ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ‘ಅಖಂಡ 2’ ಸಿನಿಮಾ ನಾಳೆ (ಡಿಸೆಂಬರ್ 05) ಬಿಡುಗಡೆಯಾಗಲಿದೆ. ‘ಅಖಂಡ’ ಸಿನಿಮಾ ಭಾರಿ ಹಿಟ್ ಆಗಿದೆ. ಆ ಸಿನಿಮಾದಲ್ಲಿ ಬಾಲಕೃಷ್ಣ ಅಘೋರಿಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದ ಆಕ್ಷನ್, ಬಾಲಯ್ಯನ ಅಘೋರಿ ಪಾತ್ರವೆಲ್ಲ ಅಭಿಮಾನಿಗಳೆಲ್ಲ ಬಹಳ ಇಷ್ಟವಾಗಿತ್ತು. ಬೋಯಪಾಟಿ ಸೀನು ನಿರ್ದೇಶಿಸಿದ್ದ ಈ ಸಿನಿಮಾ 2021 ರಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗುತ್ತಿದೆ. ಇದೀಗ ಸಿನಿಮಾದ ಎರಡನೇ ಭಾಗ ನಾಳೆ ಬಿಡುಗಡೆ ಆಗಲಿದೆ. ಇದು ಬಹು ನಿರೀಕ್ಷಿತ ತೆಲುಗು ಸಿನಿಮಾಗಳಲ್ಲಿ ಒಂದಾಗಿದ್ದರೆ, ಇದೇ ಕಾರಣಕ್ಕೆ ಸಿನಿಮಾದ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ.
‘ಅಖಂಡ 2’ ಸಿನಿಮಾದ ಟಿಕೆಟ್ ದರಗಳನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಸರ್ಕಾರದ ಅನುಮತಿ ಪಡೆದು ಹೆಚ್ಚಿಸಲಾಗಿದೆ. ಆಂಧ್ರದಲ್ಲಿ ಅರ್ಲಿ ಮಾರ್ನಿಂಗ್ ಶೋ, ಮಿಡ್ ನೈಟ್ ಶೋಗಳು ಸಹ ಇರಲಿ. ಸಿನಿಮಾದ ಪ್ರೀಮಿಯರ್ ಶೋಗಳಿಗೆ 600 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಆದರೆ ದಿನದ ಬಿಡುಗಡೆಯ ಸಾಮಾನ್ಯ ಶೋಗಳಿಗೆ 375 ರಿಂದ 275 ರೂಪಾಯಿಗಳ ದರವನ್ನು ನಿಗದಿಪಡಿಸಲಾಗಿದೆ. ಸಿಂಗಲ್ ಪರದೆ, ಟೈರ್ 2 ನಗರಗಳಲ್ಲಿ 200 ರಿಂದ 175 ರೂಪಾಯಿಗಳಿಗೆ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
ಮೇಲಿನದ್ದು ಆಂಧ್ರ ಪ್ರದೇಶ ಡಿಸೆಂಬರ್ ಪ್ರಕಾರ ತೆಲಂಗಾಣದಲ್ಲಿ 04ರ ಮಧ್ಯಾಹ್ನದವರೆಗೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿಲ್ಲ. ಹೈದರಾಬಾದ್ ಅಂಥಾ ಮುಖ್ಯವಾದ ಸೆಂಟರ್ ನಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಲಿಲ್ಲ ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ತೆಲಂಗಾಣ ಸರ್ಕಾರವು ಪ್ರೀಮಿಯರ್ ಶೋ ಇನ್ನಿತರ ವಿಚಾರಗಳಿಗೆ ಖ್ಯಾತೆ ತೆಗೆದಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಟಾಲಿವುಡ್ಗೆ 50 ಕೆಜಿ ಚಿನ್ನ ಧರಿಸಿ ಬಂದ ನಟಿ ಸೋನಾಕ್ಷಿ ಸಿನ್ಹಾ
ಇನ್ನು ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ, ಆಂಧ್ರದಲ್ಲಿ ಹೆಚ್ಚಿನ ದರದಲ್ಲಿ ‘ಅಖಂಡ2’ ಸಿನಿಮಾ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದ್ದು, ಪ್ರೀಮಿಯರ್ ಶೋ ಟಿಕೆಟ್ ದರಗಳು ಗಗನ ಮುಟ್ಟಿವೆ. ಕೆಲ ಮಲ್ಟಿಪ್ಲೆಕ್ಸ್ಗಳಲ್ಲಿ 900-1000 ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಒಂದು ಮಲ್ಟಿಪ್ಲೆಕ್ಸ್ನಲ್ಲಿ 1950 ರೂಪಾಯಿಗೆ ಟಿಕೆಟ್ ಮಾರಾಟವಾಗುತ್ತಿದೆ. ಸಿಂಗಲ್ ಚಿತ್ರಮಂದಿರಗಳಲ್ಲಿಯೂ ಸಹ 400 ರಿಂದ 500 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ನಾಳಿನ ಅಂದರೆ ಡಿಸೆಂಬರ್ 05 ರ ಶೋನ ಟಿಕೆಟ್ ಬೆಲೆಗಳು ಸಹ ಕಡಿಮೆ ಏನಿಲ್ಲ. ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ ನಾಳಿನ ಶೋಗೂ ಸಹ 750 ರಿಂದ 500 ರವರೆಗಿನ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಶನಿವಾರ, ಭಾನುವಾರ ಈ ದರಗಳು ಹೆಚ್ಚು ಸಾಧ್ಯತೆ ಇದೆ. ಪ್ರಸ್ತುತ, ಸಿದ್ದಲಿಂಗೇಶ್ವರ ಅಂಥಹ ಚಿತ್ರಮಂದಿರಗಳಲ್ಲಿಯೂ ಸಹ 600, 500 ರೂಪಾಯಿ ಟಿಕೆಟ್ ದರ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