Headlines

ಬಿಸಿಲ ಬೇಗೆಗೆ ಬಳ್ಳಾರಿ ಮಂದಿ ಹೈರಾಣ: ಜನರಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ

ಬಿಸಿಲ ಬೇಗೆಗೆ ಬಳ್ಳಾರಿ ಮಂದಿ ಹೈರಾಣ: ಜನರಲ್ಲಿ ಹೆಚ್ಚಿದ ಆರೋಗ್ಯ ಸಮಸ್ಯೆ


ಬಳ್ಳಾರಿ, ಮಾರ್ಚ್ 04: ರಾಜ್ಯಾದ್ಯಂತ ರಿಂದಯ ಬಿಸಿ ಪ್ರಾರಂಭವಾಗಿದ್ದು, ಸೆಕೆಯ ವಾತಾವರಣ ಇದೆ. ಆದರೆ ಗಣಿನಾಡು ಬಳ್ಳಾರಿಯ ಮಂದಿ ಮಾತ್ರ ಈಗಲೇ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದಾರೆ. ಕಳೆದ 2-3 ದಿನಗಳಿಂದ ಬಳ್ಳಾರಿಯಲ್ಲಿ 36°, 37° ಮತ್ತು 38° ಸೆಲ್ಸಿಯಸ್ ವರಗೆ ಉಷ್ಣಾಂಶ ದಾಖಲಾಗಿದೆ. ಹೀಗಾಗಿ ಬಿಸಿಲಿನ ಧಗೆಗೆ ಜನ ಹೈರಾಣಾಗಿದ್ದಾರೆ. ಹವಾಮಾನ ಇಲಾಖೆ ಕೂಡ ಜಿಲ್ಲೆಯಲ್ಲಿ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ವಾತಾವರಣದಲ್ಲಿ ಅತೀ ಹೆಚ್ಚು ಬಿಸಿ ಗಾಳಿ ಇರಬಹುದಾಗಿದ್ದು, ಜನ ಜಾಗೃತಿಯಿಂದ ಇರುವಂತೆ ತಿಳಿಸಲಾಗಿದೆ.

ಆಸ್ಪತ್ರೆ ಸೇರುತ್ತಿರುವ ಮಂದಿ

ಇನ್ನು ಸೆಕೆ ತಾಳಲಾರದೆ ಜನ ತಂಪುನೀಯಗಳ ಮೊರೆ ಹೋಗುತ್ತಿದ್ದಾರೆ. ಎಳನೀರು, ಜ್ಯೂಸ್‌ನಂತಹ ಪೇಯಗಳ ಜೊತೆಗೆ ಕಲ್ಲಂಗಡಿ ತಿಂದು ಬಿಸಿಲ ಧಗೆಯಿಂದ ತಮ್ಮನ್ನ ತಾವು ನೋಡಿಕೊಳ್ಳುತ್ತಿದ್ದಾರೆ. ಬಿಸಿಲಿನ ಶಾಖಕ್ಕೆ ನಿರ್ಜಲೀಕರಣ, ಕಣ್ಣು ಉರಿ, ಆಯಾಸ, ಟೆಲಿ ನೋವು ಮುಂತಾದ ಕಾರಣಗಳಿಗೆ ಆಸ್ಪತ್ರೆಯ ಮುಖ ಮಾಡುವವರ ಸಂಖ್ಯೆ ಹೆಚ್ಚಿದೆ. ಜನ ಮನೆ ಬಿಟ್ಟು ಹೊರ ಬರಲು ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಈಗಲೇ ಸೆಕೆಯಾದರೆ ನಡು ಇಷ್ಟದಲ್ಲಿ ದೇವರೇ ನಮ್ಮನ್ನು ಕಾಪಾಡಬೇಕು. ಈಗಲೇ ಊಟ-ತಿಂಡಿ ಬಿಟ್ಟು ಕೇವಲ ತಂಪುಪಾನೀಯಗಳನ್ನು ಸೇವಿಸಿ ಜೀವನ ಮಾಡುತ್ತಿದ್ದೇನೆ ಎಂದು ಜನರು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: ದೇಹ ತಂಪಾಗಿಸಲು ಈ ಹಣ್ಣುಗಳನ್ನು ಸೇವಿಸಲೇಬೇಕು

ಟ್ರಾಫಿಕ್ ಸಿಗ್ನಲ್‌ಗಳ ಬಳಿ ನೆರಳಿಗೆ ಆಗ್ರಹ

ಬಿಸಿಲ ಬೇಗೆಯ ವಾಹನ ಸವಾರರನ್ನು ರಕ್ಷಿಸಲು ಆಧುನಿಕ ಟ್ರಾಫಿಕ್ ಸಿಗ್ನಲ್‌ಗಳ ಬಳಿ ನೆರಳಿಗೆ ವ್ಯವಸ್ಥೆ ಮಾಡಿಕೊಡಬೇಕು. ಅಲ್ಲಲ್ಲಿ ನೀರಿನ ಕುಟೀರಗಳನ್ನ ಸ್ಥಾಪಿಸಿ ಜನರ ದಾಹ ತೀರಿಸುವ ಕೆಲಸ ಮಾಡಬೇಕು ಸಾರ್ವಜನಿಕರ ಆಗ್ರಹ. ಬಿಸಿಲಿನ ಕಾರಣ ಜನ ಹೆಚ್ಚಾಗಿ ತಂಪು ಪಾನೀಯಗಳ ಮೊರೆ ಹೋಗ್ತಿರೋದ್ರಿಂದ ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಅವುಗಳ ದರವನ್ನೂ ಏರಿಕೆ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಸೆಕೆಗೆ ಹೈರಾಣಾಗಿರುವ ಗಣಿ ನಾಡಿನ ಮಂದಿ ಒಮ್ಮೆ ಮಳೆ ಬರಲಪ್ಪಾ ಎಂದು ಪ್ರಾರ್ಥನೆ ಕೂಡ ಮಾಡುತ್ತಿದ್ದಾರೆ. ಈ ಹಿಂದೆ ಯಾವ ವರ್ಷವು ಇಷ್ಟು ಪ್ರಮಾಣದ ಬಿಸಿಲು ಇರಲಿಲ್ಲ. ಈ ವರ್ಷ ಮಾತ್ರ ಅಬ್ಬಾ ಅದೇಂತಾ ಸೆಕೆ ಎಂಬ ಉದ್ಗಾರದ ಮಾತುಗಳೂ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:55 pm, ಬುಧವಾರ, 4 ಮಾರ್ಚ್ 26



Source link

Leave a Reply

Your email address will not be published. Required fields are marked *