Bachchan Family Asset: ಗಂಡ, ಮಾವ, ಅತ್ತೆಗಿಂತ ಎಷ್ಟು ಶ್ರೀಮಂತೆ ಐಶ್ವರ್ಯಾ ರೈ ಬಚ್ಚನ್ ?

Bachchan Family Asset: ಗಂಡ, ಮಾವ, ಅತ್ತೆಗಿಂತ ಎಷ್ಟು ಶ್ರೀಮಂತೆ ಐಶ್ವರ್ಯಾ ರೈ ಬಚ್ಚನ್ ?

Bachchan Family Asset: ಗಂಡ, ಮಾವ, ಅತ್ತೆಗಿಂತ ಎಷ್ಟು ಶ್ರೀಮಂತೆ ಐಶ್ವರ್ಯಾ ರೈ ಬಚ್ಚನ್ ?

ಕೆಲವು ವರದಿಗಳ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ ತಮ್ಮ ಮಾವ ಅಮಿತಾಭ್, ಅತ್ತೆ ಜಯಾ ಮತ್ತು ಪತಿ ಅಭಿಷೇಕ್‌ಗಿಂತಲೂ ಹೆಚ್ಚು ಶ್ರೀಮಂತರಾಗಿದ್ದಾರೆ. ಈ ನಾಲ್ವರ ಒಟ್ಟು ಆಸ್ತಿ ಮೌಲ್ಯದ ಮಾಹಿತಿ ಇಲ್ಲಿದೆ.

52 ವರ್ಷದ ಬಾಲಿವುಡ್ ಬ್ಯೂಟಿ ಕ್ವೀನ್ ಐಶ್ವರ್ಯಾ ರೈ ಬಚ್ಚನ್ ಇಂದಿಗೂ ಬಹುಬೇಡಿಕೆಯ ನಟಿಯಾಗಿದ್ದಾರೆ. ದೇಶ ಮಾತ್ರವಲ್ಲ ವಿದೇಶಗಳಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಐಶ್‌, ಒಂದು ಕ್ಯಾಟ್‌ ವ್ಯಾಕ್‌ಗೆ ಕೋಟ್ಯಂತರ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ. ಕೆಲವು ವರದಿಗಳ ಪ್ರಕಾರ, ಮಾವ ಅಮಿತಾಭ್‌, ಅತ್ತೆ ಜಯಾ ಮತ್ತು ಗಂಡ ಅಭಿಷೇಕ್‌ ಗಿಂತಲೂ ಐಶ್ವರ್ಯಾ ರೈ ಶ್ರೀಮಂತೆ ಎಂದು ಹೇಳಲಾಗುತ್ತದೆ.

ಬಾಲಿವುಡ್ ಹಿರಿಯ ನಟ,83 ವರ್ಷದ ಅಮಿತಾಭ್ ಬಚ್ಚನ್, ಹಿಂದಿ ಮಾತ್ರವಲ್ಲದೇ ಸೌಥ್ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಇದರ ಜೊತೆ ಕೌನ್ ಬನೇಗಾ ಕರೋಡಪತಿ ಎಂಬ ಜನಪ್ರಿಯ ರಿಯಾಲಿಟಿ ಶೋನ ನಿರೂಪಕರಾಗಿದ್ದಾರೆ. ಜಾಹೀರಾತುಗಳ ಮೂಲಕವೂ ಬಿಗ್‌ಬಿ ಆದಾಯ ಪಡೆಯುತ್ತಾರೆ. ಸಿನಿಮಾವೊಂದಕ್ಕೆ 6 ಕೋಟಿ ರೂ.ವರೆಗೆ ಸಂಭಾವನೆ ಪಡೆಯುವ ಅಮಿತಾಭ್ ಬಚ್ಚನ್, ರಿಯಲ್ ಎಸ್ಟೇಟ್‌ನಲ್ಲಿಯೂ ಹೂಡಿಕೆ ಮಾಡಿದ್ದಾರೆ.

