ನಂದಮೂರಿ ಬಾಲಕೃಷ್ಣ (ನಂದಮೂರಿ ಬಾಲಕೃಷ್ಣ) ನಟನೆಯ ‘ಅಖಂಡ 2’ ಸಿನಿಮಾ ಕೆಲವು ಅಡೆತಡೆಗಳ ನಂತರ ಇಂದು (ಡಿಸೆಂಬರ್ 12) ಬಿಡುಗಡೆಯಾಗಿದೆ. ಬೆಂಗಳೂರು ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಡಿಸೆಂಬರ್ 11 ರಂದು ರಾತ್ರಿಯೇ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ‘ಅಖಂಡ 2’ ಸಿನಿಮಾ 2021 ರಲ್ಲಿ ಬಿಡುಗಡೆ ಆಗಿದ್ದ ‘ಅಖಂಡ’ ಸಿನಿಮಾದ ಸೀಕ್ವೆಲ್ ಆಗಿದ್ದು, ಬಾಲಯ್ಯ ಅವರು ಉಗ್ರ ನಾಗ ಸಾಧುವಿನ ಪಾತ್ರದಲ್ಲಿ ನಟಿಸಿದ್ದಾರೆ. ‘ಅಖಂಡ 2’ ಸಿನಿಮಾ ನೋಡಿದ ಅವರ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿನಿಮಾದ ಟ್ವಿಟರ್ ವಿಮರ್ಶೆ ಇಲ್ಲಿದೆ ನೋಡಿ.
#ಅಖಂಡ2 ~ 2.25/5 – ಕಟ್ಟುನಿಟ್ಟಾಗಿ ಸರಾಸರಿ
ಬಾಲಕೃಷ್ಣ ಅವರು ಅಖಂಡವಾಗಿ ಅದ್ಭುತವಾಗಿದ್ದಾರೆ, ಆದರೂ ನಿರಂತರವಾದ ಉಪದೇಶ ಮತ್ತು ಮೇಲಿನ ಕ್ರಿಯೆಯು ಸ್ವಲ್ಪ ಸಮಯದ ನಂತರ ನಿಮ್ಮನ್ನು ದಣಿದಿದೆ. ಬಿಜಿಎಂ ಕೆರಳಿಸುತ್ತದೆ.
ನೀವು ಅಭಿಮಾನಿಯಾಗಿದ್ದರೆ ಮತ್ತು ಹೆಚ್ಚಿನ ಅರ್ಥವಿಲ್ಲದೆ ಅಂತ್ಯವಿಲ್ಲದ ಜಗಳಗಳ ಮನಸ್ಥಿತಿಯಲ್ಲಿದ್ದರೆ ಅದನ್ನು ವೀಕ್ಷಿಸಿ.
— ಇಂಡಿಯಾ ಫ್ಲಿಕ್ (@IndiaFlick) ಡಿಸೆಂಬರ್ 11, 2025
ಇಂಡಿಯನ್ ಫ್ಲಿಕ್ ಹೆಸರಿನ ಟ್ವಿಟರ್ ಖಾತೆಯಿಂದ ಮಾಡಿದ ಟ್ವೀಟ್ ನಲ್ಲಿ ‘ಅಖಂಡ 2’ ಸಿನಿಮಾ ಬಹಳ ಸಾಧಾರಣವಾದ ಸಿನಿಮಾ. ಬಾಲಯ್ಯ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ನಿಮಿಷಕ್ಕೊಮ್ಮೆ ಬರುವ ಭಾಷಣ, ತಲೆ ಬುಡವಿಲ್ಲದ ಆಕ್ಷನ್ ದೃಶ್ಯಗಳು ತಲೆನೋವು ತರಿಸುತ್ತವೆ, ಜೊತೆಗೆ ಸಿನಿಮಾದ ಹಿನ್ನೆಲೆ ಸಂಗೀತ ಸಹ ಇರಿಟೇಟ್ ಮಾಡುತ್ತದೆ. ನೀವೊಬ್ಬ ಅಭಿಮಾನಿ ಆಗಿದ್ದರಷ್ಟೇ ಸಿನಿಮಾ ನೋಡಿ ಎಂದಿದೆ ಟ್ವೀಟ್.
ಫಿಸಿಕ್ಸ್ ಇಲ್ಲ, ಲಾಜಿಕ್ ಇಲ್ಲ ಬಾಲಯ್ಯನವರ ಅಖಂಡ ರುದ್ರ ತಾಂಡವವನ್ನು ಆನಂದಿಸಿ🔱🔥🔥🔥🔥💥💥💥💥#ಅಖಂಡ2ತಾಂಡವಂ 💥💥 pic.twitter.com/HiAzBw8Z1r
— Veeeraaa 🦅 (@NAYAKBHAIII) ಡಿಸೆಂಬರ್ 11, 2025
ವೀರಾರ ಎಂಬುವರು ಟ್ವೀಟ್ ಮಾಡಿ, ‘ಅಖಂಡ 2’ ಸಿನಿಮಾದಲ್ಲಿ ಎಲ್ಲಿಯೂ ಲಾಜಿಕ್ ಎಂಬುದೇ ಇಲ್ಲ. ಇಡೀ ಸಿನಿಮಾದಲ್ಲಿ ಬಾಲಯ್ಯ ರುದ್ರ ತಾಂಡವ ಆಡಿದ್ದಾರೆ. ಬಾಲಯ್ಯ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ. ಸಿನಿಮಾಕ್ಕೆ ಎರಡು ಸ್ಟಾರ್ಸ್ಟ್ ಕೊಟ್ಟಿದ್ದಾರೆ.
