ಬಾಗಲಕೋಟೆ ಬೈ ಎಲೆಕ್ಷನ್: ಕಾಂಗ್ರೆಸ್​​ ಟಿಕೆಟ್​​ಗಾಗಿ ಹೆಚ್​​.ವೈ. ಮೇಟಿ ಮಕ್ಕಳ ನಡುವೆಯೇ ಪೈಪೋಟಿ

ಬಾಗಲಕೋಟೆ ಬೈ ಎಲೆಕ್ಷನ್: ಕಾಂಗ್ರೆಸ್​​ ಟಿಕೆಟ್​​ಗಾಗಿ ಹೆಚ್​​.ವೈ. ಮೇಟಿ ಮಕ್ಕಳ ನಡುವೆಯೇ ಪೈಪೋಟಿ


ಬಾಗಲಕೋಟೆ ಬೈ ಎಲೆಕ್ಷನ್: ಕಾಂಗ್ರೆಸ್ ಟಿಕೆಟ್ಗಾಗಿ ಹೆಚ್.ವೈ. ಮೇಟಿ ಮಕ್ಕಳ ನಡುವೆಯೇ ಪೈಪೋಟಿ

ಬಾಗಲಕೋಟೆ, ಮಾರ್ಚ್ 17: ಹೆಚ್.ವೈ.ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9 ರಂದು ಆಯೋಗ ಘೋಷಿಸಿದ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳ ನಡುವಿನ ಪೈಪೋಟಿ ಜೋರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್‌ಗಾಗಿ ಲಾಬಿಯೂ ಜೋರಾಗಿದೆ. ಕಾಂಗ್ರೆಸ್ ನಿಂದ ಸ್ಫರ್ಧೆಗಾಗಿ ದಿವಂಗತ ಶಾಸಕ ಮೇಟಿ ಕುಟುಂಬದಲ್ಲಿ ಗುದ್ದಾಟ ನಡೆಯುತ್ತಿದೆ, ಇತ್ತ ಬಿಜೆಪಿಯಲ್ಲಿ ವಿವಿಧ ಸಮುದಾಯಗಳ ಸಂಘಟನೆಗೆ ನಮಗೊಂದು ಅವಕಾಶ ಕೊಡಿ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.

ಕಾಂಗ್ರೆಸ್ ಟಿಕೆಟ್ ಗಾಗಿ ಮೇಟಿ ಮಗಳ ಪಟ್ಟು

ತಂದೆಯ ನಿಧನದ ಹಿನ್ನೆಲೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲು ಕಾರಣ ಕಾಂಗ್ರೆಸ್ ಟಿಕೆಟ್ ಗಾಗಿ ಹೆಚ್. ವೈ. ಮೇಟಿ ಅವರ ಕಿರಿಯ ಮಗಳು ಮಹಾದೇವಿ ಮೇಟಿ ಪಟ್ಟು ಹಿಡಿದಿದ್ದಾರೆ. ಈ ನಡುವೆ ಕುಟುಂಬದ ನಡುವೆ ಟಿಕೆಟ್ ಫೈಟ್ ವಿಚಾರವಾಗಿ ಮಾತುಕತೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಮೇಟಿಯನ್ನು ಕರೆದಿದ್ದಾರೆ. ಮಲ್ಲಿಕಾರ್ಜುನ ಮೇಟಿ, ಬಾಯಕ್ಕ ಮೇಟಿ, ಉಮೇಶ್ ಮೇಟಿ ಸೇರಿದಂತೆ ಮಹಾದೇವಿ ಮೇಟಿ ಮುಖ್ಯಮಂತ್ರಿಗಳನ್ನು ನಾಳೆ ಭೇಟಿಯಾಗಲಿದ್ದಾರೆ. ಈ ನಡುವೆಯೂ ಹೇಳಿಕೆ ನೀಡಿರುವ ಮಹಾದೇವಿ ಮೇಟಿ, ನನಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಬಂಡಾಯ ಸ್ಪರ್ಧೆ ಖಚಿತವಾಗಿದ್ದು, ಮಾರ್ಚ್ 20ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ ಉಪಚುನಾವಣೆಗೆ ಈಗಿಂದಲೇ ತಂತ್ರ, ಪ್ರತಿತಂತ್ರ ಶುರು; ಯಾರೆಲ್ಲಾ ಆಕಾಂಕ್ಷಿಗಳು ಗೊತ್ತಾ?

