ಹೃದಯ ಸಂಬಂಧಿ ರೋಗಕ್ಕೂ ಆಹ್ವಾನ ನೀಡಬಹುದು ಬೆಂಗಳೂರಿನ ಏರ್ ಕ್ವಾಲಿಟಿ!
ಬೆಂಗಳೂರು, ಡಿಸೆಂಬರ್ 21:ರಾಜ್ಯದ ಹಲವೆಡೆ ಗಾಳಿಯ ಗುಣಮಟ್ಟ (ಬೆಂಗಳೂರು ವಾಯು ಗುಣಮಟ್ಟ) ,ಹದಗೆಟ್ಟಿದೆ. ಬೆಂಗಳೂರಿನಲ್ಲಂತೂ ಏರ್ ಕ್ವಾಲಿಟಿ ಪಾತಾಳಕ್ಕಿಳಿದಿದೆ. ಕಳೆದ ಹಲವು ದಿನಗಳಿಂದ 170 ರಿಂದ 200ರವೆಗೂ ಏರಿಳಿತ ಕಾಣುತ್ತಿರುವ ಗುಣಮಟ್ಟ ವಾಯು ಮಾಲಿನ್ಯ, ಇಂದೂ ಸಹ 190ಕ್ಕೆ ತಲುಪಿದೆ. ವಾಯುಮಾಲಿನ್ಯದ ಪ್ರಮಾಣವೂ ಹೆಚ್ಚಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಅನಾರೋಗ್ಯ ಉಂಟು ಮಾಡಬಹುದು ಬೆಂಗಳೂರಿನ ಗಾಳಿ
ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 112ಕ್ಕೆ ತಲುಪಿದ್ದು, PM10 ಪ್ರಮಾಣ 155ಕ್ಕೆ ಇಳಿದಿದೆ. ರಾಜ್ಯದೆಲ್ಲೆಡೆ ನಡೆಯುತ್ತಿರುವ ಶೀತದ ಪರಿಣಾಮ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಕಳೆದ ನಾಲ್ಕು ವರ್ಷದ ಈ ವರ್ಷವೇ ಬೆಂಗಳೂರಿನ ಹವೆ ಇಷ್ಟರ ಮಟ್ಟಿಗೆ ಹದಗೆಟ್ಟಿದೆ.
ಮುನ್ನೆಚ್ಚರಿಕೆ ವಹಿಸಲು ಸೂಚನೆ
ನಿನ್ನೆ ಬೆಳಗ್ಗೆ 7 ಗಂಟೆಗೆ 200 ರಷ್ಟಿದ್ದ ಏರ್ ಕ್ವಾಲಿಟಿ ಸಧ್ಯಕ್ಕೆ 190ಕ್ಕಿಳಿದಿದೆ. ಈ ಎರಡು ದಿನಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಹೆಚ್ಚಿನ ಏರಿಳಿತವಾಗುತ್ತಿದ್ದರೆ, ಪರಿಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆಯಿದೆ. 150ಕ್ಕಿಂತ ಹೆಚ್ಚು ಜಾಸ್ತಿ ಹದಗೆಟ್ಟ ಗಾಳಿಯ ಸೇವನೆಯಿಂದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಎದುರಾಗುತ್ತವೆ, ಮನೆಯಿಂದ ಹೊರ ಬೀಳುವಾಗ ಆದಷ್ಟು ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತದೆ.
ರಾಜ್ಯದ ಇತರೆಡೆ ಇಂದಿನ ಗಾಳಿಯ ಗುಣಮಟ್ಟ (ಏರ್ ಗುಣಮಟ್ಟ ಸೂಚ್ಯಂಕ):
- ಬೆಂಗಳೂರು –196
- ಮಂಗಳೂರು – 157
- ಮೈಸೂರು – 112
- ಬೆಳಗಾವಿ – 163
- ಕಲಬುರ್ಗಿ – 137
- ಶಿವಮೊಗ್ಗ – 84
- ಬಳ್ಳಾರಿ – 196
- ಹುಬ್ಬಳ್ಳಿ- 97
- ಉಡುಪಿ – 124
- ವಿಜಯಪುರ –96
ಗಾಳಿಯ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.