ಯಶ್ (ಯಶ್) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಈಗಷ್ಟೇ ಬಿಡುಗಡೆ ಆಗಿದ್ದು, ಟೀಸರ್ ತುಂಬೆಲ್ಲ ಯಶ್ ಆವರಿಸಿಕೊಂಡಿದ್ದಾರೆ. ಯಶ್ ಅವರ ಎರಡು ಲುಕ್ಗಳು ಸಖತ್ ವೈರಲ್ ಆಗಿವೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗೆ ಹಲವು ನಟಿಯರು ನಟಿಸಿದ್ದು, ಟೀಸರ್ ಬಿಡುಗಡೆಗೆ ಮುಂಚೆಯೇ ನಟಿಯರ ಲುಕ್ಗಳನ್ನು ಅವರ ಪಾತ್ರದ ಕಿರು ಪರಿಚಯ ಮಾಡಿಕೊಡಲಾಗಿದೆ. ಇದೀಗ ಸಿನಿಮಾದ ಕೆಲವು ಪ್ರಮುಖ ಪಾತ್ರಗಳ ಕಿರು ಪರಿಚಯ ಮಾಡಿಕೊಡುತ್ತಿದೆ ಚಿತ್ರತಂಡ. ಇದೀಗ ‘ಬೀರ’ ಹೆಸರಿನ ಪಾತ್ರದ ಲುಕ್ ಬಿಡುಗಡೆಯಾಗಿದೆ.
ಕನ್ನಡದ ಪ್ಯಾನ್ ಇಂಡಿಯಾ ಪೋಷಕ ನಟ ಎನಿಸಿಕೊಂಡಿರುವ ಬಾಲಾಜಿ ಮನೋಹರ್ ಅವರ ಪಾತ್ರದ ಪೋಸ್ಟರ್ ಅನ್ನು ಇದೀಗ ಯಶ್ ಸೇರಿದಂತೆ ಚಿತ್ರತಂಡ ಹಂಚಿಕೊಂಡಿದೆ. ಅದ್ಭುತ ನಟರಾದ ಬಾಲಾಜಿ ಮನೋಹರ್ ಅವರು ‘ಬೀರ’ ಹೆಸರಿನ ಪವರ್ ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಬಿಡುಗಡೆ ಆಗಿರುವ ಅವರ ಲುಕ್ ಸಖತ್ ಆಗಿದೆ. ಹಳದಿ ಬಣ್ಣದ ಟಿಂಟ್ ಹೊಂದಿರುವ ದೊಡ್ಡ ಗ್ಲಾಸು ಧರಿಸಿ, ಬಾಯಲ್ಲಿ ಸಿಗಾರ್ ಇರಿಸಿಕೊಂಡು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ಬಾಲಾಜಿ. ಟೀಸರ್ನಲ್ಲಿ ಕಾಣುತ್ತಿರುವ ರಾಯಲ್ ಸರ್ಕಸ್ ಕಂಪನಿಯ ಮಾಲೀಕ ಈ ಬೀರ ಇರಬಹುದೇ ಎಂಬ ಅನುಮಾನ ಮೂಡುತ್ತದೆ ಅವರ ಲುಕ್.
ಬಾಲಾಜಿ ಮನೋಹರ್ನನ್ನು ಭೀರಾ ಆಗಿ ಪರಿಚಯಿಸಲಾಗುತ್ತಿದೆ – ವಯಸ್ಕರಿಗೆ ವಿಷಕಾರಿ ಕಾಲ್ಪನಿಕ ಕಥೆ#ವಿಷಕಾರಿ 19-03-2026 ರಿಂದ ವಿಶ್ವಾದ್ಯಂತ ಸಿನಿಮಾಗಳಲ್ಲಿ#ToxicTheMovie#ಮಾರ್ಚ್ 19 ರಂದು ವಿಷಕಾರಿ #ನಯನತಾರಾ @advani_kiara@ಹುಮಾಸ್ಕುರೇಶಿ @rukminitweets #ತಾರಾಸುತಾರಿಯಾ #ಸುದೇವ್ ನಾಯರ್ @Akshay0beroi #ಗೀತು ಮೋಹನದಾಸ್ @ರವಿ ಬಸ್ರೂರ್… pic.twitter.com/4qhCzV3gIc
— ಯಶ್ (@TheNameIsYash) ಫೆಬ್ರವರಿ 24, 2026
ಬಾಲಾಜಿ ಮನೋಹರ್ ಅವರು ಹಲವಾರು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದೆ ತೆಲುಗು, ತಮಿಳು ಈ ಕೆಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮ ಅದ್ಭುತ ನಟನೆಯಿಂದ ಸಿನಿ ಪ್ರೇಮಿಗಳ ಮೆಚ್ಚುಗೆ ಗಳಿಸಿದ್ದಾರೆ. ‘ಲೂಸಿಯಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನೆನಪುಳಿಯುವ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ಇದೀಗ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಪವರ್ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಾಜಿ ಮನೋಹರ್ ಮಾತ್ರವೇ ಅಲ್ಲದೆ ಅಕ್ಷಯ್ ಒಬೆರಾಯ್, ಸುದೇವ್ ನಾಯರ್ ಅವರು ಸಹ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದು, ಅವರ ಪಾತ್ರದ ಪೋಸ್ಟರ್ಗಳನ್ನು ಸಹ ಬಿಡುಗಡೆ ಮಾಡಲಾಗಿದೆ.
ಯಶ್ ಅವರು ರಾಯರ ಹೆಸರಿನ ಪಾತ್ರದ ಜೊತೆಗೆ ‘ಟಿಕೆಟ್’ ಹೆಸರಿನ ಪಾತ್ರದಲ್ಲಿಯೂ ನಟಿಸಿದ್ದು, ಎರಡು ಪಾತ್ರಗಳ ಲುಕ್ ರಿವೀಲ್ ಆಗಿದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರು ಸಹ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್ ದಾಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