Headlines

ಬೈ ಎಲೆಕ್ಷನ್: ಬಾಗಲ’ಕೋಟೆ’ ಯಾರಿಗೆ? ಹೇಗಿದೆ ಕಾಂಗ್ರೆಸ್-ಬಿಜೆಪಿ ನಾಯಕರ ಗೆಲುವಿನ ಲೆಕ್ಕಾಚಾರ?

ಬೈ ಎಲೆಕ್ಷನ್: ಬಾಗಲ’ಕೋಟೆ’ ಯಾರಿಗೆ? ಹೇಗಿದೆ ಕಾಂಗ್ರೆಸ್-ಬಿಜೆಪಿ ನಾಯಕರ ಗೆಲುವಿನ ಲೆಕ್ಕಾಚಾರ?


ಬೈ ಎಲೆಕ್ಷನ್: ಬಾಗಲ'ಕೋಟೆ' ಯಾರಿಗೆ? ಹೇಗಿದೆ ಕಾಂಗ್ರೆಸ್-ಬಿಜೆಪಿ ನಾಯಕರ ಗೆಲುವಿನ ಲೆಕ್ಕಾಚಾರ?

ಬಾಗಲಕೋಟೆ, (ಏಪ್ರಿಲ್ 12): ಕಾಂಗ್ರೆಸ್ ಶಾಸಕರಾಗಿದ್ದ ಹೆಚ್ ವೈ ಮೇಟಿ ಅಕಾಲಿಕ ನಿಧನದಿಂದ ನಡೆದ ಬಾಗಲಕೋಟೆ ಉಪಚುನಾವಣೆ (ಬಾಗಲಕೋಟೆ ಉಪಚುನಾವಣೆ) ಅಂತ್ಯವಾಗಿದ್ದು. ಇದೀಗ ಎಲ್ಲರ ಚಿತ್ತ ಮೇ 4ರ ಫಲಿತಾಂಶ ನೆಟ್ಟಿದೆ. ಉಪಚುನಾವಣೆಯಲ್ಲಿ ಶೇ.68.74ರಷ್ಟು ಮತದಾನವಾಗಿದೆ. ಆದರೆ, ಕಳೆದ ಬಾರಿ ಅಂದರೆ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಶೇ. 69.40% ವೋಟಿಂಗ್ ಆಗಿದ್ದು, ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಆಗಿದೆ. ಈ ಮತದಾನದ ಪ್ರತಿಶತ ಆಧಾರದ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಮತದಾನದ ಆಧಾರದಲ್ಲಿ ಲೆಕ್ಕಾಚಾರ

ನಗರದಲ್ಲಿ ಶೇ 61.24ರಷ್ಟು ಮತದಾನವಾಗಿದೆ, ಗ್ರಾಮೀಣ ಭಾಗದಲ್ಲಿ 74ರಷ್ಟು ಮತದಾನವಾಗಿದೆ. ಸುಮಾರು 70% ದಾಟಿದರೆ ಬಿಜೆಪಿಗೆ ಪ್ಲಸ್ ಎಂಬ ಲೆಕ್ಕಾಚಾರವಿದೆ. ಆದರೆ ನಗರದ ಶೇ.61.24ರಷ್ಟು ಮತದಾನವಾಗಿದೆ. ಹೀಗಾಗಿ ಬಿಜೆಪಿಗರಿಗೆ ಫಲಿತಾಂಶ ಏನಾಗಲಿದೆ ಎಂಬ ಟೆನ್ಷನ್ ಶುರುವಾಗಿದೆ. ಇನ್ನೊಂದೆಡೆ ಮಹಿಳೆಯರ ಮತದಾನವೂ ಸಹ ಕಡಿಮೆ, ಗ್ಯಾರಂಟಿ ಯೋಜನೆಗಳ ಮೂಲಕ ಮತ ಸೆಳೆಯುವ ಕಾಂಗ್ರೆಸ್ ನ ಲೆಕ್ಕಾಚಾರ ಹುಸಿಯಾಗಿದೆ. ಹೀಗಾಗಿ ಬಾಗಲಕೋಟೆ ಉಪಚುನಾವಣೆ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ದಾವಣಗೆರೆ ಉಪಚುನಾವಣೆ: ಎಷ್ಟು ಮತದಾನ? ಬಿಜೆಪಿ-ಕಾಂಗ್ರೆಸ್ ನಾಯಕರ ಗೆಲುವಿನ ಲೆಕ್ಕಾಚಾರ ಏನು?

ಇನ್ನು ಕಾಂಗ್ರೆಸ್ ಮೊದಲಿನಿಂದಲೂ ಗ್ರಾಮೀಣ ಮತಗಳು ಆಸರೆಯಾಗಿವೆ. ಹೀಗಾಗಿ ಕಾಂಗ್ರೆಸ್ ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಮತಗಳನ್ನೇ ಬಂದಿದೆ. ಅದರಂತೆ ಈ ಬಾರಿ ಉಪಚುನಾವಣೆಯಲ್ಲೂ ಸಹಗ್ರಾಮೀಣ ಭಾಗದಲ್ಲಿ ಈ ಬಾರಿ ಶೇ.74.61ರಷ್ಟು ಮತದಾನವಾಗಿದೆ, ಕಾಂಗ್ರೆಸ್ ನಾಯಕರಲ್ಲಿ ಗೆಲುವಿನ ವಿಶ್ವಾಸವಿದೆ. ಆದರೆ, ಮಹಿಳೆಯರ ಮತಗಳನ್ನು ಸೆಳೆಯಲು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪ್ರಮುಖ ಅಸ್ತ್ರವಾಗಿ ಅನುಸರಿಸಿತು. ಆದರೆ, ಬೈ ಎಲೆಕ್ಷನ್ ನಲ್ಲಿ ಮಹಿಳೆ ಮತದಾನದಿಂದ ದೂರು ಉಳಿದುಕೊಂಡಿದ್ದಾರೆ.

ಹೌದು.. ಮಹಿಳೆಯರು ಮತಗಳು ಅಷ್ಟಾಗಿ ಚಲಾವಣೆಯಾಗಿಲ್ಲ.ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರ ಮತದಾನದಲ್ಲಿ ಶೇ.67.80ರಷ್ಟು ಮತದಾನವಾಗಿದೆ, ಪುರುಷರು ಶೇ.69.48ರಷ್ಟು ಮತದಾನವಾಗಿದೆ. ಪ್ರತಿಶತ ಮತದಾನದಲ್ಲಿ ಪುರುಷರ ಮತದಾನವೇ ನಡೆಯಲಿದೆ. ಗ್ಯಾರಂಟಿಯಿಂದಾಗಿ ಹೆಚ್ಚಿನ ಸಂಖ್ಯೆಯ ಮಹಿಳಾ ಮತದಾರರು ಮತ ಹಾಕಬಹುದೆಂಬ ಕಾಂಗ್ರೆಸ್ ಲೆಕ್ಕಾಚಾರ ಹುಸಿಯಾಗಿದೆ. ಹೀಗಾಗಿ ಖಂಡಿತ ಫಲಿತಾಂಶ ಕಾಂಗ್ರೆಸ್ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಪ್ರಚಾರದಲ್ಲಿ ಸಿದ್ದರಾಮಯ್ಯ ಸೇರಿ ಸಚಿವರಾದಿಯಾಗಿ ಎಲ್ಲರೂ ಅಕ್ಕ, ಅವ್ಚ, ತಂಗಿ ಅಂತ ಎಲ್ಲರಿಗೂ ತಿಂಗಳಿಗೆ 2 ಸಾವಿರ ಗೃಹಲಕ್ಷ್ಮೀ ಹಣ, ಬಸ್ ಫ್ರೀ, ಕರೆಂಟ್ ಫ್ರೀ ಅಂತ ಪ್ರಚಾರ ಮಾಡಿದ್ರು.ಆದ್ರೆ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬಹುದಿತ್ತು. ಆದರೆ ಹಾಗೆ ಆಗಿಲ್ಲ. ಗ್ಯಾರಂಟಿ ಯೋಜನೆಗಳು, ಅನುಕಂಪ, ಸರ್ಕಾರದ ಅಭಿವೃದ್ಧಿ ಕಾರ್ಯಗಳೊಂದಿಗೆ ಬೈ ಎಲೆಕ್ಷನ್ ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್ ನಾಯಕರಿಗೆ ಮಹಿಳೆಯರ ಮತ ಕಡಿಮೆ ಆಗಿದ್ದು ತಲೆನೋವಾಗಿದೆ.

ಒಟ್ಟಿನಲ್ಲಿ ಮತದಾನದ ನಂತರ ಬಿಜೆಪಿ ತಮ್ಮ ಕಾಂಗ್ರೆಸ್ ಆದ ಲೆಕ್ಕಾಚಾರ ಹೇಳುತ್ತಾ ಗೆಲುವು ನಿಶ್ಚಿತ ಅಂತಿದ್ದಾರೆ. ಆದರೆ ಮೇ 4 ರ ಫಲಿತಾಂಶ ಇದೆಲ್ಲದಕ್ಕೂ ಉತ್ತರ ನೀಡಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *