ಬಾಗಲಕೋಟೆ, (ಫೆಬ್ರವರಿ 20): ಬಾಗಲಕೋಟೆಯಲ್ಲಿ (ಬಾಗಲಕೋಟ) ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ (ಕಲ್ಲು ತೂರಾಟ) ನಡೆದಿದೆ. ಘಟನೆಯಲ್ಲಿ ಸೇರಿದಂತೆ ಹಲವರಿಗೆ ಗಾಯ ಪರಿಸ್ಥಿತಿ ತಿಳಿಗೊಳಿಸಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ, ಹೆಚ್ಚುವರಿ ಭದ್ರತೆಯನ್ನು ನಿಗದಿಪಡಿಸಲಾಗಿದೆ. ಇನ್ನು ಇಂದು (ಫೆಬ್ರವರಿ 20) ಡಿಸಿ ಕಚೇರಿಯಲ್ಲಿ ಕರೆದಿದ್ದ ಶಾಂತಿ ಸಭೆಗೆ ಮುಸ್ಲಿಂ ಮುಖಂಡ ಗೈರಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಹಿಂದೂ ಪ್ರಮುಖ ಸಹ ಶಾಂತಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದಿದ್ದಾರೆ.
ಇದೇ ವೇಳೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂದಗೆ, ಕೇವಲ ನಮ್ಮನ್ನ ಮಾತ್ರ ಶಾಂತಿ ಸಭೆಗೆ ಕರೆದಿದ್ದಾರೆ. ಮುಸ್ಲಿಂ ಸುಮುದಾಯದ ಪ್ರಮುಖ ಸಭೆಗೆ ಹಾಜರಾಗಿಲ್ಲ. ಶಾಂತಿ ಸಭೆ ಅಂದರೆ ಎರಡು ಕಡೆಯವರು ಇರಬೇಕು. ಅವರಿಗೆ ಶಾಂತಿ ಬೇಕಿಲ್ಲ. ಇಲ್ಲ ಅವರು ಬಂದಿಲ್ಲ. ಡಿಸಿ,ಎಸ್ ಪಿ ಎಲ್ಲರೂ ಕರೆದ ಸಭೆಗೆ ಅವರು ಬರೋದಿಲ್ಲ ಅಂದರೆ ಎಷ್ಟಿರಬೇಕು? ಅದಕ್ಕೆ ಹೇಳೋದು ಇದು ಕಾಂಗ್ರೆಸ್ ಪಕ್ಷದ ಪರಿಣಾಮ ಅಂತ. ನಾವು ಯಾವುದಕ್ಕೂ ಸುಮ್ಮನೆ ಇರುವುದಿಲ್ಲ. ಶಿವಾಜಿ ಮೂರ್ತಿಗೆ ಕಲ್ಲು ಹೊಡೆದಿದ್ದಾರೆ ಅದೇ ಜಾಗದಿಂದ ಪುಷ್ಪಗಳ ವೃಷ್ಟಿಗೈದು ಶಿವಾಜಿ ಮೆರವಣಿಗೆ. ಯಾವಾಗ ಶಿವಾಜಿ ಮೆರವಣಿಗೆ ಮಾಡುತ್ತಾರೆ ಎನ್ನುವುದನ್ನು ನಂತರ ತಿಳಿಸುತ್ತೇವೆ.