ನೀನು ನನ್ನ ಪ್ಲೇವರ್, ಬಂದು ಬಿಡು ಬಂಗಾರಿ, ನಿನ್ನ ರಾಣಿ ಥರ ನೋಡ್ಕೋತೀನಿ ಬಂದು ಬಿಡು ಲೀಲಾ ಹೀಗೆ ಮಂಜು ಗೋಳಾಡಿದ್ದು ನೀವೆಲ್ಲರೂ ನೋಡಿದ್ದೀರ. ಇದೀಗ ಅದೇ ರೀತಿಯ ಸನ್ನಿವೇಷ ಶಾಂತಂ ಪಾಪಂನಲ್ಲಿ ಮೂಡಿ ಬಂದಿದೆ. ಆಟೋ ರಾಜ ಬಂದು ಬಿಡು ಶೀಲಾ ಅಂದ್ರೆ ಬರ್ತಾಳಾ?

ಕಲರ್ಸ್ ಕನ್ನಡದ ಶಾಂತಂ ಪಾಪಂ ಇಡೀ ದಕ್ಷಿಣ ಭಾರತದಲ್ಲಿ ಪ್ರಸಾರವಾಗುತ್ತಿರುವ ಏಕೈಕ ಕ್ರೈಂ ಆಧಾರಿತ ಫಿಕ್ಷನ್ ಶೋ ಆಗಿದೆ.

ಈಗ ಶಾಂತಂ ಪಾಪಂ ಸೀಸನ್ 7 ತಲುಪಿದ್ದು ಇದುವರೆಗೆ 1000 ಕ್ಕೂ ಹೆಚ್ಚು ಎಪಿಸೋಡ್ಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಸೀಸನ್ 7 ನ ಹೊಸ ಕತೆಗಳು ಪ್ರೇಕ್ಷಕರನ್ನು ಆಕರ್ಷಿಸಲು ಜನರ ಮನಸನ್ನು ಗೆದ್ದಿವೆ.

ಪ್ರತಿ ರಾತ್ರಿ 10:30 ಕ್ಕೆ ಪ್ರಸಾರವಾಗುವ (ಸೋಮವಾರದಿಂದ- ಶುಕ್ರವಾರ) ಶಾಂತಂ ಪಾಪಂ ನ ಕತೆಗಳಲ್ಲಿ ಸದಾ ಹೊಸತನ ತರಲು ಕಲರ್ಸ್ ಕನ್ನಡ ವಾಹಿನಿ ನಿರಂತರ ಪ್ರಯತ್ನದಲ್ಲಿದೆ.

ಇಂದು ರಾತ್ರಿ ಪ್ರಸಾರವಾಗಲಿರುವ “ಬಂದು ಬಿಡು ಶೀಲಾ” ಎಪಿಸೋಡ್ ನ ಕಥೆಯಲ್ಲಿ ಆಟೋರಾಜ ತನ್ನ ಮಕ್ಕಳಿಬ್ಬರ ಜೊತೆ, ತನ್ನನ್ನು ಬಿಟ್ಟು ತನ್ನ ಪ್ರಿಯತಮನ ಜೊತೆ ಪರಾರಿಯಾಗಿರೋ ತನ್ನ ಪತ್ನಿ ಶೀಲಾಗೆ “ಬಂದು ಬಿಡು ಶೀಲಾ” ಎಂದು ಕೂಗಿ ಕೂಗಿ ಹೇಳುತ್ತಿರುವುದನ್ನು ಪ್ರೋಮೋದಲ್ಲಿ ನೋಡಬಹುದಾಗಿದೆ.

ಶೀಲಾ ಬಂದು ಬಿಡ್ತಾಳಾ ಎಂಬ ಕೂತೂಹಲಕ್ಕಾಗಿ ಇಂದಿನ ಎಪಿಸೋಡ್ ಅನ್ನು ತಪ್ಪದೇ ನೋಡಿ.

Source link
ಓಡಿ ಹೋದ ಆಟೋರಾಜನ ಹೆಂಡತಿ, ಬಂದು ಬಿಡು ಶೀಲಾ ಅಂತ ಗೋಗರೆದಾಗ ಬರ್ತಾಳಾ?