಾ ಅಕ್ಟೋಬರ್ 9 ರಂದು ಥಿಯೇಟರ್ ನಲ್ಲಿ ರಿಲೀಸ್ ಆಯಿತು. ಈಗ ಸಿನಿಮಾ ಒಟಿಟಿಗೆ ಬಂದಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿಲ್ಲ.

ಒಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿರೋ ಪ್ರಕಾಶನ್ (ರೆಂಜಿ ಕಾಂಕೋಲ್) ಫ್ರೆಂಡ್ಸ್ ಜೊತೆ ಕುಡಿದು ರಾತ್ರಿ ಮನೆಗೆ ಬರುತ್ತಿರುತ್ತಾನೆ. ಆಗ ತೋಟದಲ್ಲಿ ಏನೋ ಶಬ್ದವಾಗದಂತೆ ಕೇಳುತ್ತದೆ. ಮಹಿಳೆಯೊಬ್ಬಳು ಯುವಕನ ಜೊತೆ ಕಿಸ್ ಮಾಡೋ ದೃಶ್ಯ ಅದು. ಈ ವಿಷಯವನ್ನು ಪ್ರಕಾಶನ ವೇಣುಗೆ (ಉನ್ನಿ ರಾಜ್) ಹೇಳುತ್ತಾನೆ. ಮರುದಿನ ರಾತ್ರಿ ಬಂದು ನೋಡಿದರೆ ಮತ್ತದೇ ದೃಶ್ಯ. ನಂತರ ಇನ್ನೂ ಕೆಲವರಿಗೆ ಈ ವಿಷಯ ಗೊತ್ತಾಗುತ್ತದೆ. ಅಷ್ಟಕ್ಕೂ ಯಾರು ಆ ಇಬ್ಬರು? ನಂತರ ಅವರನ್ನು ಹೇಗೆ ಪತ್ತೆ ಹಚ್ಚದಿದ್ದರೆ? ಕ್ಲೈಮ್ಯಾಕ್ಸ್ ನಲ್ಲಿ ಏನಾಗುತ್ತದೆ ಎಂಬುದೇ ಸಿನಿಮಾ.

ಇದನ್ನೂ ಓದಿ: ಈ ವಾರ ಒಟಿಟಿಗೆ ಹಿಟ್ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

ಇಲ್ಲಿ ಸಿನಿಮಾ ಮೇಕಿಂಗ್ ಅಷ್ಟು ಚೆನ್ನಾಗಿಲ್ಲ. ಆದರೆ, ಸಿನಿಮಾದ ಕಥೆ ಹೊಸದು ಎನಿಸುತ್ತದೆ. ಕೊನೆಯವರೆಗೂ ಸಸ್ಪೆನ್ಸ್ ಉಳಿಸಿಕೊಂಡು ಹೋಗುತ್ತದೆ. ಇದರ ಜೊತೆಗೆ ಒಂದಷ್ಟು ಹಾಸ್ಯವನ್ನು ಕೂಡ ನಿರ್ದೇಶಕರು ಬೆರೆಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಒಂದೊಳ್ಳೆಯ ಸಂದೇಶ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಒಮ್ಮೆ ಟೈಮ್ ಪಾಸ್ ಗೆ ಈ ಸಿನಿಮಾ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *