Headlines

ಭಾರತದ ವಿರುದ್ಧ ಬಾಬರ್ ಅಜಂ ರನ್ ಮಷೀನಾ? ಅಥವಾ ಠುಸ್ ಪಟಾಕಿನಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಭಾರತದ ವಿರುದ್ಧ ಬಾಬರ್ ಅಜಂ ರನ್ ಮಷೀನಾ? ಅಥವಾ ಠುಸ್ ಪಟಾಕಿನಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಭಾರತದ ವಿರುದ್ಧ ಬಾಬರ್ ಅಜಂ ರನ್ ಮಷೀನಾ? ಅಥವಾ ಠುಸ್ ಪಟಾಕಿನಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಪಾಕಿಸ್ತಾನದ ಸೂಪರ್ ಸ್ಟಾರ್ ಬ್ಯಾಟರ್ ಹಾಗೂ ರನ್ ಮಷೀನ್ ಎಂದೇ ಗುರುತಿಸಿಕೊಂಡಿರುವ ಬಾಬರ್ ಅಜಂ ಅವರ ಪ್ರದರ್ಶನ ಭಾರತದ ಮೇಲೆ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ.

ಇಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಪಾಕ್ ಬ್ಯಾಟಿಂಗ್‌ನ ಬೆನ್ನೆಲುಬು ಎನಿಸಿರುವ ಬಾಬರ್ ಅಜಂ ಆಟದ ಮೇಲೆ ಎಲ್ಲರ ಕಣ್ಣಿದೆ. ಆದರೆ, ಭಾರತದ ವಿರುದ್ಧ ಬಾಬರ್ ದಾಖಲೆ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ

ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರೂ, ಭಾರತದ ವಿರುದ್ಧದ ಟಿ20 ಪಂದ್ಯಗಳಲ್ಲಿ ಬಾಬರ್ ಪದೇ ಪದೇ ವಿಫಲರಾಗಿದ್ದಾರೆ. ಭಾರತದ ವಿರುದ್ಧ ಆಡಿದ ಐದು ಟಿ20 ಪಂದ್ಯಗಳಲ್ಲಿ ಬಾಬರ್ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ್ದಾರೆ.

ಭಾರತದ ವಿರುದ್ಧದ ಕೊನೆಯ ಐದು ಟಿ20 ಇನ್ನಿಂಗ್ಸ್‌ಗಳಲ್ಲಿ ಬಾಬರ್ ಗಳಿಸಿದ್ದು ಕೇವಲ 105 ರನ್. 2021ರ ವಿಶ್ವಕಪ್‌ನಲ್ಲಿ ಗಳಿಸಿದ ಅಜೇಯ 68 ರನ್‌ಗಳನ್ನು ಹೊರತುಪಡಿಸಿದರೆ, ಅವರ ಬ್ಯಾಟಿಂಗ್ ಸರಾಸರಿ ಕೇವಲ 9.25ಕ್ಕೆ ಇಳಿಯುತ್ತದೆ.

2021ರ ಟಿ20 ವಿಶ್ವಕಪ್‌ನಲ್ಲಿ ದುಬೈನಲ್ಲಿ ನಡೆದ ಪಂದ್ಯದಲ್ಲಿ ಮಾತ್ರ ಬಾಬರ್ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಆ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತ್ತು. ಬಾಬರ್ 68 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

2022ರಲ್ಲಿ ದುಬೈನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧದ ಎರಡೂ ಪಂದ್ಯಗಳಲ್ಲಿ ಬಾಬರ್ ವಿಫಲರಾದರು. ಗ್ರೂಪ್ ಹಂತದಲ್ಲಿ 10 ರನ್‌ಗಳಿಗೆ ಮತ್ತು ಸೂಪರ್ ಫೋರ್ ಹಂತದಲ್ಲಿ 14 ರನ್‌ಗಳಿಗೆ ಔಟಾದರು. ನಂತರ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ, ಭಾರತದ ವಿರುದ್ಧ ಆಡಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್‌ಗೆ ಔಟಾಗಿ ಬಾಬರ್ ಮುಖಭಂಗ ಅನುಭವಿಸಿದರು.
ಭಾರತ-ಪಾಕಿಸ್ತಾನ ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಅವರು 11 ಪಂದ್ಯಗಳಲ್ಲಿ 5 ಅರ್ಧಶತಕ ಸೇರಿದಂತೆ 70.28ರ ಸರಾಸರಿಯಲ್ಲಿ 492 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಪರ ಮೊಹಮ್ಮದ್ ರಿಜ್ವಾನ್ ಭಾರತದ ವಿರುದ್ಧ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ರಿಜ್ವಾನ್ 5 ಪಂದ್ಯಗಳಲ್ಲಿ 57ರ ಸರಾಸರಿಯಲ್ಲಿ 228 ರನ್ ಕಲೆಹಾಕಿದ್ದಾರೆ.

Source link

Leave a Reply

Your email address will not be published. Required fields are marked *