2 ಮರ್ಸಿಡಿಸ್, 1 ರೇಂಜ್ ರೋವರ್ ಮತ್ತು 16 ಲಕ್ಸುರಿ ಕಾರ್ ಹೊಂದಿರುವ ಅಮಿತಾಭ್ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 120 ಕೋಟಿ ಮತ್ತು ನಿವ್ವಳ ಮೌಲ್ಯ 3,190 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ರಾಜ್ಯಸಭಾ ಸಂಸದೆಯಾಗಿರುವ ಹಿರಿಯ ನಟಿ, 77 ವರ್ಷದ ಜಯಾ ಬಚ್ಚನ್ ಅವರಿಗೆ ಜಾಹೀರಾತು ಮತ್ತು ಸಿನಿಮಾ ಆದಾಯದ ಪ್ರಮುಖ ಮೂಲಗಳಾಗಿವೆ. 2018ರ ವರದಿ ಪ್ರಕಾರ, 103 ಕೋಟಿ ಬ್ಯಾಂಕ್ ಡೆಪಾಸಿಟ್, ವಿವಿಧಡೆ 183 ಕೋಟಿಗೂ ಅಧಿಕ ಹೂಡಿಕೆ ಮಾಡಿದ್ದಾರೆ. ಬ್ಯಾಂಕ್‌ನಲ್ಲಿ 13 ಲಕ್ಷ ರೂಪಾಯಿ ನಗದು ಹೊಂದಿದ್ದಾರೆ.

ಕಳೆದ ಒಂದು ದಶಕದಿಂದಲೂ ಅಭಿಷೇಕ್ ಬಚ್ಚನ್ ಸಿನಿಮಾ ಉದ್ಯಮದಲ್ಲಿ ಅವಕಾಶ ವಂಚಿತರಾಗಿದ್ರೂ, ವಿವಿಧರೆ ಹೂಡಿಕೆ ಮಾಡುವ ಮೂಲಕ ಕೋಟ್ಯಂತರ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ ಮಾಲೀಕರಾಗಿರುವ ಅಭಿಷೇಕ್ ಬಚ್ಚನ್, ರೋಲ್ಸ್ ರಾಯ್ಸ್ ಕಾರ್ ಹೊಂದಿದ್ದಾರೆ. ಮರ್ಸಿಡಿಸ್-ಬೆಂಜ್ GL63 AMG, ಮರ್ಸಿಡಿಸ್-ಬೆಂಜ್ S-ಕ್ಲಾಸ್ S350D, ಆಡಿ 8L, ಲೆಕ್ಸಸ್ LX 570 ಮತ್ತು ಮರ್ಸಿಡಿಸ್-ಬೆಂಜ್ S500 ಸೇರಿದಂತೆ ಹಲವು ಐಷಾರಾಮಿ ಕಾರ್‌ಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: Meghana Raj’s Marriage: ಮೇಘನಾ ರಾಜ್​ ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಅಪ್ಪ ಸುಂದರ್​ ರಾಜ್​

ಅಭಿಷೇಕ್ ಬಚ್ಚನ್ ಒಡೆತನದ ಮುಂಬೈನ ಪ್ರೀಮಿಯಂ ವಸತಿ ಸಮುಚ್ಚಯದಲ್ಲಿ ಐಶ್ವರ್ಯಾ ರೈ ಪಾಲುದಾರಿಕೆಯನ್ನು ಹೊಂದಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ರೂ. 776 ಕೋಟಿ ಎಂದು ಹೇಳಲಾಗುತ್ತಿದೆ. ದುಬೈನ ಜುಮೇರಾ ಗಾಲ್ಫ್ ಎಸ್ಟೇಟ್ಸ್‌ನಲ್ಲಿ ಐಷಾರಾಮಿ ವಿಲ್ಲಾಗಳನ್ನು ಐಶ್ವರ್ಯಾ ಹೊಂದಿದ್ದಾರೆ. ಐಶ್ವರ್ಯಾ-ಅಭಿಷೇಕ್ ಬಚ್ಚನ್ ಅವರ ಒಟ್ಟು ಆಸ್ತಿ ಸುಮಾರು ರೂ. 1,056 ಕೋಟಿ ರೂ. ಆಗಿದೆ. ಆದ್ರೆ ಅಭಿಷೇಕ್ ಬಚ್ಚನ್ ಅವರ ವೈಯಕ್ತಿಕ ಸಂಪತ್ತು ರೂ. 280 ಕೋಟಿ ಆಗಿದೆ.

ಇದನ್ನೂ ಓದಿ: ವೃತ್ತಿಜೀವನದ ಆರಂಭದಲ್ಲೇ ಚಿರಂಜೀವಿಗೆ ಮೋಸ ಮಾಡಿದ್ದ ನಿರ್ಮಾಪಕ! ಆಗ ಮೆಗಾಸ್ಟಾರ್ ತಂದೆ ಮಾಡಿದ್ದೇನು?

Source link

Leave a Reply

Your email address will not be published. Required fields are marked *