ಬೈ ಎಲೆಕ್ಷನ್​​: ಅಬ್ಬರದ ಕ್ಯಾಂಪೇನ್​​ ಮಧ್ಯೆ ಜಮೀರ್​​ಗೆ ಸಿಎಂ ತುರ್ತು ಬುಲಾವ್; ನಾಳೆ ಅಖಾಡಕ್ಕೆ ಸಚಿವ ಎಂಟ್ರಿ

ಬೈ ಎಲೆಕ್ಷನ್​​: ಅಬ್ಬರದ ಕ್ಯಾಂಪೇನ್​​ ಮಧ್ಯೆ ಜಮೀರ್​​ಗೆ ಸಿಎಂ ತುರ್ತು ಬುಲಾವ್; ನಾಳೆ ಅಖಾಡಕ್ಕೆ ಸಚಿವ ಎಂಟ್ರಿ


ಬೈ ಎಲೆಕ್ಷನ್: ಅಬ್ಬರದ ಕ್ಯಾಂಪೇನ್ ಮಧ್ಯೆ ಜಮೀರ್ಗೆ ಸಿಎಂ ತುರ್ತು ಬುಲಾವ್; ನಾಳೆ ಅಖಾಡಕ್ಕೆ ಸಚಿವ ಎಂಟ್ರಿ

ಬೆಂಗಳೂರು, ಏಪ್ರಿಲ್ 04: ಉಭಯ ಕ್ಷೇತ್ರಗಳಲ್ಲಿ ಉಭಯ ಪಕ್ಷದಿಂದ ಮತ ಶಿಕಾರಿ ನಡೆಯುತ್ತಿದೆ. ಮತದಾನಕ್ಕೆ ಇನ್ನೂ ಐದು ದಿನ ಬಾಕಿ ಇದ್ದು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಅಬ್ಬರದ ಪ್ರಚಾರ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಎರಡನೇ ಸುತ್ತಿನ ಪ್ರಚಾರ ಮಾಡಿದ್ದು, ಅಭ್ಯರ್ಥಿ ಉಮೇಶ್ ಮೇಟಿ ಪರ ಅಬ್ಬರದ ಕ್ಯಾಂಪೇನ್ ಮಾಡಿದ್ದಾರೆ. ವಿವಿಧ ಸಮುದಾಯಗಳ ಮತಗಳ ಮೇಲೂ ಕಣ್ಣಿಡಲಾಗಿದೆ. ಈ ಮಧ್ಯೆ ಸಚಿವ ಜಮೀರ್‌ಗೆ ಸಿದ್ದರಾಮಯ್ಯರಿಂದ ತುರ್ತು ಬುಲಾವ್ ನೀಡಲಾಗಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಚಿವ ಜಮೀರ್‌ಗೆ ಸಿದ್ದರಾಮಯ್ಯರಿಂದ ತುರ್ತು ಬುಲಾವ್

ಇನ್ನು ಅಹಿಂದ ಮತಗಳ ಕ್ರೋಧೀಕರಣಕ್ಕಾಗಿ ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ವಿಶೇಷ ಸಭೆ ನಡೆಸಿದ್ದಾರೆ. ಎಂ.ಸಿ.ವೇಣುಗೋಪಾಲ್, ಡಾ.ಪರಮೇಶ್ವರ್ ಮತ್ತು ಮಹದೇವಪ್ಪ ಜೊತೆ ಸಭೆ ಮಾಡಿದ್ದು, ಈ ವೇಳೆ ಉಪಚುನಾವಣೆ ಪ್ರಚಾರಕ್ಕೆ ಬರುವಂತೆ ಜಮೀರ್ ಅವರಿಗೆ ಕರೆ ಮಾಡುವಂತೆ ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಮರನ್ನೆಲ್ಲಾ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಸಿದ್ದರಾಮಯ್ಯ ಹೀಗೆಂದ್ಯಾಕೆ ನೋಡಿ!

ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗಲಿಲ್ಲ ಅಂತಾ ಬೇಸರಗೊಂಡಿದ್ದ ಸಚಿವ ಜಮೀರ್ ನಾಳೆ ದಾವಣಗೆರೆ ಎಂಟ್ರಿ ಕೊಡಲಿದ್ದಾರೆ. ಕೇರಳದ ಪ್ರಚಾರದಲ್ಲಿ ಬ್ಯೂಸಿಯಾಗಿದ್ದ ಜಮೀರ್, ನಾಳೆ ದಾವಣಗೆರೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಜಮೀರ್‌ಗಾಗಿಯೇ ವಿಶೇಷ ವಿಮಾನ ಬುಕ್ ಮಾಡಿರುವ ಸಿಎಂ, ಕೇರಳದಿಂದ ದಾವಣಗೆರೆಗೆ ಕರೆಸಿಕೊಳ್ಳುತ್ತಿದ್ದಾರೆ. ನಂತರ ಬಾಗಲಕೋಟೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಈ ಸಂಬಂಧ ಸಭೆ ನಡೆಸುತ್ತಿರುವ ಸಿಎಂ, ಅಹಿಂದ ಮತಗಳನ್ನು ಸೆಳೆಯಲು ತಂತ್ರ ರೂಪಿಸಿದ್ದಾರೆ.

ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ

ಇನ್ನು TV9 ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ಅವರಿಗೆ ನನ್ನ ಅಟ್ಯಾಕ್ ಮಾಡುವುದು ಬಿಟ್ಟರೇ ಬೇರೆನಿದೆ ಅಂತಾ ವಾಗ್ದಾಳಿ ಮಾಡಿದ್ದಾರೆ. ಕುಟುಂಬದವರಿಗೆ ಟಿಕೆಟ್ ನೀಡಿರುವ ಬಗ್ಗೆ ಸ್ಪಷ್ಟನೆ ಮಾಹಿತಿ. ಇನ್ನೂ 2028ಕ್ಕೂ ಈ ಚುನಾವಣೆಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ದಾವಣಗೆರೆಯಲ್ಲಿ ಸಮುದಾಯದವರು ಮತಬೇಟೆ

ಬಿಜೆಪಿ ಕಲಿಗಳು ಕೂಡ ಅಖಾಡದಲ್ಲಿ ಅಬ್ಬರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿ ಮಠ ಪರವಾಗಿ ಮತಬೇಟೆಯಾಡಿದ್ದಾರೆ. ಬಿಜೆಪಿ ಲಿಂಗಾಯತ ಮತಗಳ ಕಬ್ಜ ಮಾಡಲು ಕ್ಯಾಂಪೇನ್ ಮಾಡುತ್ತಿದೆ. ಕಾಂಗ್ರೆಸ್‌ ಪರ ಸಚಿವರು, ಶಾಸಕರು ಅಖಾಡಕ್ಕಿಳಿದಿದ್ರೆ, ಬಿಜೆಪಿ ಪರ ಬಿ.ವೈ ವಿಜಯೇಂದ್ರ, ವಿ.ಸೋಮಣ್ಣ, ಹೆಚ್‌.ಡಿ ಕುಮಾರಸ್ವಾಮಿ ಕ್ಯಾಂಪೇನ್ ಮಾಡಿದ್ದಾರೆ. ಗ್ಯಾರಂಟಿಯನ್ನೇ ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್‌ಗೆ ತಿವಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *