Headlines

ಬಾಗಲಕೋಟೆ: ಮೊಬೈಲ್​ ಬಳಸಬೇಡಿ ಎಂದಿದ್ದಕ್ಕೆ ಹಾಸ್ಟೆಲ್​ ಬಿಟ್ಟ SSLC ವಿದ್ಯಾರ್ಥಿನಿಯರು

ಬಾಗಲಕೋಟೆ: ಮೊಬೈಲ್​ ಬಳಸಬೇಡಿ ಎಂದಿದ್ದಕ್ಕೆ ಹಾಸ್ಟೆಲ್​ ಬಿಟ್ಟ SSLC ವಿದ್ಯಾರ್ಥಿನಿಯರು


ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ಹಾಸ್ಟೆಲ್ ಬಿಟ್ಟ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರು

ಬಾಗಲಕೋಟೆ, ಡಿಸೆಂಬರ್ 12: ಹಾಸ್ಟೆಲ್‌ನಲ್ಲಿ ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್ ತೊರೆದ ಘಟನೆ ಬಾಗಲಕೋಟೆ (ಬಾಗಲಕೋಟ) ನವನಗರದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಮಹಿಳಾ ಪೊಲೀಸರು ದಾಖಲಾಗಿದ್ದು, ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದರು. ಕೊನೆಗೂ ವಿಜಪುರದಲ್ಲಿ ವಿದ್ಯಾರ್ಥಿನಿಯರನ್ನು ಪತ್ತೆ ಮಾಡಲಾಗಿದ್ದು, ಸುರಕ್ಷಿತವಾಗಿ ಕರೆತರಲಾಗಿದೆ.

ಸಿಬ್ಬಂದಿ ಮಾತಿಗೆ ಕೋಪಗೊಂಡ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ

ನವನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿನಿಯರನ್ನು ಕಂಡಿದ್ದ ಹಾಸ್ಟೆಲ್ ಸಿಬ್ಬಂದಿ, ಹಾಸ್ಟೆಲ್ ನಲ್ಲಿ ಮೊಬೈಲ್ ಬಳಸಿದರೆ ಪೋಷಕರಿಗೆ ತಿಳಿಸಲಾಗಿದೆ ಎಂದು ಎಚ್ಚರಿಕೆ ನೀಡಿದರು. ಅಷ್ಟಕ್ಕೇ ಕೋಪಗೊಂಡ 10ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ಬುಧವಾರ ರಾತ್ರಿ 8 ಗಂಟೆಯ ಸುಮಾರಿಗೆ ಶಾಲೆಯನ್ನೇ ಬಿಟ್ಟು ಹೋಗಿದ್ದಾರೆ. ಈ ವಿಷಯ ತಿಳಿದ ಸಿಬ್ಬಂದಿ ಕೂಡಲೆ ಬಾಗಲಕೋಟೆಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು.

ಇದನ್ನೂ ಓದಿ ಹಾಸ್ಟೆಲ್‌ನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ

ಕೆಲವೇ ಗಂಟೆಗಳಲ್ಲಿ ಬಾಲಕಿಯರ ಪತ್ತೆ ಹಚ್ಚಿದ ಪೊಲೀಸರು

ದೂರು ಸ್ವೀಕರಿಸಿದ ತಕ್ಷಣ ನಾಲ್ವರು ವಿದ್ಯಾರ್ಥಿನಿಯರ ಹುಡುಕಾಟ ಆರಂಭಿಸಿದ್ದರು. ಕೊನೆಗೂ ವಿಜಯಪುರದ ಬಸ್ ನಿಲ್ದಾಣ ಬಳಿ ವಿದ್ಯಾರ್ಥಿನಿಯರ ಪತ್ತೆ. ಬಾಗಲಕೋಟೆಯಿಂದ ಹುನಗುಂದ ಹೋಗಿದ್ದ ವಿದ್ಯಾರ್ಥಿನಿಯರು, ಅಲ್ಲಿಂದ ವಿಜಯಪುರಕ್ಕೆ ತೆರಳಿದ್ದರು. ಬಾಲಕಿಯರು ನಾಪತ್ತೆಯಾದ ನಾಲ್ಕೇ ತಾಸಿನಲ್ಲಿ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು ನಡುರಾತ್ರಿ 12.30 ರ ಹೊತ್ತಿಗೆ ಅವರನ್ನು ರಕ್ಷಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *