ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು?

ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು?


ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು?

ಬಾಗಲಕೋಟೆ, (ಮಾರ್ಚ್ 22): ಬಾಗಲಕೋಟೆ ಉಪಚುನಾವಣೆಯ (ಬಾಗಲಕೋಟ ಉಪಚುನಾವಣೆ) ಕಾಂಗ್ರೆಸ್ ಟಿಕೆಟ್ ಎಚ್ ವೈ ಮೇಟಿ ಪುತ್ರ ಉಮೇಶ್ ಮೇಟಿ ಅವರಿಗೆ ನೀಡಿದ್ದಾರೆ. ಟಿಕೆಟ್ ಗಾಗಿ ನಾಲ್ವರು ಮೇಟಿ ಮಕ್ಕಳ ನಡುವೆ ಕಿತ್ತಾಟ ಶುರುವಾಗಿತ್ತು. ಅಂತಿಮವಾಗಿ ಸಿದ್ದರಾಮಯ್ಯ ಸಂಧಾನಸಭೆ ಮಾಡಿ ಕೊನೆಗೆ ಉಮೇಶ್ ಅವರಿಗೆ ಮಣೆ ಹಾಕಿದ್ದಾರೆ. ಇನ್ನು ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಮಹಾದೇವಿ ಮೇಟಿ ಸಹ ತಣ್ಣಗಾಗಿದ್ದಾರೆ. ಯಾಕಂದ್ರೆ ಕೆಲ ದಿನಗಳಿಂದಷ್ಟೇ ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಸ್ಪರ್ಧೆ ಮಾಡುವ ಬಗ್ಗೆ ಬಹಿರಂಗವಾಗಿ ಹೇಳಿದ್ದರು. ಆದರೆ, ಇದೀಗ ಸಿಎಂ ಸಂಧಾನ ಸಭೆ ಮಾಡಿದ ಬಳಿಕ ಮಹಾದೇವಿ ಮೇಟಿ ಕೂಲ್ ಆಗಿದ್ದು, ಸಹೋದರ ಉಮೇಶ್ ಗೆ ಟಿಕೆಟ್ ನೀಡಿದ್ದಕ್ಕೆ ಸಂತಸಗೊಂಡಿದ್ದಾರೆ. ಒಗ್ಗಟ್ಟಾಗಿ ಕೆಲಸ ಮಾಡಿ ಗೆಲ್ಲುತ್ತೇವೆ ಎನ್ನುವುದನ್ನು ಸಹ ಹೇಳಿದ್ದಾರೆ. ಇನ್ನು ಟಿವಿ9ಗೆ ಮಹಾದೇವಿ ಮೇಟಿ ಕಾಮೆಂಟ್ ಮಾಡಿದ್ದು, ಉಮೇಶ್ ಮೇಟಿಗೆ ಟಿಕೆಟ್ ಕೊಟ್ಟಿದ್ದು ಸಂತಸ ತಂದಿದೆ. ನಾನು ಅಂದುಕೊಂಡಂತೆ ಸಹೋದರ ಉಮೇಶ್ ಮೇಟಿಗೆ ಟಿಕೆಟ್ ಕೊಡುಗೆ. ಎಲ್ಲರೂ ಒಟ್ಟಾಗಿ ಎದುರಿಸುತ್ತೇವೆ. ಎಲ್ಲ ಬಂಡಾಯ,ಭಿನ್ನಾಭಿಪ್ರಾಯ ಸರಿಯಾಗಿದೆ. ನಾಳೆ ನಾಮಪತ್ರ ಸಲ್ಲಿಸಲು ನಾನು ಸಹೋದರನ ಜೊತೆ ಹೋಗುತ್ತೇನೆ. ನಾಲ್ಕು ಜನ ಮಕ್ಕಳು ಒಟ್ಟಾಗಿ ಹೋಗುತ್ತೇವೆ ಎಂದು ಪ್ರಚಾರ ಮಾಡುತ್ತೇವೆ.

ಇದನ್ನೂ ಓದಿ: ಉಪ ಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ‘ಕೈ’ ಅಭ್ಯರ್ಥಿಗಳ ಹೆಸರು ಘೋಷಣೆ



Source link

Leave a Reply

Your email address will not be published. Required fields are marked *