Things to avoid after abortion: ಗರ್ಭಪಾತದ ನಂತರ ರೋಗಲಕ್ಷಣಗಳನ್ನು ನಿರ್ವಹಿಸಲು ಆರೋಗ್ಯಕರ ಆಹಾರವು ಅತ್ಯಗತ್ಯ. ಆದ್ದರಿಂದ ಮಹಿಳೆ ಎಲ್ಲಾ ರೀತಿಯ ಪೋಷಕಾಂಶಗಳನ್ನು ಸೇವಿಸುವುದು ಮತ್ತು ಕೆಲವು ಆಹಾರ ಪದ್ಧತಿಗಳ ಬಗ್ಗೆ ಗಮನ ಹರಿಸುವುದು ಮುಖ್ಯ.

ಗರ್ಭಪಾತದ ನಂತರ ಮಹಿಳೆ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸುತ್ತಾಳೆ. ದೀರ್ಘಕಾಲದವರೆಗೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಮಹಿಳೆ ಅನುಭವಿಸಬಹುದು. ಈ ಅವಧಿಯಲ್ಲಿ ಹೊಟ್ಟೆ ಸೆಳೆತ, ನೋವು, ದೌರ್ಬಲ್ಯ ಮತ್ತು ಸುಮಾರು ಎರಡು ವಾರಗಳವರೆಗೆ ಅತಿಯಾದ ರಕ್ತಸ್ರಾವವನ್ನು ಅನುಭವಿಸಬಹುದು. ಇಂತಹ ದೈಹಿಕ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಮಹಿಳೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಗರ್ಭಪಾತದ ನಂತರ ರೋಗಲಕ್ಷಣಗಳನ್ನು ನಿರ್ವಹಿಸಲು ಆರೋಗ್ಯಕರ ಆಹಾರವು ಅತ್ಯಗತ್ಯ. ಆದ್ದರಿಂದ ಮಹಿಳೆ ಎಲ್ಲಾ ರೀತಿಯ ಪೋಷಕಾಂಶಗಳನ್ನು ಸೇವಿಸುವುದು ಮತ್ತು ಕೆಲವು ಆಹಾರ ಪದ್ಧತಿಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ಈ ಲೇಖನದಲ್ಲಿ ಗರ್ಭಪಾತದ ನಂತರ ಮಹಿಳೆ ಏನು ತಿನ್ನಬೇಕು ಮತ್ತು ಏನನ್ನ ತಿನ್ನಬಾರದು ಎಂದು ನೋಡೋಣ..

ಗರ್ಭಪಾತದ ನಂತರ ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಸ್ನಾಯುಗಳು ಬಿಲ್ಡ್ ಆಗಲು ಸಹಾಯವಾಗುತ್ತೆ. ಪ್ರೋಟೀನ್ ಗರ್ಭಪಾತದ ನಂತರ ನಿಮ್ಮ ದೇಹವು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಗರ್ಭಪಾತದ ನಂತರ ವಿವಿಧ ರೀತಿಯ ಆಹಾರಗಳನ್ನು ಸೇವಿಸುವುದರಿಂದ ರಕ್ತದ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಆರೋಗ್ಯವನ್ನು ಸುಧಾರಿಸಲು ನೀವು ತೆಂಗಿನ ನೀರು, ಡಿಟಾಕ್ಸ್ ಪಾನೀಯಗಳು ಮತ್ತು ದಾಳಿಂಬೆ ರಸವನ್ನು ಸೇವಿಸಬೇಕು.

ಗರ್ಭಿಣಿಯರು ಕ್ಯಾಲ್ಸಿಯಂ ಕೊರತೆಯಿಂದ ಬಳಲುವ ಸಾಧ್ಯತೆ ಹೆಚ್ಚು. ಆದ್ದರಿಂದ ಗರ್ಭಪಾತದ ನಂತರ ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಅವರ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

* ಗರ್ಭಪಾತದ ನಂತರ ಸಕ್ಕರೆ ಉತ್ಪನ್ನಗಳು ಮತ್ತು ಜಂಕ್ ಫುಡ್‌ಗಳನ್ನು ತಪ್ಪಿಸಬೇಕು. ಗರ್ಭಪಾತದ ನಂತರ ಹೆಚ್ಚು ಸಕ್ಕರೆ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು.*ಗರ್ಭಪಾತದ ನಂತರ ಮದ್ಯ ಸೇವಿಸಬಾರದು. ಏಕೆಂದರೆ ಅದು ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

*ಗರ್ಭಪಾತದ ನಂತರ ಜಂಕ್ ಫುಡ್ ತಿನ್ನುವುದು ಒಳ್ಳೆಯದಲ್ಲ. ಆದ್ದರಿಂದ ನೀವು ಬರ್ಗರ್, ಪಿಜ್ಜಾ ಮತ್ತು ಫ್ರೆಂಚ್ ಫ್ರೈಸ್ ನಂತಹ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು.

Source link
ಈ ವಿಷ್ಯ ಗೊತ್ತಿದ್ರೆ ಗರ್ಭಪಾತದ ನಂತ್ರ ವೇಗವಾಗಿ ಗುಣಮುಖರಾಗುತ್ತೀರಿ, ದೇಹವೂ ಆರೋಗ್ಯವಾಗಿರುತ್ತೆ