ಸಿಎಂ ಹಾಗೂ ಮೇಟಿ ಅವರ ಆಪ್ತ ಹೊಳೆಬಸು ಶೆಟ್ಟರ್ ಹೆಸರು ಹೇಳದೆ, ನಮ್ಮ ತಂದೆಯವರ ಆಪ್ತನಿಂದ ಕ್ಷೇತ್ರ ಹಾಳಾಗಿದೆ. ಆಪ್ತನನ್ನು ಮಟ್ಟ ಹಾಕಲು ನನ್ನಿಂದ ಸಾಧ್ಯ. ಆತ ನನ್ನ ಹೆಸರು ಕಡೆಗಣಿಸಿ ಮೇಟಿಯವರಿಗೆ ಮೂರು ಜನ ಮಕ್ಕಳು ಎಂದು ಸಿಎಂ ಸಿದ್ಧರಾಮಯ್ಯನವರಿಗೆ ಮಾಹಿತಿ ನೀಡಿದ್ದಾರೆ. ಕ್ಷೇತ್ರದಲ್ಲಿ ಆತನ ಹಸ್ತಕ್ಷೇಪ ಕಂಡುಬಂದಿದೆ, ಆ ಕಾರಣ ನಾನು ಅಖಾಡಕ್ಕೆ ಇಳಿಯುತ್ತಿದ್ದೇನೆ. ಮೊನ್ನೆ ಮತ್ತು ಸಿಎಂ ಡಿಸಿಎಂ ಬಾಗಲಕೋಟೆಗೆ ಬಂದಾಗಲೂ ಅವರ ಜೊತೆ ಮಾತಾಡಿದ್ದೇನೆ. ನಾನು ಆಕಾಂಕ್ಷಿ ಎಂಬ ವಿಚಾರ ಅವರಿಗೆ ಆಗಲೇ ತಿಳಿಸಿರೋದಾಗಿ ಮಹಾದೇವಿ ಮೇಟಿ ಹೇಳಿದ್ದಾರೆ.

ಬಿಜೆಪಿ ಟಿಕೆಟ್ ಗೆ ಡಾ. ಶೇಖರ್ ಮಾನೆ ಡಿಮ್ಯಾಂಡ್

ಇತ್ತ ಬಿಜೆಪಿಯಲ್ಲೂ ಟಿಕೆಟ್ ಗಾಗಿ ಪೈಪೋಟಿ ಜೋರಾಗಿದ್ದರೆ, ಮರಾಠಾ ಸಮಾಜದ ರಾಜ್ಯ ಉಪಾಧ್ಯಕ್ಷ ಡಾ. ಶೇಖರ್ ಮಾನೆ ತಾನು ಕೂಡ ಆಕಾಂಕ್ಷಿ ಎಂದು ಘೋಷಿಸಿದ್ದಾರೆ. ಮರಾಠ ಸಮಾಜ ಬಿಜೆಪಿ ಪರ ಸದಾ ನಿಂತಿದೆ. ಹೀಗಾಗಿ ಈ ಸಮಾಜಕ್ಕೆ ಪ್ರಾತಿನಿಧ್ಯ ನೀಡಿ ತನಗೆ ಟಿಕೆಟ್ ಕೊಡಬೇಕು. ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮಾತನಾಡುತ್ತಿದ್ದೇನೆ. ಒಂದೊಮ್ಮೆ ತನಗೆ ಅವಕಾಶ ಸಿಗದಿದ್ದರೆ ಪಕ್ಷವನ್ನು ನಿರ್ಧರಿಸುವ ಅಭ್ಯರ್ಥಿ ಪರ ಪ್ರಚಾರ ಮಾಡಿ, ಗೆಲುವಿಗೆ ಶ್ರಮಿಸಿದ ಅವರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *