ಬಾಗಲಕೋಟೆ, ಡಿಸೆಂಬರ್ 03: ಜಿಲ್ಲೆಯಲ್ಲಿ ಏಡ್ಸ್ (ಏಡ್ಸ್) ಮಹಾಮಾರಿ ಸದ್ದಿಲ್ಲದೇ ವ್ಯಾಪಿಸುತ್ತಿದೆ. ಮೊದಲಿಗಿಂತ ಈಗ ಅದರ ಸಂಖ್ಯೆ ಕಡಿಮೆ, ಮೂರನೇ ಸ್ಥಾನಕ್ಕೆ ಇಳಿದಿದೆ. ಆದರೆ ಪಾಸಿಟಿವಿಟಿ ರೇಟ್ ರಾಜ್ಯದಲ್ಲಿ ಕರ್ನಾಟಕದಲ್ಲೇ (ಕರ್ನಾಟಕ) ನಂಬರ್ ಒನ್ ಇದ್ದು, ಆರೋಗ್ಯ ಇಲಾಖೆ ಅಂಕಿ-ಅಂಶಗಳು ಜನರ ನಿದ್ದೆಗೆಡಿಸಿದೆ.
ಹೆಚ್ಐವಿ ಪಾಸಿಟಿವಿಟಿ ರೇಟ್ ನಲ್ಲಿ ಬಾಗಲಕೋಟೆ ನಂಬರ್ ಒನ್
ಬಾಗಲಕೋಟೆ ಜಿಲ್ಲೆ ಅಂದರೆ ಕಳೆದ ಎರಡು ಅವಧಿಯಲ್ಲಿ ಹೆಚ್ಐವಿ ವಿಚಾರಕ್ಕೆ ಸಂಬಂಧಪಟ್ಟಂತೆ ಜನರು ಚಕಿತರಾಗಿ ತಿರುಗಿ ನೋಡುತ್ತಾರೆ. ಇತ್ತೀಚೆಗೆ ಹೆಚ್ಐವಿ ಪ್ರಮಾಣ ಬಾಗಲಕೋಟೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಮೊದಲನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದೆ. ಇದು ಒಂದು ಕಡೆ ಸಮಾಧಾನಕರ ಸಂಗತಿಯಾದರೆ, ರಾಜ್ಯದಲ್ಲೇ ಪಾಸಿಟಿವಿಟಿ ರೇಟ್‌ನಲ್ಲಿ ಬಾಗಲಕೋಟೆ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಕೇಳಿ ಜಿಲ್ಲೆಯ ಜನ ಭಯಭೀತರಾಗುವಂತೆ ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ಯುಟ್ ಡಯಾರಿಯಲ್ ಡಿಸೀಸ್ ಏರಿಕೆ: ಆರೋಗ್ಯ ಇಲಾಖೆಗೂ ಟೆನ್ಷನ್ ಶುರು
ಜಿಲ್ಲೆಯಲ್ಲಿ ಹೆಚ್ಐವಿ ಪರದೆಯ ಪರೀಕ್ಷೆಯಲ್ಲಿ 100 ಜನರು ಪರೀಕ್ಷೆ ಮಾಡಿದರೆ, 100 ಮಂದಿ ಒಬ್ಬರಂತೆ ಐವಿ ಪಾಸಿಟಿವ್ ಇದ್ದಾರೆ. ಆ ಪ್ರಕಾರ ಪಾಸಿಟಿವಿಟಿ ರೇಟ್ ನಲ್ಲಿ ಬಾಗಲಕೋಟೆ ಜಿಲ್ಲೆ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಈ ಕುರಿತಾಗಿ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಿಕ ಘಟಕದ ಮುಖ್ಯಸ್ಥ ಡಾ ಸುವರ್ಣ ಅವರು ಮಾಹಿತಿ ನೀಡಿದ್ದಾರೆ.
ಸದ್ಯ ಬಾಗಲಕೋಟೆ ಜಿಲ್ಲೆಯಲ್ಲಿ ಬರೋಬ್ಬರಿ 17,976 ಪ್ರಕರಣಗಳು ಆಯಕ್ಟೀವ್ ಆಗಿವೆ. ಯುವಕರು, ಯುವತಿಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಎನ್ನದೆ ಯಾರೆಂದರಲ್ಲಿ ಹೆಚ್ಐವಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಅಲೈವ್ ಕೇಸಸ್ 17,976 ಗಳ ಎತ್ತರ 300 ಮಕ್ಕಳಲ್ಲಿ, 13 ಜನ ಗರ್ಭಿಣಿಯರಲ್ಲಿ, 47 ಜನ ಬಾಣಂತಿಯರಲ್ಲಿ ಕಂಡು ಬಂದಿದೆ. ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿಲ್ಲ.
ಮಹಾರಾಷ್ಟ್ರ ಸೇರಿ ಅಂತಾರಾಜ್ಯ ವಲಸಿಗರ ಎಫೆಕ್ಟ್
ಮಹಾರಾಷ್ಟ್ರದ ಲಿಂಕ್‌ನಿಂದ ಹೆಚ್ ಐವಿ ಇನ್ನಷ್ಟು ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ಲಿಂಕ್ ಇರುವ ಜಿಲ್ಲೆಯ ಮುಧೋಳ ಮತ್ತು ಜಮಖಂಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ ಐವಿ ಕೇಸುಗಳು ಬರುತ್ತಿವೆ. 2025-26ನೇ ಸಾಲಿನಲ್ಲಿ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ 82 ಕೇಸ್ ಮತ್ತು ಮುಧೋಳ ತಾಲೂಕಿಯಲ್ಲಿ 86 ಕೇಸ್ ಪಟ್ಟಿವೆ. ಕಬ್ಬು ಕಟಾವುಗಾಗಿ ಪ್ರತಿವರ್ಷ ಮಹಾರಾಷ್ಟ್ರದಿಂದ ಬರುವ ಕಬ್ಬಿನ ಗ್ಯಾಂಗ್ ಜೊತೆ ಬಾಗಲಕೋಟೆ ಜಿಲ್ಲೆಗೆ ಬರುವ ಸಾವಿರಾರು ಮಹಾರಾಷ್ಟ್ರೀಯರ ಅಸುರಕ್ಷಿತ ಕಾರ್ಯಾಚರಣೆಯಿಂದಲೂ ಸಹ ಒಬ್ಬರಿಂದ ಒಬ್ಬರಿಗೆ ಹೆಚ್ ಐವಿ ಹರಡುತ್ತಿದೆ.
ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ: ನಿದ್ದೆ, ಬೆಳಗ್ಗೆ ತಿಂಡಿ ಬಿಟ್ರೆ ಅಪಾಯ ಫಿಕ್ಸ್!; ಬೆಚ್ಚಿ ಬೀಳಿಸುತ್ತೆ ಇತ್ತೀಚಿನ ಮಾಹಿತಿ
ಇನ್ನು ಹೆಚ್ ಐವಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೀದಿ ನಾಟಕ, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಹೆಚ್ಚು ಪರೀಕ್ಷೆ ಮಾಡುವುದರ ಮೂಲಕ ಹೆಚ್ ಐವಿ ನಿರ್ನಾಮಕ್ಕೆ ಮುಂದಾಗಿದೆ.
ಒಟ್ಟಿನಲ್ಲಿ ಹೆಚ್ ಐವಿಗೆ ಪ್ರಸ್ತುತ ಆರೋಗ್ಯ ಇಲಾಖೆ ಅಂಕಿ-ಅಂಶ ಜಿಲ್ಲೆಯ ಜನರಲ್ಲಿ ನಡುಕ ಹುಟ್ಟಿಸಿದ್ದು, ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ನಿರಂತರ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.