Headlines

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಬಾಲರಾಮನ ವಿಗ್ರಹವನ್ನು ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಇತ್ತೀಚೆಗೆ, ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ರಾಮಲಲ್ಲಾ ಪೀಠದಿಂದ ಇಳಿದು ಬಂದು ಮಗುವನ್ನು ಎತ್ತಿಕೊಳ್ಳುವ ದೃಶ್ಯವಿದೆ.
ಶತಮಾನಗಳಿಂದ ಟೆಂಟ್​ನಲ್ಲಿ ವಾಸವಾಗಿದ್ದ ರಾಮಲಲ್ಲಾ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿ ಇನ್ನೇನು ಎರಡು ವರ್ಷಗಳು ಸಮೀಪವಾಗುತ್ತಿವೆ. ಜನವರಿ 22, 2024 ರಂದು ನಡೆದ ಭವ್ಯ ಸಮಾರಂಭದಲ್ಲಿ ಗರ್ಭಗುಡಿಯಲ್ಲಿ ರಾಮಲಲ್ಲಾನ ಸ್ಥಾಪನೆಯಾಗಿದೆ.

ಇಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಲರಾಮನ ವಿಗ್ರಹವನ್ನು ಕರ್ನಾಟಕದ ಶಿಲ್ಪಿ ಕೆತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ಬಾಲ ರಾಮನ ಮೂರ್ತಿ ಇದಾಗಿದೆ.

ಈ ಮೂರ್ತಿಯು ಸುಮಾರು 150 ಕೆಜಿಗಿಂತ ಹೆಚ್ಚು ತೂಕವಿದ್ದು, ಮಗುವಿನ ರೂಪದಲ್ಲಿರುವ ರಾಮಲಲ್ಲಾರನ್ನು ಪ್ರತಿನಿಧಿಸುತ್ತದೆ. ಈ ವಿಗ್ರಹವು ಮಂದಿರದ ಉದ್ಘಾಟನೆಯ ಕೇಂದ್ರಬಿಂದುವಾಗಿತ್ತು ಮತ್ತು ಸಾರ್ವಜನಿಕರ ದರ್ಶನಕ್ಕಾಗಿ ಜನವರಿ 23 ರಿಂದ ತೆರೆಯಲ್ಪಟ್ಟಿತು.

ಮೊನ್ನೆ ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮಧ್ವಜವನ್ನೂ ಸ್ಥಾಪಿಸಿ, ರಾಮಭಕ್ತರ ಮನಸ್ಸಿನಲ್ಲಿ ಅಚ್ಚಳಿಯದ ದಿನವನ್ನಾಗಿಸಿದರು.

ಅಯೋಧ್ಯೆಯಲ್ಲಿ ರಾಮಲಲ್ಲಾ ಸ್ಥಾಪನೆಯಾಗಿರುವ ದಿನದಿಂದಲೂ ಇದು ಪ್ರವಾಸಿ ತಾಣವಾಗಿದೆ. ಕೋಟ್ಯಂತರ ರಾಮಭಕ್ತರು ದೇಶ-ವಿದೇಶಗಳಿಂದ ಇಲ್ಲಿಗೆ ಆಗಮಿಸುತ್ತಿದ್ದಾರೆ.

ಹೇಳಿ ಕೇಳಿ ಇದು ಕೃತಕ ಬುದ್ಧಿಮತ್ತೆ (AI) ಯುಗ. ಇಂಥ ಸಂದರ್ಭದಲ್ಲಿ ಅಯೋಧ್ಯೆಯ ರಾಮನೇ ಪೀಠದಿಂದ ಇಳಿದು ಭಕ್ತರಿಗೆ ಪ್ರತ್ಯಕ್ಷರಾದರೆ ಹೇಗಿರತ್ತೆ ಎನ್ನುವ ಕುತೂಹಲದ ಎಐ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ರಾಮಲಲ್ಲಾ ಇಳಿದು ಬಂದು ಮಗುವೊಂದನ್ನು ಎತ್ತಿಕೊಂಡಿರುವಂತೆ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಧರ್ಮಟೋಗ್ರಫಿ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿರುವ ವಿಡಿಯೋ ಇಲ್ಲಿದೆ ನೋಡಿ.
View this post on Instagram
A post shared by Dharma Raj Ranabhat ️️ (@dharmatography)

Source link

Leave a Reply

Your email address will not be published. Required fields are marked *