ನಂದಮೂರಿ ಬಾಲಕೃಷ್ಣ (ನಂದಮೂರಿ ಬಾಲಕೃಷ್ಣ) ನಟನೆಯ ‘ಅಖಂಡ 2’ ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಬೇಕಿತ್ತು. ನಿನ್ನೆ ಮಧ್ಯ ರಾತ್ರಿಯಿಂದಲೇ ಸಿನಿಮಾದ ಪ್ರೀಮಿಯರ್ ಶೋಗಳನ್ನು ಅಳವಡಿಸಲಾಗಿದೆ. ಕರ್ನಾಟಕ, ಆಂಧ್ರದ ಇತರೆಡೆಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿ ಸಿನಿಮಾ ನೋಡಲು ಕಾತರದಿಂದ ಕಾದಿದ್ದರು. ಚಿತ್ರಮಂದಿರಗಳನ್ನು ಸಿಂಗರಿಸಿ, ಕಟೌಟ್‌ಗಳು, ಫ್ಲೆಕ್ಸ್‌ಗಳನ್ನು ಕಟ್ಟಿ ಸಿನಿಮಾದ ಸ್ವಾಗತಕ್ಕೆ ಸಜ್ಜಾಗಿದ್ದರು. ಆದರೆ ಅಚಾನಕ್ಕಾಗಿ ಸಿನಿಮಾದ ಬಿಡುಗಡೆ ರದ್ದಾಗಿದೆ.
ಹೌದು, ಇಂದು (ಡಿಸೆಂಬರ್ 05) ಬಿಡುಗಡೆ ಆಗಬೇಕಿದ್ದ ‘ಅಖಂಡ 2’ ಸಿನಿಮಾದ ಬಿಡುಗಡೆ ಹಠಾತ್ತನೆ ರದ್ದಾಗಿದೆ. ಬಿಡುಗಡೆಗೆ ಎಲ್ಲ ತಯಾರಿ ಆದ ಬಳಿಕ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಸಿನಿಮಾದ ನಿರ್ಮಾಪಕರು ಕಾನೂನು ಸಿಕ್ಕುಗಳಲ್ಲಿ ಸಿಲುಕಿಕೊಂಡಿರುವ ಕಾರಣ ಸಿನಿಮಾ ಬಿಡುಗಡೆ ಆಗುತ್ತಿಲ್ಲ. ಇದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಆಂಧ್ರದ ಪ್ರಮುಖ ರಾಜಕೀಯ ಚಿತ್ರ, ಸ್ಟಾರ್ ನಟರೂ ಆಗಿರುವ ಬಾಲಕೃಷ್ಣ ಅವರಿಗೂ ಸಹ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಯಿತು.
‘ಅಖಂಡ 2’ ಸಿನಿಮಾವನ್ನು 14 ರೀಲ್ಸ್ ಪ್ಲಸ್ ಎಂಟರ್ಟೈನ್‌ಮೆಂಟ್ ಸಂಸ್ಥೆ ನಿರ್ಮಾಣ ಮಾಡಿದೆ. ಆದರೆ ಈ ಸಂಸ್ಥೆ ತಮ್ಮ ಹಿಂದಿನ ಸಿನಿಮಾಗಳಿಂದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ಹಳೆ ಬಾಕಿಯ ಕಾರಣ ಫೈನ್ಯಾನ್ಸಿಯರ್‌ಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ಕಾರಣಕ್ಕೆ ‘ಅಖಂಡ 2’ ಸಿನಿಮಾ ಬಿಡುಗಡೆ ತಡೆ ಹಿಡಿಯಲಾಗಿದೆ. ಇನ್ನು ತಮಿಳುನಾಡಿನಲ್ಲೂ ಸಹ ‘ಅಖಂಡ 2’ ಪ್ರತ್ಯೇಕ ಕಾನೂನು ಸಮಸ್ಯೆಗೆ ಗುರಿಯಾಗಿದೆ.
