
ಬಾಗಲಕೋಟೆ, (ಮಾರ್ಚ್ 29): ಬಿಜೆಪಿ ಹಾಗೂ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಬಾಗಲಕೋಟೆಗೆ ಎಂಟ್ರಿ ಕೊಟ್ಟಿದ್ದು, ಉಪಚುನಾವಣೆ ಕಣದಿಂದ ದಿನಕ್ಕೆ ರಂಗೇರುತ್ತಿದೆ. ಅದರಂತೆ ಬೇವೂರು ಗ್ರಾಮದಲ್ಲಿ ಇಂದು (ಮಾರ್ಚ್ 29) ಬಿಜೆಪಿಯಿಂದ ಶ್ರೀರಾಮುಲು ಹಾಗೂ ಕಾಂಗ್ರೆಸ್ ನಿಂದ ಸಚಿವ ತಿಮ್ಮಾಪುರ ಅವರು ಚುನಾವಣಾ ಪ್ರಚಾರ ನಡೆಸಿದ್ದು, ಈ ವೇಳೆ ಇಬ್ಬರ ರ್ಯಾಲಿ ಏಳುಬದೂರಾಗಿದೆ. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೂಗಾಡಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.