
ಇಸ್ಲಾಮಾಬಾದ್, ಏಪ್ರಿಲ್ 13: ಬಲೂಚಿಸ್ತಾನ(ಬಲೂಚಿಸ್ತಾನ್) ನೆಲದ ಮೇಲೆ ಸರಣಿ ದಾಳಿಗಳನ್ನು ನಡೆಸುತ್ತಿದ್ದ ಬಲೂಚ್ ಪ್ರತ್ಯೇಕತಾವಾದಿಗಳು ಈಗ ತಮ್ಮ ಕಾರ್ಯತಂತ್ರವನ್ನು ಬದಲಿಸಿದ್ದಾರೆ. ಭಾನುವಾರ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆಯ (ಪಾಕಿಸ್ತಾನ ಕೋಸ್ಟ್ ಗಾರ್ಡ್) ಗಸ್ತು ದೋಣಿಯ ಮೇಲೆ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ರೈಟರ್ಸ್ ವರದಿಯ ಪ್ರಕಾರ, ಕಡಲ ಪ್ರಾಧಿಕಾರದ ಹಡಗಿನ ಮೇಲೆ ನಡೆದ ಇತಿಹಾಸದ ಮೊದಲ ದಾಳಿ ಇದಾಗಿದೆ.
ನಡೆದಿದ್ದೇನು?
ಪಾಕಿಸ್ತಾನ-ಇರಾನ್ ಗಡಿಯ ಸಮೀಪವಿರುವ ಕರಾವಳಿ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ದೋಣಿಯು ಎಂದಿನಂತೆ ಗಸ್ತು ತಿರುಗುತ್ತಿತ್ತು. ಈ ವೇಳೆ ದೋಣಿಯನ್ನು ಸುತ್ತುವರೆದ ದಂಗೆಕೋರರು ಮನಬಂದಂತೆ ಗುಂಡಿನ ಮಳೆ ಕರೆದಿದ್ದಾರೆ. ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ಭದ್ರತಾ ಸಿಬ್ಬಂದಿಗೆ ಚೇತರಿಸಿಕೊಳ್ಳಲು ಸಮಯವೇ ಸಿಗಲಿಲ್ಲ. ಪರಿಣಾಮವಾಗಿ ಮೂವರು ಸೈನಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
‘ಬಿಎಲ್‌ಎ’ ಹೊಣೆ ಮತ್ತು ಹೊಸ ಕಾರ್ಯತಂತ್ರ
ನಿಷೇಧಿತ ಸಂಘಟನೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಪಾಕಿಸ್ತಾನಕ್ಕೆ ಅಪಾಯಕಾರಿ ಎಚ್ಚರಿಕೆ ನೀಡಲಾಗಿದೆ
ಸಮುದ್ರವೇ ಮುಂದಿನ ರಣರಂಗ
ನಾವು ಇನ್ನು ಮುಂದೆ ಭೂಮಿಗೆ ಮಾತ್ರ ಸೀಮಿತವಾಗಿಲ್ಲ. ಸಮುದ್ರ ಗಡಿಯಲ್ಲಿ ದಾಳಿ ನಡೆಸುವುದು ನಮ್ಮ ಹೊಸ ಸೇನಾತಂತ್ರದ ಭಾಗವಾಗಿದೆ ಎಂದು ಬಿಎಲ್‌ಎ ಘೋಷಿಸಿದೆ. ಸಮುದ್ರದ ಮಧ್ಯದಲ್ಲಿ ದಾಳಿ ನಡೆಸುವ ಮೂಲಕ ತಾವು ಜಲಮಾರ್ಗದಲ್ಲಿಯೂ ಭದ್ರತಾ ಪಡೆಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂದು ಬಂದೂಕು ಹಾಕಿದ್ದಾರೆ.
ಮತ್ತಷ್ಟು ಓದಿ: ಸುಮ್ನೆ ಇರೋಕಾಗ್ದೆ ಭಾರತ-ಇರಾನ್ ನಡುವೆ ಬೆಂಕಿ ಹಚ್ಚಲು ಕುತಂತ್ರ ನಡೆಸಿದ ಪಾಕ್
ಗ್ವಾದರ್ ಬಂದರಿಗೆ ಎದುರಾದ ಭೀತಿ?
ಈ ದಾಳಿಯು ನಡೆದ ಪ್ರದೇಶವು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಚೀನಾದ ‘ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್’ನ ಪ್ರಮುಖ ಭಾಗವಾಗಿರುವ ಗ್ವಾದರ್ ಆಳ ಸಮುದ್ರ ಬಂದರು ಈ ಕರಾವಳಿಯಲ್ಲಿದೆ. ಕೋಸ್ಟ್ ಗಾರ್ಡ್ ಮೇಲಿನ ದಾಳಿಯು ಈ ಬಂದರು ಮತ್ತು ಇಲ್ಲಿ ನಡೆಯುತ್ತಿರುವ ಚೀನಾ ಮೂಲಸೌಕರ್ಯ ಯೋಜನೆಗಳ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಾಬೂಲ್ ಕಡೆಗೆ ಇಸ್ಲಾಮಾಬಾದ್ ಬೆರಳು
ಪಾಕಿಸ್ತಾನ ಸರ್ಕಾರವು ಈ ದಾಳಿಯ ಹಿಂದೆ ಅಫ್ಘಾನಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದೆ. ಬಲೂಚ್ ಉಗ್ರರಿಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿದೆ ಮತ್ತು ಈ ದಾಳಿಗಳನ್ನು ಕಾಬೂಲ್‌ನಿಂದಲೇ ಯೋಜಿಸಲಾಗಿದೆ ಎಂದು ಇಸ್ಲಾಮಾಬಾದ್ ನಂಬುತ್ತದೆ. ಆದರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಈ ಆರೋಪಗಳನ್ನು ಸಾರಸಗಟಾಗಿ ನಿರಾಕರಿಸಿದೆ.
ಭೂಮಿಯ ಮೇಲಿನ ಯುದ್ಧ ಈಗ ಸಮುದ್ರಕ್ಕೂ ವ್ಯಾಪಿಸಿದೆ. ಬಿಎಲ್‌ಎ ನ ಈ ಹೊಸ ರೂಪ ಪಾಕಿಸ್ತಾನಕ್ಕೆ ಇದೆ, ಈ ಪ್ರದೇಶದಲ್ಲಿ ಇರಿಸಲಾಗಿರುವ ಚೀನಾಕ್ಕೂ ನಡುಕ ಹುಟ್ಟಿಸಿದೆ. ಅರಬ್ಬಿ ಸಮುದ್ರದ ಭದ್ರತೆ ಈಗ ಜಾಗತಿಕ ಮಟ್ಟದ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