ಇದನ್ನೂ ಓದಿ:ಈ ವಾರ ‘ಧುರಂಧರ’, ‘ಅಖಂಡ 2’, ‘ಧರ್ಮಂ’ ಜೊತೆ ಇನ್ನಷ್ಟು ಸಿನಿಮಾ ರಿಲೀಸ್
28 ಕೋಟಿ ರೂಪಾಯಿ ಹಣಕಾಸಿನ ವಿಷಯವಾಗಿ ಎರೋಸ್ ಇಂಟರ್ನ್ಯಾಷನಲ್ ಮತ್ತು ‘ಅಖಂಡ 2’ ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್ ಎಂಟರ್ಟೈನ್‌ಮೆಂಟ್ ಸಂಸ್ಥೆ ನಡುವೆ ಕಾನೂನು ಸಮರ ನಡೆಯುತ್ತಿದೆ, ಇದೀಗ ಎರೋಸ್ ಇಂಟರ್ನ್ಯಾಷನಲ್ ಪರವಾಗಿ ಇಂಜೆಕ್ಷನ್ ಆರ್ಡರ್ ಹೊರಡಿಸಲಾಗಿದೆ. ಆದೇಶದಂತೆ 14 ರೀಲ್ಸ್ ಪ್ಲಸ್ ಎಂಟರ್ಟೈನ್ ಸಂಸ್ಥೆಯಿಂದ ನಿರ್ಮಾಣವಾದ ಯಾವುದೇ ಸಿನಿಮಾದ ಬಿಡುಗಡೆಗೆ ತಡೆ ನೀಡಲಾಗಿದೆ. ಅವರಿಗೆ ವಿತರಣೆಗೂ ತಡೆ ನೀಡಲಾಗಿದೆ.
ಭಾರವಾದ ಹೃದಯದಿಂದ, ಅದನ್ನು ನಿಮಗೆ ತಿಳಿಸಲು ನಾವು ವಿಷಾದಿಸುತ್ತೇವೆ #ಅಖಂಡ2 ಅನಿವಾರ್ಯ ಕಾರಣಗಳಿಂದ ನಿಗದಿತವಾಗಿ ಬಿಡುಗಡೆ ಮಾಡಲಾಗುವುದಿಲ್ಲ.
ಇದು ನಮಗೆ ನೋವಿನ ಕ್ಷಣವಾಗಿದೆ ಮತ್ತು ಚಿತ್ರಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಅಭಿಮಾನಿ ಮತ್ತು ಚಲನಚಿತ್ರ ಪ್ರೇಮಿಗಳಿಗೆ ಇದು ತರುವ ನಿರಾಶೆಯನ್ನು ನಾವು ನಿಜವಾಗಿಯೂ ಅರ್ಥಮಾಡಿಕೊಳ್ಳುತ್ತೇವೆ.
ನಾವು ಕೆಲಸ ಮಾಡುತ್ತಿದ್ದೇವೆ…
— 14 ರೀಲ್ಸ್ ಪ್ಲಸ್ (@14ReelsPlus) ಡಿಸೆಂಬರ್ 4, 2025
ಸಿನಿಮಾ ಬಿಡುಗಡೆ ರದ್ದಾಗಿರುವ ಬಗ್ಗೆ ಟ್ವೀಟ್ ಮಾಡಿರುವ 14 ರೀಲ್ಸ್ ಪ್ಲಸ್ ಸಂಸ್ಥೆ, ‘ಅಖಂಡ 2′ ಸಿನಿಮಾವು ನಿಗದಿತ ಸಮಯದಲ್ಲಿ ಬಿಡುಗಡೆ ಆಗುವುದಿಲ್ಲ ಎಂದು ಭಾರವಾದ ಹೃದಯದಿಂದ ನಾವು ತಿಳಿಸುತ್ತೇವೆ. ಇದು ಬಹಳ ನೋವಿನ ಸಮಯವಾಗಿದೆ. ಸಿನಿಮಾ ಬಿಡುಗಡೆಯಿಂದ ಅಭಿಮಾನಿಗಳಿಗೆ ಆಗುವ ನೋವು ನಮಗೆ ಅರ್ಥವಾಗುತ್ತದೆ. ಆದರೆ ತಪ್ಪಿಸಲಾಗದ ಕಾರಣಗಳಿಂದಾಗಿ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಸಮಸ್ಯೆಯನ್ನು ಸರಿಪಡಿಸಲು ನಾವು ಸತತ ಪ್ರಯತ್ನ ಮಾಡಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಿಮ್ಮ ಬೆಂಬಲ ನಮಗೆ ಅಗತ್ಯವಿದೆ. ಆದಷ್ಟು ಶೀಘ್ರವೇ ಸಿನಿಮಾ ಬಿಡುಗಡೆಯನ್ನು ನಾವು ಪ್ರಕಟಿಸುತ್ತೇವೆ’
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 9:01 am, ಶುಕ್ರ, 5 ಡಿಸೆಂಬರ್ 25