ಅಲಿ ಖಮೇನಿ ಕಥೆ ಮುಗಿತಾ?: ಇಸ್ರೇಲ್ ಮಾಧ್ಯಮಗಳ ಸಾವಿನ ವರದಿ ಬೆನ್ನಲ್ಲೇ ಇರಾನ್ ಸಚಿವರ ಹೇಳಿದ್ದೇನು?

ಅಲಿ ಖಮೇನಿ ಕಥೆ ಮುಗಿತಾ?: ಇಸ್ರೇಲ್ ಮಾಧ್ಯಮಗಳ ಸಾವಿನ ವರದಿ ಬೆನ್ನಲ್ಲೇ ಇರಾನ್ ಸಚಿವರ ಹೇಳಿದ್ದೇನು?


ಟೆಹ್ರಾನ್, ಫೆ.28: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಕುರಿತಾದ ವದಂತಿಗಳು ಪ್ರಪಂಚದಾದ್ಯಂತ ಸಂಚಲನ ಮೂಡಿಸಿವೆ. ಇಸ್ರೇಲ್‌ನ ಪ್ರಮುಖ ಮಾಧ್ಯಮ ಸಂಸ್ಥೆಗಳು ವರದಿ ಮಾಡಿರುವ ಪ್ರಕಾರ, ಇಸ್ರೇಲ್ ಮತ್ತು ಅಮೆರಿಕ ಇತ್ತೀಚೆಗೆ ಇರಾನ್‌ನ ಪ್ರಮುಖ ನೆಲೆಗಳ ಮೇಲೆ ನಡೆಸಿದ ವಾಯುದಾಳಿಯಲ್ಲಿ ಖಮೇನಿ ಅವರು ಪ್ರಕಟಿಸಿದ್ದಾರೆ. ಕೆಲವು ವರದಿಗಳು ಖಮೇನಿ ಅವರ ಆರೋಗ್ಯ ಹದಗೆಟ್ಟಿದ್ದು, ಅವರ ರಹಸ್ಯ ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ.

ಈ ವದಂತಿಗಳನ್ನು ಇರಾನ್ ಸರ್ಕಾರವು ಸಾರಸಗಟಾಗಿ ತಳ್ಳಿಹಾಕಿದೆ. ಇರಾನ್‌ನ ವಿದೇಶಾಂಗ ಸಚಿವರು ಮತ್ತು ಸರ್ಕಾರದ ವಕ್ತಾರರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ನಮ್ಮ ಪರಮೋಚ್ಚ ನಾಯಕ ಅಲಿ ಖಮೇನಿ ಅವರು ಸುರಕ್ಷಿತವಾಗಿದ್ದಾರೆ ಮತ್ತು ಸಂಪೂರ್ಣವಾಗಿ ಜೀವಂತವಾಗಿದ್ದಾರೆ.

ಇದನ್ನೂ ಓದಿ: ಎಲ್ಲಿ ಬೀಳುತ್ತೆ, ಎಷ್ಟು ಜೀವ ಹೋಗುತ್ತೆ ಗೊತ್ತಿಲ್ಲ: ಆಕಾಶದಿಂದ ಬಿದ್ದ ಕ್ಷಿಪಣಿ, ಕತಾರ್‌ನಲ್ಲಿ ಬೆಂಕಿಯ ಜ್ವಾಲೆ

ಯುದ್ಧದ ಸಮಯದಲ್ಲಿ ಎರಡೂ ದೇಶಗಳ ನಡುವೆ ಕೇವಲ ಕ್ಷಿಪಣಿ ದಾಳಿಯಷ್ಟೇ ಅಲ್ಲದೆ, ‘ಸೈಕಲಾಜಿಕಲ್ ವಾರ್’ (ಮಾನಸಿಕ ಯುದ್ಧ) ಕೂಡ ನಡೆಯುತ್ತಿದೆ. ಶತ್ರು ದೇಶದ ನಾಯಕ ಸತ್ತಿದ್ದಾನೆ ಎಂದು ಬಿಂಬಿಸುವ ಮೂಲಕ ಆ ದೇಶದ ಸೈನ್ಯ ಮತ್ತು ಜನರ ಆತ್ಮವಿಶ್ವಾಸವನ್ನು ಕುಗ್ಗಿಸುವ ಇಂತಹ ವರದಿಗಳ ಹಿಂದಿನ ತಂತ್ರಜ್ಞಾನ ಇನ್ನು ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ ಉಪಗ್ರಹ ಛಾಯಾಚಿತ್ರವು ಟೆಹ್ರಾನ್‌ನಲ್ಲಿರುವ ಖಮೇನಿ ಅವರ ಕಾಂಪೌಂಡ್‌ಗೆ ಹಾನಿಯಾಗಿದೆ ಎಂದು ತೋರಿಸಲಾಗಿದೆ, ಅದು ಅವರ ಅಧಿಕೃತ ನಿವಾಸವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *