ಬಾಗಲಕೋಟೆ, ಫೆಬ್ರವರಿ 27: ಶಿವಾಜಿ ಜಯಂತಿ (ಶಿವಾಜಿ ಜಯಂತಿ ಮೆರವಣಿಗೆ) ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣ (ಕಲ್ಲು ತೂರಾಟ) ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಹಿಂದೂ ಕಾರ್ಯಕರ್ತನ ಬಂಧನಕ್ಕೆ ತೆರಳಿದ್ದ ತಳ್ಳಾಟ ನೂಕಾಟ ನಡೆದಿದೆ. ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಘಟನೆ ನಡೆದಿದೆ. ಮುತ್ತು ಮಾಗಿ ಎಂಬ ಯುವಕನನ್ನ ಕರೆದುಕೊಂಡು ಹೋಗಲು ಯತ್ನಿಸಿದ ವೇಳೆ ಪೊಲೀಸರಿಗೆ ಅಡ್ಡಲಾಗಿ ನಿಂತು ಜನರು ತಡೆದಿದ್ದಾರೆ. ಅಮಾಯಕರನ್ನ ಬಂಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಹಿಳೆಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು, ಹೈಡ್ರಾಮಾವೇ ನಡೆದಿದೆ.
ಪೊಲೀಸರನ್ನು ಅಡ್ಡಗಟ್ಟಿದ ಮಹಿಳೆಯರು
ಶಿವಾಜಿ ಮಹಾರಾಜರ ಜಯಂತಿ ದಿನ ಮೆರವಣಿಗೆ ವೇಳೆ ನಡೆದ ಕಲ್ಲು, ಚಪ್ಪಲಿ ತೂರಾಟ ಪ್ರಕರಣದಲ್ಲಿ ಕಿಚ್ಚು ಹಚ್ಚಿದೆ. ಘಟನೆ ನಡೆದು 7 ದಿನವಾದರೂ ಕಾವು ಆರಿಲ್ಲ. ನಿನ್ನೆ ಡಿಸಿ ಕಚೇರಿ ಎದುರು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಇನ್ನು ಹಿಂದೂ ಕಾರ್ಯಕರ್ತರ ಬಂಧನಕ್ಕೆ ಬಾಗಲಕೋಟೆ ಪೊಲೀಸರು ಬಂಧಿಸಿದ್ದು, ಈ ವೇಳೆ ಕಿಲ್ಲಾ ಓಣಿಯ ಮಹಿಳೆಯರು ಹಾಗೂ ಜನರು ಪೊಲೀಸರನ್ನು ಅಡ್ಡಗಟ್ಟಿದ್ದಾರೆ.
ಉದ್ರಿಕ್ತ ಜನರನ್ನ ಸಮಾಧಾನ ಮಾಡಿದ: ಮಾಜಿ ಶಾಸಕ ವೀರಣ್ಣ ಚರಂತಿಮಠ
ಇನ್ನು ಸ್ಥಳಕ್ಕೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ನೀಡಿ ಉದ್ರಿಕ್ತ ಜನರನ್ನು ಭೇಟಿ ಮಾಡಿ ಸಮಾಧಾನಪಡಿಸಿದರು. ಸ್ಥಳಕ್ಕೆ ಎಸ್ಪಿ ಬರಬೇಕು, ಪೊಲೀಸರ ಮೇಲೆ ಸೂಕ್ತರಾಗಲು ಮಹಿಳೆಯರು ಮತ್ತು ಹಿಂದೂ ಕಾರ್ಯಕರ್ತರು ಭಾಗವಹಿಸಿದರು. ಜನರ ಮಧ್ಯೆ ನಿಂತು ಎಸ್ಪಿ ಸಿದ್ದಾರ್ಥ್ ಗೋಯೆಲ್ಗೆ ಕರೆ ಮಾಡಿದ ವೀರಣ್ಣ ಚರಂತಿಮಠ, ಎಲ್ಲವೂ ಶಾಂತ ರೀತಿಯಲ್ಲಿ ಮುಗಿಯುತ್ತಿದೆ. ನೀವು ಬಂಧಿಸುವ ನೆಪದಲ್ಲಿ ಬಡ ಕಾಯಿಸಬೇಡಿ. ನಾನು ಇವರನ್ನು ಸಂತೈಸುತ್ತೇನೆ, ಸಮಾಧಾನ ಮಾಡುತ್ತೇನೆ. ನಿಮ್ಮ ಈ ರೀತಿ ಮಾಡುವುದು ಸರಿಯಲ್ಲ.
ಇದನ್ನೂ ಓದಿ: ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ ಪ್ರಕರಣ: ಫೆ. 26 ರಂದು ಬೃಹತ್ ಹೋರಾಟಕ್ಕೆ ಹಿಂದೂ ಸಂಘಟನೆಗಳ ಕರೆ
ಸ್ಥಳದಲ್ಲಿ ಉಪಸ್ಥಿತರಿದ್ದ ಡಿಎಸ್ ಪಿ ಪ್ರಶಾಂತ ಮುನ್ನೊಳ್ಳಿ ಜೊತೆಗೆ ಮಾತನಾಡಿದ ವೀರಣ್ಣ ಚರಂತಿಮಠ, ಎಲ್ಲವೂ ಶಾಂತವಿದ್ದಾಗ ಪೊಲೀಸರನ್ನು ಏಕೆ ಕಳಿಸಿದರು. ಆ ಹುಡುಗನ ತಂದೆ-ತಾಯಿ ಇದಾರೆ, ಮಹಿಳೆಯರ ಬಟ್ಟೆ ಹರೆದು ಹಾಕಿದ್ದಾರೆ. ನೀವು ಈ ರೀತಿ ಮಾಡುತ್ತಾ ಹೋದರೆ ಉರಿಯುವ ಬೆಂಕಿಗೆ ತುಪ್ಪ ಹಾಕಿದ ಹಾಗೆ ಆಗುತ್ತದೆ. ಇದರಿಂದ ಏನೂ ಶಾಂತವಾಗುವುದಿಲ್ಲ. ಏನು ಸಾಧನೆ ಮಾಡುವುದಕ್ಕೂ ಆಗುವುದಿಲ್ಲ. ಮೊದಲು ಅವರ ಹುಡುಗನನ್ನು ಅವರ ಮನೆಗೆ ಕಳುಹಿಸಿ. ನಾಳೆ ನಾನು ಎಸ್ ಪಿ ಆಫೀಸ್ ಗೆ ಹೋಗಿ ಮಾತನಾಡುತ್ತೇನೆ. ಈ ರೀತಿ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ದಯಮಾಡಿ ತಾವು ಈಗ ತಮ್ಮ ತಮ್ಮ ಮನೆಗಳಿಗೆ ಹೋಗಿ ಜನರಿಗೆ ಎಂದು ವೀರಣ್ಣ ಚರಂತಿಮಠ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.