Headlines

ಗಂಡನನ್ನು ಕೋರ್ಟ್​​​​ ಕಟಕಟೆಯಲ್ಲಿ ನಿಲ್ಲಿಸಿದ ಪತ್ನಿ: ಜಡ್ಜ್ ಎದುರೇ ವಿಷಸೇವಿಸಿದ ಪತಿ; ಏನಿದು ಪ್ರಕರಣ?

ಗಂಡನನ್ನು ಕೋರ್ಟ್​​​​ ಕಟಕಟೆಯಲ್ಲಿ ನಿಲ್ಲಿಸಿದ ಪತ್ನಿ: ಜಡ್ಜ್ ಎದುರೇ ವಿಷಸೇವಿಸಿದ ಪತಿ; ಏನಿದು ಪ್ರಕರಣ?


ಬಾಗಲಕೋಟೆ, ಫೆಬ್ರವರಿ 05: ದಂಪತಿ ವಿಚ್ಛೇದನ ವಿಚಾರಣೆ ವೇಳೆ ಜಡ್ಜ್ ಎದುರೇ ಗಂಡ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ (ಆತ್ಮಹತ್ಯೆ ಯತ್ನ) ಯತ್ನಿಸಿದ ಘಟನೆ ಜಿಲ್ಲೆಯ ಬನಹಟ್ಟಿ ಕೋರ್ಟ್‌ನಲ್ಲಿ (ಬನಹಟ್ಟಿ ನ್ಯಾಯಾಲಯ) ನಡೆದಿದೆ. ಜಗದಾಳ ಗ್ರಾಮದ ನಿವಾಸಿ ಯಾಕೂಬ್ ದೊಡ್ಡಮನಿ(35) ಆತ್ಮಹತ್ಯೆಗೆ ಯತ್ನಿಸಿದ ಪತಿ. ಸದ್ಯ ಯಾಕೂಬ್ ದೊಡ್ಡಮನಿಯನ್ನು ಜಮಖಂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಹೀಗಾಗಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ಇತ್ತು. ಹೀಗಾಗಿ ಬನಹಟ್ಟಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವೇಳೆ ಜಡ್ಜ್ ಮುಂದೆ ಯಾಕೂಬ್ ದೊಡ್ಡಮನಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯಾಕೂಬ್ ದೊಡ್ಡಮನಿ ತನ್ನ ಪತ್ನಿ ಅನೈತಿಕ ಸಂಬಂಧದ ಬಗ್ಗೆ ಉಲ್ಲೇಖಿಸಿ ನ್ಯಾಯಾಲಯದ ಜಡ್ಜ್‌ಗೆ ಬರೆದಿರುವ ಪತ್ರದೊಂದು ಬಹಿರಂಗವಾಗಿದೆ.

ಸಹೋದರ ಹೇಳಿದಷ್ಟು

ಇನ್ನು ಬಗ್ಗೆ ಯಾಕೂಬ್ ದೊಡ್ಡಮನಿಯ ಸಹೋದರ ಸಂಬಂಧಿ ಸದಾಶಿವ ದೊಡ್ಡಮನಿ ಮಾಧ್ಯಮದವರೊಂದಿಗೆ ಮಾತನಾಡಿ, ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು. ಹಿರಿಯರು ಎಷ್ಟು ಕಾಳಜಿ ವಹಿಸಿದರೂ ದಂಪತಿ ಒಂದಾಗಲಿಲ್ಲ. ಇಂದು ಕೋರ್ಟ್‌ನಲ್ಲಿ ಕೇಸ್ ನಡೆದಿತ್ತು. ಈ ವೇಳೆ ನನ್ನ ಸಹೋದರ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಅನೈತಿಕ ಸಂಬಂಧ ಶಂಕೆ: ಪತಿಯಿಂದಲೇ ಪತ್ನಿಯ ಹತ್ಯೆ

ಅನೈತಿಕ ಸಂಬಂಧ ಶಂಕೆಯಿಂದ ಪತಿಯ ಪತ್ನಿಯ ಹತ್ಯೆ ಮಾಡಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ನಡೆದಿದೆ. ಕತ್ತು ಹಿಸುಕಿ ಪತ್ನಿ ಮಮತಾ(32) ಕೊಲೆಗೈದ ಪತಿ ರಂಗನಾಥ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬಾಲ್ಯ ವಿವಾಹಕ್ಕೆ ಪೋಕ್ಸೊ ಕೇಸ್: ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಪತ್ನಿ ಕೊಂಡು ಪೊಲೀಸ್ ಠಾಣೆಗೆ ಬಂದು ರಂಗನಾಥ್ ಶರಣಾಗಿದ್ದಾರೆ. ರಂಗನಾಥ್ ಮತ್ತು ಮಮತಾ 12 ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಬೀರೂರು ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್ ಡಿಕ್ಕಿ: ಬೈಕ್ ಸವಾರ ಸಾವು

ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಉಮೇಶ್(28) ಮೃತಪಟ್ಟಿರುವಂತಹ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ಹೆದ್ದಾರಿಯಲ್ಲಿ ನಡೆದಿದೆ. ಮೃತ ಉಮೇಶ್ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಗ್ರಾಮದ ನಿವಾಸಿ. ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 4:26 pm, ಗುರುವಾರ, 5 ಫೆಬ್ರವರಿ 26



Source link

Leave a Reply

Your email address will not be published. Required fields are marked *