ಎಸ್ಪಿ ಸಿದ್ದಾರ್ಥ ಗೋಯೆಲ್, ಯುವಕ, ಮರತ ಯುವತಿಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ
ಬಾಗಲಕೋಟೆ, ಏಪ್ರಿಲ್ 16: ಆಕೆ ಹಿಂದೂ ಹುಡುಗಿ, ಆತ ಮುಸ್ಲಿಂ ಹುಡುಗ. ಇಬ್ಬರ ಮಧ್ಯೆ ನಾಲ್ಕು ವರ್ಷದಿಂದ ಪ್ರೀತಿ ಇತ್ತಂತೆ. ಆದರೆ ಹುಡುಗಿ ನಿನ್ನೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು (ಸಾವು). ಈ ಬೆನ್ನಲ್ಲೇ ಲವ್ ಜಿಹಾದ್ (ಲವ್ ಜಿಹಾದ್) ಆರೋಪ ಕೇಳಿಬಂದಿತ್ತು. ಹುಡುಗನ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಗಂಭೀರ ಆರೋಪ ಕೂಡ ಮಾಡಲಾಗಿದೆ. ಈ ಮಧ್ಯೆ ಹುಡುಗಿಯ ತಾಯಿ ನೀಡಿದ ದೂರಿನಲ್ಲಿ ಹಲವು ವರ್ಷಗಳಿಂದ ಹುಡುಗ ರಿಲೇಷನ್ ಶಿಪ್ ನಲ್ಲಿ ಎಂಬ ಸ್ಫೋಟಕ ವಿಚಾರವನ್ನು ಬಾಗಲಕೋಟೆ ಎಸ್ ಪಿ ಸಿದ್ದಾರ್ಥ ಗೋಯೆಲ್ ಬಹಿರಂಗ ಪಡಿಸಿದ್ದಾರೆ.
ಎಸ್ ಪಿ ಸಿದ್ದಾರ್ಥ ಗೋಯೆಲ್ ಹೇಳಿದ್ದಿಷ್ಟು
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಸಿದ್ದಾರ್ಥ ಗೋಯೆಲ್, ನಿನ್ನೆ ಭೂಮಿಕಾ ಮೋಹನ್ ತಿಪ್ಪಣ್ಣವರ್ ಎಂಬ 19 ವರ್ಷದ ಯುವತಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ನಾವು ಹಾಗೂ ನಮ್ಮ ಸಿಬ್ಬಂದಿಗೆ ಹೋಗಿದ್ದೆವು. ಸೀನ್ ಆಫ್ ಕ್ರೈಂ ಅಧಿಕಾರಿಗಳು ಕೂಡ ಬಂದಿದ್ದರು. ಹುಡುಗಿಯ ಫೋನ್ ಸೀಜ್ ಮಾಡಿದ್ದೇವೆ. ಡೋಂಗ್ರಿ ಸಾಬ್ ನದಾಫ್ ಎಂಬ ಹುಡುಗನ ಮೇಲೆ ಯುವತಿ ತಾಯಿ ಕೊಟ್ಟ ದೂರಿನ ಮೇಲೆ ಎಫ್ ಐಆರ್ ಮಾಡಿದ್ದೇವೆ. ಆತನ ಫೋನ್ ಕೂಡ ಸೀಜ್ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಅನ್ಯಕೋಮಿನ ಯುವಕನನ್ನ ಪ್ರೀತಿಸುತ್ತಿದ್ದ ಯುವತಿ ಆತ್ಮಹತ್ಯೆ, ಲವ್ ಜಿಹಾದ್ ಆರೋಪ
ಕ್ರೈಂ ನಂ 68/2026, ಬಿಎನ್ ಎಸ್ 108 ಆತ್ಮಹತ್ಯೆಗೆ ಪ್ರೇರಣೆ ಅಡಿ ಪ್ರಕರಣ ದಾಖಲಿಸಲಾಗಿದೆ. ಆ ಹುಡುಗನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಹುಡುಗಿಯ ಜೊತೆ ಹಲವು ವರ್ಷಗಳಿಂದ ಹುಡುಗ ರಿಲೇಷನ್ ಶಿಪ್ ನಲ್ಲಿದ್ದ ಅವರ ತಾಯಿ ಹೇಳುವ ಪ್ರಕಾರ ಮದುವೆ ಮಾಡಿಕೊಳ್ಳಲು ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಆದ ಕಾರಣ ಮಾನಸಿಕವಾಗಿ ನೊಂದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ತಾಯಿ ದೂರದಲ್ಲಿ ಉಲ್ಲೇಖಿಸಿದ್ದಾರೆ.
ಡೆತ್ ನೋಟ್ ಸಿಕ್ಕಿಲ್ಲ ಎಂದ ಎಸ್ ಪಿ
ಯುವತಿಗೆ ಯಾವ ರೀತಿ ಟಾರ್ಚರ್ ಕೊಡುತ್ತಿದ್ದರು, ಏನೆಲ್ಲಾ ತೊಂದರೆ ಕೊಡುವುದರ ಬಗ್ಗೆ ಸಂಪೂರ್ಣ ವಿಚಾರಣೆ ಮಾಡಿ ನಾವು ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸುತ್ತೇವೆ. ಎರಡು ಸಮುದಾಯದವರೆಗೂ ನಾವು ಮನವಿ ಮಾಡಬೇಕೆಂದು ದಯವಿಟ್ಟು ಶಾಂತಿ ಕಾಪಾಡಬೇಕು. ಪ್ರಕರಣಕ್ಕೆ ಆ ಪ್ರಕಾರ ನಾವು ಕ್ರಮಕೈಗೊಳ್ಳುತ್ತೇವೆ. ಡೆತ್ ನೋಟ್ ಏನು ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರೇಮ ಸಂಬಂಧವೋ? ಲವ್ ಜಿಹಾದೋ?: ಅಸಲಿಗೆ ಹುಬ್ಬಳ್ಳಿಗೆ, ಧಾರವಾಡದಲ್ಲಿ ಆಗ್ತಿರೋದೇನು?
ಇನ್ನು ಹಿಂದೂಪರ ಸಂಘಟನೆಯಿಂದ ಲವ್ ಜಿಹಾದ್ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಾಯಿಯ ದೂರಿನಲ್ಲಿ ಸದ್ಯಕ್ಕೆ ಯಾವುದೇ ವಿಷಯಗಳ ಉಲ್ಲೇಖವಿಲ್ಲ. ಅವರಿಗೆ ಅವಕಾಶ ಇದೆ, ಇನ್ನೊಂದು ಸಾರಿ ದೂರು ಕೊಡುವುದಕ್ಕೆ. ಅವರು ಏನೆಲ್ಲಾ ವಿಷಯಗಳನ್ನು ಉಲ್ಲೇಖಿಸುತ್ತಾರೆ ಎಂದು ಅದರ ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಸ್ ಪಿ ಸಿದ್ದಾರ್ಥ ಗೋಯೆಲ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 4:42 pm, ಗುರುವಾರ, 16 ಏಪ್ರಿಲ್ 26