
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 48 ಬ್ಯಾಟರ್‌ಗಳು 2 ಸಾವಿರಕ್ಕಿಂತ ಅಧಿಕ ರನ್ ಕಲೆಹಾಕಿದ್ದಾರೆ. ಈ 48 ಬ್ಯಾಟರ್‌ಗಳಲ್ಲಿ 12 ಮಂದಿ 3 ಸಾವಿರಕ್ಕಿಂತ ಅಧಿಕ ರನ್ ಗಳಿಸಿದ್ದಾರೆ. ಇನ್ನು ಈ ಹನ್ನೆರಡು ಮಂದಿಯಲ್ಲಿ 4 ಸಾವಿರ ರನ್ ಗಡಿದಾಟಿರುವುದು ಕೇವಲ ಮೂವರು ಮಾತ್ರ. ಇವರಲ್ಲಿ ಅಗ್ರಸ್ಥಾನದಲ್ಲಿರುವುದು ಬಾಬರ್ ಆಝಂ.

ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಆಟಗಾರ ಬಾಬರ್ ಆಜಂ 36 ಬಾರಿ ಅಜೇಯ 50 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಬಾಬರ್ ಟಿ20 ಕ್ರಿಕೆಟ್‌ನಲ್ಲಿ 4500 ರನ್ ಪೂರೈಸಿದ್ದಾರೆ.

ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4500 ರನ್‌ಗಳ ಗಡಿದಾಟಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಬಾಬರ್ ಆಝಂ ತಮ್ಮದಾಗಿಸಿಕೊಂಡಿದ್ದಾರೆ. ಬಾಬರ್‌ನನ್ನು ಯಾವುದೇ ಬ್ಯಾಟರ್ 420 ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ.

ಈ ಪಟ್ಟಿಯಲ್ಲಿ ಭಾರತ ಟಿ20 ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಹಿಟ್ಮ್ಯಾನ್ 4231 ರನ್ ಕಲೆಹಾಕಿದರೆ, ಮೂರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 4188 ರನ್ ಗಳಿಸಿದ್ದಾರೆ. ಇದೀಗ ಇವರಿಬ್ಬರನ್ನು ಹಿಂದಿಕ್ಕಿ ಬಾಬರ್ ಹೊಸ ಮೈಲುಗಲ್ಲು ಮುಟ್ಟಿದ್ದಾರೆ.

ಪಾಕಿಸ್ತಾನ್ ಪರ ಈವರೆಗೆ 132 ಟಿ20 ಇನಿಂಗ್ಸ್ ಆಡಿರುವ ಬಾಬರ್ ಆಝಂ ಮೂರು ಶತಕ ಹಾಗೂ 39 ಅರ್ಧಶತಕಗಳೊಂದಿಗೆ ಒಟ್ಟು 4505 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ 4500ಕ್ಕಿಂತ ಅಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಂದು ಪ್ರಕಟಿಸಲಾಗಿದೆ – 8:03 am, ಮಂಗಳವಾರ, 3 ಫೆಬ್ರವರಿ 26