ಅಖಂಡ ಅಂತಿಮ ವಿಮರ್ಶೆ 1ನೇ ಅರ್ಧ – ದೈನ್ಯತೆ ಮತ್ತು ಯೋಗ್ಯತೆ👍 2ನೇ ಅರ್ಧ – ವಾಡಿಕೆಯ ಕಥೆಯ ಕಥಾವಸ್ತುವಿನೊಂದಿಗೆ ಪ್ರೊ ಮ್ಯಾಕ್ಸ್ ಕ್ರಿಂಜ್ 🥲👍
ಸಿನಿಮಾದ ಪ್ಲಸ್ ಪಾಯಿಂಟ್ @ಸಂಗೀತ ಥಮನ್ 😍👍 ಮೈನಸ್ ಪಾಯಿಂಟ್ ಮಕ್ಕಳನ್ನು ಈ ಚಿತ್ರಕ್ಕೆ ಕರೆದುಕೊಂಡು ಹೋಗಬೇಡಿ ಅವರು ಅಳುವುದು ಖಚಿತ 💯
— BOSS.🏏⏳ (@CharanismCEO) ಡಿಸೆಂಬರ್ 11, 2025
ಬಾಸ್ ಎಂಬವರು ಟ್ವೀಟ್ ಮಾಡಿ, ‘ಅಖಂಡ 2’ ಸಿನಿಮಾದ ಮೊದಲಾರ್ಧ ಕ್ಲೀಷೆ ದೃಶ್ಯಗಳಿದ್ದರೂ ತುಸು ಡೀಸೆಂಟ್ ಆಗಿದೆ. ದ್ವಿತೀಯಾರ್ಧ ಬಹಳ ಕ್ಲೀಷೆ ಮತ್ತು ಕ್ರಿಂಜ್ ದೃಶ್ಯಗಳನ್ನು ಒಳಗೊಂಡಿದೆ. ತಮನ್ನ ಅವರ ಸಂಗೀತ ಸಿನಿಮಾದ ಪ್ಲಸ್ ಪಾಯಿಂಟ್. ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಬೇಡಿ, ಖಂಡಿತ ಭಯಪಟ್ಟು ಕಣ್ಣೀರು ಹಾಕುತ್ತಾರೆ.
ದೇವರ ಹೆಸರಿನಲ್ಲಿ ಬಾಲಯ್ಯ ಮತ್ತು ಬೋಯಾ ಕ್ರಿಂಜ್ ಪ್ರೊ ಮ್ಯಾಕ್ಸ್ ಆಕ್ಷನ್ ಎಪಿಸೋಡ್ಗಳಿಗೆ ಹೆಚ್ಚು ಹೂಡಿಕೆ ಮಾಡಿದ್ದಾರೆ.
ಲೈಫ್ ಟೈಮ್ ಟ್ರೋಲ್ ಸ್ಟಫ್ #ಅಖಂಡ2
ದ್ವಿತೀಯಾರ್ಧ ಭಯಾನಕ
ಹಿಂದೂ ಧರ್ಮ …ಚೀನಾ …ಏಂ ಚೆಪ್ಪಲನಿ ಟೀಸರು 🙏🙏🙏
ಕ್ಷಮಿಸಿ ಅಖಂಡ 100 ಪಟ್ಟು ಉತ್ತಮವಾಗಿದೆ 🙏 https://t.co/wDi4SDetxW
— ತೆಲುಗು ಬಾಕ್ಸ್ ಆಫೀಸ್ (@TCinemaFun) ಡಿಸೆಂಬರ್ 11, 2025
ತೆಲುಗು ಬಾಕ್ಸ್ ಆಫೀಸ್ ನವರು ಟ್ವೀಟ್ ಮಾಡಿದ್ದು, ‘ದೇವರು, ಧರ್ಮದ ಹೆಸರಿನಲ್ಲಿ ಬಾಲಕೃಷ್ಣ ಮತ್ತು ಬೋಯಪಾಟಿ ಶ್ರೀನು ಅವರು ಬಹಳ ಕ್ರಿಂಜ್ ಆದ ಕತೆಯನ್ನು ಹೆಣೆದಿದ್ದಾರೆ. ‘ಅಖಂಡ 2’ ಸಿನಿಮಾವನ್ನು ಬಾಲಯ್ಯ ಜೀವನ ಪರ್ಯಂತ ಟ್ರೋಲ್ ಮಾಡಬಹುದು ಅಷ್ಟು ಕ್ರಿಂಜ್ ದೃಶ್ಯಗಳು ಸಿನಿಮಾದಲ್ಲಿವೆ. ಮೊದಲಾರ್ಧ ದ್ವಿತೀಯಾರ್ಧ ಬಹಳ ಭಯಾನಕವಾಗಿದೆ. ‘ಅಖಂಡ 2’ ಜೊತೆಗೆ ‘ಅಖಂಡ’ ನೂರು ಉತ್ತಮವಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