ಕನ್ನಡದ ನಟಿಗೆ ಲೈಂಗಿಕ ಕಿರುಕುಳ; ನಿರ್ಮಾಪಕ ಅರವಿಂದ್ ವೆಂಕಟೇಶ ರೆಡ್ಡಿ ಬಂಧನ

ಕನ್ನಡದ ನಟಿಗೆ ಲೈಂಗಿಕ ಕಿರುಕುಳ; ನಿರ್ಮಾಪಕ ಅರವಿಂದ್ ವೆಂಕಟೇಶ ರೆಡ್ಡಿ ಬಂಧನ


ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ನಟಿಯರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎವಿಆರ್ ಗ್ರೂಪ್ ಸಂಸ್ಥಾಪಕರಾಗಿರುವ ಅರವಿಂದ್ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಎಸಿಪಿ ಚಂದನ್ ಮತ್ತು ತಂಡದಿಂದ ಆರೋಪಿಯನ್ನು ಬಂಧಿಸಲಾಗಿದೆ. ಶ್ರೀಲಂಕಾದಿಂದ ಬೆಂಗಳೂರಿಗೆ ಬರುವಾಗ ಆರೋಪಿ ಲಾಕ್ ಆಗಿದ್ದಾನೆ. ಕಳೆದ ತಿಂಗಳು 17ರಂದು ಅರವಿಂದ್ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.

ಕನ್ನಡದಲ್ಲಿ 9ಕ್ಕೂ ಅಧಿಕ ಸಿನಿಮಾಗಳಲ್ಲಿ ಈ ನಟಿ ನಟಿಸಿದ್ದಾರೆ. 2021ರಲ್ಲಿ ಅರವಿಂದ್ಗೂ ಈ ನಟಿಯ ಪರಿಚಯ ಬೆಳೆದಿತ್ತು. 2022ರಲ್ಲಿ ಶ್ರೀಲಂಕಾದಲ್ಲಿ ನಡೆದ ‘ಲಾರ್ಸ್ ಕ್ರಿಕೆಟ್ ಕಪ್’ ಪ್ರದರ್ಶನಕ್ಕೆ ಬರುವಂತೆ ಅರವಿಂದ್ ನಟಿ ಬಳಿ ಕೇಳಿದ್ದರು. ಅದೇ ರೀತಿ ನಟಿ ತೆರಳಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಅಲ್ಲಿಂದ ಪ್ರೀತಿ-ಕಾಳಜಿಯಿಂದ ಅರವಿಂದ್ ನಡೆದುಕೊಳ್ಳುತ್ತಿದ್ದನಂತೆ. ಆ ಬಳಿಕ 2022ರ ಆಗಸ್ಟ್‌ನಲ್ಲಿ ಅರವಿಂದ್ ನಟಿಯ ಜೊತೆ ಸಂಪರ್ಕ ಕಳೆದುಕೊಂಡರು. ಇದಕ್ಕೆ ಕಾರಣ ನಟಿಗೆ ತಿಳಿದಿರಲಿಲ್ಲ.

ನಂತರ ಅರವಿಂದ್ ಮತ್ತೆ ಜೊತೆ ಸಂಪರ್ಕ ಬೆಳೆಸಿದ್ದೂ ಅಲ್ಲದೆ, ನಟಿಗೆ ಕಿರುಕುಳ ನೀಡಲು ನಟಿ ಶುರು ಮಾಡಿದ್ದಾರೆ. ಆತನ ಮಾನಸಿಕ ಸ್ಥಿತಿ ಹಾಗೂ ಕುಡಿತದ ಚಟದ ಬಗ್ಗೆ ನಟಿಗೆ ಆಗ ಗೊತ್ತಾಯಿತು. 2024ರಲ್ಲಿ ಒಮ್ಮೆ ಅರವಿಂದ್ ನಟಿಗೆ ಕರೆ ಮಾಡಿದ್ದೂ ಅಲ್ಲದೆ, ನಿನ್ನನ್ನು ಮದುವೆ ಆಗುತ್ತೇನೆ ಎಂದು ಹೇಳಿದ್ದ. ಇದರಿಂದ ಭಯಗೊಂಡ ನಟಿ ನೂರು ಮಂದಿಯನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಈ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ನಂತರ ಅರವಿಂದ್ ಮನೆಗೆ ಬಂದು ನಟಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಈ ವಿಚಾರವನ್ನು ನಟಿಯ ಮನೆಯವರಿಗೆ ಹೇಳಲು ಅವಕಾಶವನ್ನು ನೀಡಲಿಲ್ಲ. ಕರೆ ಮಾಡುತ್ತೇನೆ ಮೊಬೈಲ್ ಕೊಡು ಎಂದು ನಟಿ ಹೇಳಿದಾಗ, ಅರವಿಂದ್ ಏಕಾಏಕಿ ನಟಿಯ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೆ. ಬಟ್ಟೆ ಹರಿದು ಅರೆಬೆತ್ತಲೆ ಮಾಡಿದ್ದ.

ನಂತರ ನಟಿ ಬೇರೆ ದಾರಿ ಕಾಣದೆ ತಾಯಿ ಬಳಿ ವಿಚಾರ ಹೇಳಿದ್ದಾರೆ. ಆಗ ಅರವಿಂದ್, ‘ನಟಿ ನನ್ನಿಂದ ಸಾಕಷ್ಟು ಖರ್ಚು ಮಾಡಿದ್ದಾಳೆ. ಕೋಟಿ ರೂಪಾಯಿ ಕೊಡಬೇಕು’ ಎಂದು ಬೆದರಿಕೆ ಹಾಕಿದ್ದ. ನಂತರ ನಟಿ ಹಾಗೂ ಅವರ ಗೆಳೆಯರ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಅರವಿಂದ್ ಮಾಡಿದ್ದರಂತೆ. ಈ ಎಲ್ಲಾ ಕಾರಣಕ್ಕೆ ಅವರನ್ನು ಬಂಧಿಸುವಂತೆ ನಟಿ ಕೋರಿದ್ದರು.

ಇದನ್ನೂ ಓದಿ: ಅನುಪಮಾ ಪರಮೇಶ್ವರನ್‌ಗೆ ಕಿರುಕುಳ ನೀಡಿದ 20 ವರ್ಷದ ಹುಡುಗಿ; ಕೇಸ್ ಜಡಿದ ನಟಿ

ಅರವಿಂದ್ ರಿಯಲ್ ಎಸ್ಟೇಟ್ ಉದ್ಯಮಿ. ‘ಮಹಾರಾಜ ಬಳ್ಳಾರಿ ಟಸ್ಕರ್ಸ್’ ಕ್ರಿಕೆಟ್ ತಂಡದ ನಾಯಕ ಕೂಡ ಹೌದು. ಆತ ಸಿನಿಮಾ ನಿರ್ಮಾಪಕ ಕೂಡ ಹೌದು. ಚಲನ ಚಿತ್ರ ನಟ, ನಟಿಯರಿಗಾಗಿಯೇ ಹಲವು ಕ್ರಿಕೆಟ್ ಪಂದ್ಯಾವಳಿ ನಡೆಸಿದ್ದ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *