ಬಳ್ಳಾರಿ, ಜನವರಿ 06: ಸಂಪ್ರದಾಯದ ಪ್ರಕಾರ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತದೇಹವನ್ನು ಮಣ್ಣು ಮಾಡಬೇಕಿತ್ತು. ಆದರೆ ಸುಟ್ಟು ಹಾಕಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಬಳ್ಳಾರಿ ಜನಾರ್ದನರೆಡ್ಡಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಶೇಖರ್ ಮೃತದೇಹವನ್ನು ಮಣ್ಣು ಮಾಡಬೇಕಿತ್ತು. ಸಾಕ್ಷಿ ನಾಶ ಮಾಡಬೇಕು ಅಂತ ವ್ಯವಸ್ಥಿತವಾಗಿ ಸುತ್ತು ಹಾಕಲಾಗಿದೆ. ಅವರ ಕುಟುಂಬಸ್ಥರನ್ನ ಹೆದರಿಸಿ, ಬೆದರಿಸಿದ್ದಾರೆ. ಬಹಳಷ್ಟು ಬುಲೆಟ್ ಆತನ ದೇಹ ಹೊಕ್ಕಿದೆ. ಏಕೆ ಸುತ್ತು ಹಾಕಿದರು. ಇಂದಲ್ಲಾ ನಾಳೆ ಸತ್ಯ ಹೊರಗೆ ಬರುತ್ತೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.