Headlines

ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾದ್ರಾ ಬಂಡೀಪುರ ಅರಣ್ಯ ಸಿಬ್ಬಂದಿ? ರೈತರ ವಿರುದ್ದವೇ ದಬ್ಬಾಳಿಕೆ

ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾದ್ರಾ ಬಂಡೀಪುರ ಅರಣ್ಯ ಸಿಬ್ಬಂದಿ? ರೈತರ ವಿರುದ್ದವೇ ದಬ್ಬಾಳಿಕೆ


ಅರಣ್ಯ ಸಿಬ್ಬಂದಿ ವಿರುದ್ಧ ಎಸ್ಪಿ ಗರಂ ಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ

ಚಾಮರಾಜನಗರ, ಫೆಬ್ರವರಿ 19: ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ಸಫಾರಿ (ಸಫಾರಿ) ಈಗ ಮತ್ತೆ ಕೆಲ ಷರತ್ತುಗಳೊಂದಿಗೆ ಪುನಾರಂಭ ಮಾಡಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ರೈತರು ಇಂದು ಬಂಡೀಪುರದ ಸಫಾರಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ರೆಸಾರ್ಟ್ ವಿರೋಧ ವ್ಯಕ್ತಪಡಿಸಿದ್ದು, ಅರಣ್ಯ ಸಿಬ್ಬಂದಿ ರೆಸಾರ್ಟ್ ನವರನ್ನ ಸಫಾರಿ ಕೇಂದ್ರದ ಒಳ ಬಿಟ್ಟು ನೌಟಂಕಿ ಆಟವಾಡಿದ್ದಾರೆ.

ಸಫಾರಿ ಪುನಾರಂಭಕ್ಕೆ ಸೂಚನೆ

ಸದಾ ಮಾನವ, ಕಾಡು ಸಂಘರ್ಷದಿಂದ ಬೇಸತ್ತಿದ್ದ ಜನರಿಗೆ ಸಫಾರಿ ಬಂದ್ ಮಾಡಿ ಸರ್ಕಾರ ಗುಡ್ ನ್ಯೂಸ್ ಕೊಟ್ಟಿತ್ತು. ಸಫಾರಿ ಬಂದ್ ಆಗಿದ್ದೆ ತಡ ಕಾಡು ಪ್ರಾಣಿ ದಾಳಿ ಕೂಡ ಕಡಿಮೆಯಾಗಿತ್ತು. ಆದರೆ ಯಾವ ಲಾಬಿಗೆ ರಾಜ್ಯ ಸರ್ಕಾರ ಬಿಟ್ಟೋ ಗೊತ್ತಿಲ್ಲ ಮತ್ತೆ ಇದೀಗ ಸಫಾರಿ ಪುನಾರಂಭಕ್ಕೆ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ನಾಳೆಯಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ ಪುನರಾರಂಭ: ಗುಡ್ನ್ಯೂಸ್ ಕೊಟ್ಟ ಅರಣ್ಯ ಸಚಿವರು

ಯಾವಾಗ ಸಚಿವ ಈಶ್ವರ್ ಖಂಡ್ರೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಬಂಡೀಪುರ ನಾಗರಹೊಳೆ ಸಫಾರಿಯನ್ನ ಶೇಕಡಾ 50 ಪರ್ಸೆಂಟ್ ಅಷ್ಟು ಮತ್ತೆ ಓಪನ್ ಮಾಡಲಾಗುತ್ತೆ ಅಂತ ಆರ್ಡರ್ ಮಾಡಿದ್ದರೆ, ಇತ್ತ ಗಡಿ ಜಿಲ್ಲೆಯ ರೈತರ ಕಣ್ಣು ಈಗ ಕೆಂಪಾಗಿದೆ. ಯಾವುದೇ ಕಾರಣಕ್ಕೂ ಬಂಡೀಪುರ ನಾಗರಹೊಳೆ ಸಫಾರಿಯನ್ ರೀ ಓಪನ್ ಮಾಡಬಾರದು ಅಂತ ಬಂಡೀಪುರ ಸಫಾರಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುರಂತ ಅಂದರೆ ಬಂಡಿಪುರ ಆರ್.ಎಫ್.ಓ ಮಲ್ಲೇಶ್ ಹಾಗೂ ಎಸ್.ಸಿ.ಎಫ್.ನವಿನ್ ರೆಸಾರ್ಟ್ ಸಿಬ್ಬಂದಿಗೆ ಎತ್ತಿ ಕಟ್ಟಿ ಪ್ರತಿಭಟನೆ ನಡೆಸಲು ಉತ್ತೇಜನ ನೀಡಿದ್ದು, ಬಂಡೀಪುರ ಸಫಾರಿ ಪಾಯಿಂಟ್ ಒಳಗಡೆ ರೆಸಾರ್ಟ್ ಕಡೆಯವರನ್ನ ಬಿಟ್ಟುಕೊಟ್ಟಿದ್ದಾರೆ. ಇದನ್ನು ಕಂಡು ಗರಂ ಆದ ಎಸ್ಪಿ ಮುತ್ತುರಾಜ್, ಆರ್‌ಎಫ್‌ಓ ಮಲ್ಲೇಶ್, ಎಸ್‌ಸಿಎಫ್ ನವೀನ್ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಎಸ್ಪಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳುತ್ತಿದ್ದಂತೆ ಸಫಾರಿ ಪಾಯಿಂಟ್ ಒಳಗಡೆ ಇದ್ದ ರೆಸಾರ್ಟ್ ನವರನ್ನ ಬಂಡೀಪುರ ಅರಣ್ಯ ಸಿಬ್ಬಂದಿ ಹೊರಗೆ ಕಳಿಸಿದ್ದಾರೆ. ಬಂಡೀಪುರ ಅರಣ್ಯ ಸಿಬ್ಬಂದಿಯ ಈ ನಡೆ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸಫಾರಿ ಬಂದ್ ನಿಂದ ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ ಎಂದು ದಂಡು! ಕರ್ನಾಟಕಕ್ಕಾಗುವ ನಷ್ಟವೆಷ್ಟು ಗೊತ್ತಾ?

ಒಟ್ಟಿನಲ್ಲಿ ರೆಸಾರ್‌ಗೆ ಒಳಪಟ್ಟು ಲಾಬಿಗೆ ತೆಗೆದುಕೊಂಡು ಓಪನ್ ಆಗಿ ರೆಸಾರ್ಟ್‌ನವರಿಗೆ ಬೆಂಬಲಿಸಿದ ಇಂತಾ ಆರ್‌ಎಫ್‌ಓ ಮಲ್ಲೇಶ್, ಇಎಸ್‌ಎಫ್ ನವೀನ್ ವಿರುದ್ಧ ಕ್ರಮಕೈಗೊಳ್ಳಲು ಜನರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *