ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಒಂದೇ!

ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಒಂದೇ!


ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಸಮವಂತೆ!

ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ (ಬೆಂಗಳೂರು ವಾಯು ಗುಣಮಟ್ಟ ಹೇಳಷ್ಟೇನು ಬದಲಾವಣೆ ಕಂಡಿಲ್ಲ. ಕಳೆದ ಹಲವು ದಿನಗಳಿಂದ 170 ರಿಂದ 200ರವೆಗೂ ಏರಿಳಿತ ಕಾಣುತ್ತಿರುವ ಗುಣಮಟ್ಟ ವಾಯು ಮಾಲಿನ್ಯಕ್ಕೂ ಕೊಡುಗೆ ನೀಡುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಉಸಿರಾಡುವ ಜನರು ದಿನಕ್ಕೆ 3.2 ಸಿಗರೇಟ್ ಸೇದಿದಷ್ಟೇ ಹಾನಿ ಅನುಭವಿಸುತ್ತಿದ್ದಾರೆ ಎಂದು AQI. ಇದು ಹೀಗೆ ಮುಂದುವರೆದರೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿ ಜನರ ಜೀವಕ್ಕೆ ಕುತ್ತು ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೆಂಗಳೂರನ್ನೂ ಮೀರಿಸಿದ ಬಳ್ಳಾರಿಯ ಕಳಪೆ ಏರ್‌ಪೋರ್ಟ್ ಕ್ವಾಲಿಟಿ

ಕಳೆದ ಒಂದು ವಾರದಿಂದ ಹದಗೆಟ್ಟ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಆಗುತ್ತಿಲ್ಲ. ಈ ಒಂದು ವಾರದಲ್ಲಿ ಕನಿಷ್ಠ ಗುಣಮಟ್ಟ 78 ಇದ್ದರೆ ಗರಿಷ್ಠ 200ರ ಗಡಿ ದಾಟಿತ್ತು. ಇದು ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ. ಇಂದು ಈ ಗಾಳಿಯ ಗುಣಮಟ್ಟ 173 ಇದ್ದು, ಸ್ವಲ್ಪ ಸುಧಾರಿಸಿಕೊಂಡಿದ್ದರೂ ಈ ಹಿಂದೆ ತಜ್ಞರು ಹೇಳಿದಂತೆ ಬೆಂಗಳೂರಿನ ಗಾಳಿಯ ಗುಣಮಟ್ಟ ಹೀಗೆ ಮುಂದುವರಿದರೆ ದೆಹಲಿಯ ಪರಿಸ್ಥಿತಿ ಎದುರಾಗಬಹುದು. ಬೆಂಗಳೂರಿನಲ್ಲಿರುವ ಇತರ ಶಹರದಲ್ಲಿಯೂ ಗುಣಮಟ್ಟದ ಗಾಳಿಯ ಸಮಸ್ಯೆ ಎದುರಾಗಿದ್ದು, ಬಳ್ಳಾರಿಯಲ್ಲಂತೂ 224ರ ಮಟ್ಟಿಗೆ ಏರ್ ಕ್ವಾಲಿಟಿ ಹಾಳಾಗಿತ್ತು. ಇಂದು 197ರಲ್ಲಿ ಬಳ್ಳಾರಿಯ ಗಾಳಿಯ ಗುಣಮಟ್ಟ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಜನರ ಆರೋಗ್ಯದ ಮೇಲೆ ನೇರ ಪರಿಣಾಮ

ರಾಜ್ಯದೆಲ್ಲೆಡೆ ನಡೆಯುತ್ತಿರುವ ಶೀತದ ಪರಿಣಾಮ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 87ಕ್ಕೆ ತಲುಪಿದ್ದು, PM10 ಪ್ರಮಾಣ 113ಕ್ಕೆ ಇಳಿದಿದೆ. ಈ ಎರಡರಿಂದಲೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಭಯ ಹೆಚ್ಚಾಗುತ್ತಿದೆ, ಜನರು WHO ಮಾರ್ಗಸೂಚಿಯನ್ನು ಪಾಲಿಸುವಂತೆ ಸಲಹೆ ನೀಡುತ್ತಾರೆ.

ಇದನ್ನೂ ಓದಿ ಬೆಂಗಳೂರಿಗರೇ ಮನೆಯಿಂದ ಹೊರ ಬರುವ ಮುನ್ನ ಎಚ್ಚರ! ಚಳಿಯ ಜೊತೆ ಕಳಪೆ ಏರ್ ಕ್ವಾಲಿಟಿ ನಿಮ್ಮ ಉಸಿರಿಗೆ ಮುಳುವಾದೀತು

ರಾಜ್ಯದ ಇತರೆಡೆ ಇಂದಿನ ಗಾಳಿಯ ಗುಣಮಟ್ಟ (ಏರ್ ಗುಣಮಟ್ಟ ಸೂಚ್ಯಂಕ):

  • ಬೆಂಗಳೂರು – 173
  • ಮಂಗಳೂರು – 111
  • ಮೈಸೂರು – 126
  • ಬೆಳಗಾವಿ – 154
  • ಕಲಬುರ್ಗಿ – 68
  • ಶಿವಮೊಗ್ಗ – 81
  • ಬಳ್ಳಾರಿ – 197
  • ಹುಬ್ಬಳ್ಳಿ- 91
  • ಉಡುಪಿ – 88
  • ವಿಜಯಪುರ – 153

ಗಾಳಿಯ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ ಗುಣ ಮಟ್ಟದ ಗಾಳಿಯು- 0-50, ಮಧ್ಯಮ – 50-100, ಕಳಪೆ – 100-150, ಅನಾರೋಗ್ಯಕರ – 150-200, ಗಂಭೀರ – 200 – 300 ಹಾಗೂ ಅಪಾಯಕಾರಿ ಗುಣ ಮಟ್ಟದ ಗಾಳಿಯು 300 -500+ ಇರುತ್ತದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *